ರೋಜರ್ ಬಿನ್ನಿ
ರೋಜರ್ ಬಿನ್ನಿ

'ಪ್ರತಿಯೊಬ್ಬ ನಾಯಕನ ಕಾರ್ಯನಿರ್ವಹಣೆ ವಿಭಿನ್ನವಾಗಿರುತ್ತದೆ; ಹೋಲಿಕೆ ಸಾಧ್ಯವಿಲ್ಲ: ಬಿಸಿಸಿಐ ಮುಖ್ಯಸ್ಥ ಬಿನ್ನಿ

ಹಾಲಿ ನಾಯಕ ರೋಹಿತ್ ಶರ್ಮಾ ನಾಯಕತ್ವವನ್ನು ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಂತಹ ನಾಯಕರೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.
Published on

ಚೆನ್ನೈ: ಹಾಲಿ ನಾಯಕ ರೋಹಿತ್ ಶರ್ಮಾ ನಾಯಕತ್ವವನ್ನು ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಂತಹ ನಾಯಕರೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.

ಪ್ರತಿಯೊಬ್ಬ ನಾಯಕನೂ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ವಿಭಿನ್ನ ಮಾರ್ಗವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

'ರೋಹಿತ್ ಒಬ್ಬ ಅನುಭವಿ ಆಟಗಾರ. ಅವರು ಹಲವು ಪಂದ್ಯಗಳನ್ನು ಆಡಿದ್ದಾರೆ. ಪ್ರತಿಯೊಬ್ಬರ ವಿಧಾನವೂ ವಿಭಿನ್ನವಾಗಿದೆ. ಧೋನಿ ನಾಯಕತ್ವ ಸಂಪೂರ್ಣವಾಗಿ ವಿಭಿನ್ನವಾಗಿದೆ. ನೀವು ಧೋನಿಯನ್ನು ಕಪಿಲ್ ಅಥವಾ ಗವಾಸ್ಕರ್ ಅವರಿಗೆ ಹೋಲಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಹೀಗೆ ವಿಭಿನ್ನ ರೀತಿ ಹೊಂದಿದ್ದಾರೆ ಎಂದರು.

ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ)ಯ 90ನೇ ವಾರ್ಷಿಕ ದಿನದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ತಂಡದ ಆರಂಭಿಕರು ಉತ್ತಮ ಆರಂಭವನ್ನು ಒದಗಿಸಿದರೆ ತಂಡವು ಪಂದ್ಯಗಳನ್ನು ಗೆಲ್ಲಲು ಉತ್ತಮ ಅವಕಾಶವಿದೆ ಎಂದು ಹೇಳಿದರು.

'ಪವರ್‌ಪ್ಲೇ ಪ್ರಮುಖವಾದದ್ದು ಓಪನರ್‌ಗಳು ನಮಗೆ ಬಲವಾದ ಆರಂಭವನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ. ನಾವು ಉತ್ತಮ ಆರಂಭವನ್ನು ಪಡೆದರೆ, ಗೆಲ್ಲಲು ಉತ್ತಮ ಅವಕಾಶವಿದೆ. ಇನ್ನು ಯಾವುದೇ ತಂಡವು ಆರಾಮದಾಯಕವಾದ ಚೇಸಿಂಗ್ ಮಾಡಲು ಇಚ್ಛಿಸುವುದಿಲ್ಲ. ಹೆಚ್ಚಿನ ತಂಡಗಳು ಮೊತ್ತವನ್ನು ಬೆನ್ನಟ್ಟಲು ಬಯಸುತ್ತವೆ ಎಂದರು.

ಟೀಂ ಇಂಡಿಯಾದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅವರಂತಹ ಹಲವಾರು ಭಾರತೀಯ ಆಟಗಾರರು ಗಾಯಗಳಿಂದ ಬಳಲುತ್ತಿರುವ ಬಗ್ಗೆ ಉತ್ತರಿಸಿದ ಅವರು, ಬುಮ್ರಾ ಏಕೆ ಗಾಯಗೊಂಡಿದ್ದಾರೆ ಎಂಬುದನ್ನು ತಿಳಿಯಲು ಬಯಸುತ್ತೇವೆ. ಗಾಯಗಳಾಗಿವುದನ್ನು ನಾವು ತಡೆಯಲು ಸಾಧ್ಯವಿಲ್ಲ. ಆಟಗಾರರಿಗೆ ಓವರ್‌ಲೋಡ್ ಆಗಿದೆಯೇ, ಆಟಗಾರರು ಫಿಟ್ ಇಲ್ಲದಿದ್ದರೆ ಅವರ ವ್ಯಾಯಾಮವನ್ನು ಬದಲಾಯಿಸಬೇಕೇ ಎಂದು ನಾವು ಪತ್ತೆಹಚ್ಚಬೇಕು. ತರಬೇತಿಯ ಸಮಯದಲ್ಲಿ ಬಹಳಷ್ಟು ಆಟಗಾರರು ಗಾಯಗೊಳ್ಳುತ್ತಿದ್ದಾರೆ ಇದು ಒಳ್ಳೆಯದಲ್ಲ ಎಂದು ಅವರು ಹೇಳಿದರು.

ಮುಂದಿನ ವರ್ಷದಿಂದ ಪ್ರಾರಂಭವಾಗಲಿರುವ ಮಹಿಳೆಯರ ಐಪಿಎಲ್ ಕುರಿತು ಉತ್ತರಿಸಿದ ಬಿನ್ನಿ, ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಫ್ರಾಂಚೈಸಿಗಳು ಕೂಡ ಬಂದಿವೆ. ನಾಲ್ವರ ಬದಲಿಗೆ ಐವರು ವಿದೇಶಿಯರನ್ನು ಆಯ್ಕೆ ಮಾಡುವ ಆಲೋಚನೆ ಇದೆ. ಅದು ಐಪಿಎಲ್‌ಗೆ ಹೆಚ್ಚುವರಿ ಸೇರ್ಪಡೆಯಾಗಲಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮಗೊಳಿಸಿಲ್ಲ. ಇದು ಜನವರಿಯಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com