ಟಿ20 ವಿಶ್ವಕಪ್: ಜಿಂಬಾಬ್ವೆ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿ; ಉಭಯ ತಂಡಗಳಿಗೂ ತಲಾ 1 ಅಂಕ!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಯಾವುದೇ ಫಲತಾಂಶವಿಲ್ಲ ಬಂದಿಲ್ಲ.
ದಕ್ಷಿಣ ಆಫ್ರಿಕಾ ತಂಡ
ದಕ್ಷಿಣ ಆಫ್ರಿಕಾ ತಂಡ

ಹೋಬರ್ಟ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಯಾವುದೇ ಫಲತಾಂಶವಿಲ್ಲ ಬಂದಿಲ್ಲ.

ಹೋಬರ್ಟ್ ನಲ್ಲಿ ನಡೆದ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ 9 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 79 ರನ್ ಬಾರಿಸಿತ್ತು. ನಂತರ ಮತ್ತೆ ಮಳೆಯಾಗಿದ್ದರಿಂದ ದಕ್ಷಿಣ ಆಫ್ರಿಕಾಗೆ 7 ಓವರ್ ಗಳಲ್ಲಿ 64 ರನ್ ಗುರಿ ನೀಡಲಾಯಿತು. 

64 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 3 ಓವರ್ ಗಳಲ್ಲಿ 51 ರನ್ ಬಾರಿಸಿತ್ತು. ಈ ವೇಳೆ ಮತ್ತೆ ಮಳೆ ಬೀಳಲು ಶುರು ಮಾಡಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಮತ್ತೆ ಪಂದ್ಯ ಆರಂಭವಾಗದ್ದರಿಂದ ಫಲಿತಾಂಶ ಬಂದಿಲ್ಲ. 

ಇನ್ನು ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗಿದ್ದು ಗ್ರೂಪ್ 2 ಅಂಕಪಟ್ಟಿಯಲ್ಲಿ ಆಫ್ರಿಕಾ 3ನೇ ಹಾಗೂ ಜಿಂಬಾಬ್ವೆ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಬಾಂಗ್ಲಾದೇಶ ಮೊದಲ ಸ್ಥಾನದಲ್ಲಿದ್ದು ನಿನ್ನೆ ಪಾಕ್ ವಿರುದ್ಧ ವಿರೋಚಿತ ಗೆಲುವು ಸಾಧಿಸಿರುವ ಟೀಂ ಇಂಡಿಯಾ 2ನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com