2ನೇ ಟಿ20 ಪಂದ್ಯ: ಟಿ20 ವಿಶ್ವಕಪ್ ಸೆಮೀಸ್ ಸೋಲಿನ ಕಹಿ ಬಳಿಕ ಗೆಲುವಿನ ಲಯಕ್ಕೆ ಮರಳಿದ ಟೀಂ ಇಂಡಿಯಾ!

ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ

ಮೌಂಟ್ ಮೌಂಗನುಯಿ: ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. 

ಮೌಂಟ್ ಮೌಂಗನುಯಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ ಓವರ್ ನಲ್ಲಿ 191 ರನ್ ಪೇರಿಸಿತ್ತು. ಅಲ್ಲದೆ ನ್ಯೂಜಿಲ್ಯಾಂಡ್ ಗೆ 192 ರನ್ ಗಳ ಮೊತ್ತದ ಬೃಹತ್ ಮೊತ್ತ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಗೆ ದೀಪಕ್ ಹೂಡಾ ಮಾರಕವಾದರು. ಇನ್ನು 126 ರನ್ ಗಳಿಗೆ ನ್ಯೂಜಿಲ್ಯಾಂಡ್ ಆಲೌಟ್ ಆಗುವ ಮೂಲಕ ಭಾರತಕ್ಕೆ ಶರಣಾದರು.

ನ್ಯೂಜಿಲ್ಯಾಂಡ್ ಪರ ಬ್ಯಾಟಿಂಗ್ ನಲ್ಲಿ ಡೆವೊನ್ ಕಾನ್ವೇ 25, ಕೇನ್ ವಿಲಿಯಮ್ಸನ್ 61, ಗ್ಲೇನ್ ಪಿಲಿಪ್ಸ್ 12 ಮತ್ತು ಮಿಚೆಲ್ 10 ರನ್ ಪೇರಿಸಿದ್ದಾರೆ. ಭಾರತದ ಪರ ಬೌಲಿಂಗ್ ನಲ್ಲಿ ದೀಪಕ್ ಹೂಡಾ 4, ಮೊಹಮ್ಮದ್ ಸಿರಾಜ್ ಮತ್ತು ಚಹಾಲ್ ತಲಾ 2 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದಿದ್ದಾರೆ.

ಟೀಂ ಇಂಡಿಯಾ ಪರ ಇಶಾನ್ ಕಿಶನ್ 36 ರನ್ ಪೇರಿಸಿ ಉತ್ತಮ ಓಪನಿಂಗ್ ನೀಡಿದರು. ಆದರೆ ರಿಷಬ್ ಪಂತ್ 6 ರನ್ ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ತಂಡ ಬೃಹತ್ ಪೇರಿಸಲು ನೆರವಾದರು. ಸೂರ್ಯಕುಮಾರ್ 51 ಎಸೆತಗಳಲ್ಲಿ 111 ರನ್ ಪೇರಿಸಿ ಅಜೇಯರಾಗಿ ಉಳಿದರು. ಶ್ರೇಯಸ್ ಅಯ್ಯರ್ 13 ಹಾಗೂ ನಾಯಕ ಹಾರ್ದಿಕ್ ಪಾಂಡ್ಯಾ 13 ರನ್ ಪೇರಿಸಿ ಔಟಾದರು. 

ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಟೀಮ್ ಸೌಥಿ 3, ಫರ್ಗ್ಯೂಸನ್ 2 ಮತ್ತು ಸೋಧಿ 1 ವಿಕೆಟ್ ಪಡೆದಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com