ರಿಷಬ್ ಪಂತ್ ರನ್ನು ಭಾರತ ಸರಿಯಾಗಿ ಬಳಸಿಕೊಂಡಿಲ್ಲ: ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಶ್ನಿಸಿದ ಮೈಕಲ್ ವಾನ್

ಟಿ20 ವಿಶ್ವಕಪ್‌ನಲ್ಲಿ ಪ್ರತಿಭಾವಂತ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಭಾರತೀಯ ಚಿಂತಕರ ಚಾವಡಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಮೈಕಲ್ ವಾನ್-ರೋಹಿತ್ ಶರ್ಮಾ
ಮೈಕಲ್ ವಾನ್-ರೋಹಿತ್ ಶರ್ಮಾ
Updated on

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಪ್ರತಿಭಾವಂತ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಭಾರತೀಯ ಚಿಂತಕರ ಚಾವಡಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. 

ದಿನೇಶ್ ಕಾರ್ತಿಕ್‌ ಬದಲಿಗೆ ಎಡಗೈ ಬ್ಯಾಟ್ಸ್‌ಮನ್ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ಸೆಮಿ-ಫೈನಲ್‌ಗೆ ಆಯ್ಕೆಯಾಗಿದ್ದರು. ಹೀಗಾಗಿ ಅವರು ಮಿಡಲ್ ಓವರ್‌ಗಳಲ್ಲಿ ಇಂಗ್ಲೆಂಡ್ ಸ್ಪಿನ್ನರ್‌ಗಳ ಮೇಲೆ ದಾಳಿ ಮಾಡಬಹುದಿತ್ತು. ಆದರೆ ಪಂತ್ ಕ್ರೀಸ್‌ಗೆ ಬರುವ ಮೊದಲೇ 19ನೇ ಓವರ್‌ನಲ್ಲಿ ಆದಿಲ್ ರಶೀದ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಓವರ್‌ಗಳು ಪೂರ್ಣಗೊಂಡಿದ್ದವು. 

ರಿಷಬ್ ಪಂತ್‌ನಂತಹ ಪ್ರತಿಭಾವಂತ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಸಹ ಬಳಸಲಿಲ್ಲ. ಯುವ ಬ್ಯಾಟ್ಸ್‌ಮನ್‌ಗೆ ಕ್ರಮಾಂಕದ ಮೇಲ್ಭಾಗದಲ್ಲಿ ಬ್ಯಾಟ್ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಆಡುವ 11ರಲ್ಲಿ ಆಲ್‌ರೌಂಡರ್‌ಗಳ ಕೊರತೆಯನ್ನು ಉಲ್ಲೇಖಿಸಿದ ವಾನ್, 'ಭಾರತಕ್ಕೆ ಕೇವಲ ಐದು ಬೌಲಿಂಗ್ ಆಯ್ಕೆಗಳಿವೆ. 10-15 ವರ್ಷಗಳ ಹಿಂದೆ ಅವರ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿರುವ ಪ್ರತಿಯೊಬ್ಬರೂ ಬೌಲಿಂಗ್ ಮಾಡುತ್ತಿದ್ದರು. ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಯುವರಾಜ್ ಸಿಂಗ್ ಮತ್ತು ಸೌರವ್ ಗಂಗೂಲಿ ಕೂಡ ಉಪಯುಕ್ತ ಬೌಲರ್‌ಗಳಾಗಿದ್ದರು. ಈಗ ಯಾವುದೇ ಬ್ಯಾಟ್ಸ್‌ಮನ್ ಬೌಲ್ ಮಾಡುವುದಿಲ್ಲ ಮತ್ತು ನಾಯಕನ ಆಯ್ಕೆಗಳು ಸೀಮಿತವಾಗಿವೆ ಎಂದರು.

ರೋಹಿತ್ ಶರ್ಮಾ ಅವರ ತಂಡದ ಆಯ್ಕೆ ಮತ್ತು ನಾಯಕತ್ವವನ್ನು ವಾನ್ ಪ್ರಶ್ನಿಸಿದ್ದಾರೆ. T20 ಕ್ರಿಕೆಟ್‌ನಲ್ಲಿ ಸ್ಪಿನ್ನರ್ ಗಳು ಪ್ರಮುಖ ಪಾತ್ರವಹಿಸುತ್ತಾರೆ. ಭಾರತವು ಲೆಗ್ ಸ್ಪಿನ್ನರ್‌ಗಳನ್ನು ಹೊಂದಿದೆ ಆದರೆ ಅವರು ಎಲ್ಲಿದ್ದಾರೆ? ಇನ್ನು ಎಡಗೈ ವೇಗದ ಬೌಲರ್ ಅರ್ಷ್‌ದೀಪ್ ಸಿಂಗ್ ತಂಡದಲ್ಲಿದ್ದಾರೆ. ಯಾರು ವಿಕೆಟ್ ಗಳನ್ನು ಪಡೆಯಬಹುದು. ಬಲಗೈ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಅರ್ಷ್‌ದೀಪ್ ಏನು ಮಾಡುತ್ತಾನೆ? ಇನ್ನು ಭುವನೇಶ್ವರ್ ಕುಮಾರ್‌ಗೆ ಮೊದಲ ಓವರ್ ನೀಡಲಾಯಿತು. ಇದರ ಪ್ರಯೋಜನ ಪಡೆದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಅತ್ಯುತ್ತಮ ಓಪನಿಂಗ್ ಮಾಡಿದರು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com