ರಾಕೆಟ್ ಥ್ರೋ: ಕೇವಲ 5 ಸೆಕೆಂಡ್ ನಲ್ಲಿ ರನ್ಔಟ್ ಮಾಡಿದ ಜಡೇಜಾ; ವಿಡಿಯೋ ವೈರಲ್!

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ನಲ್ಲಿ ಭಾರತ ಅಜೇಯ ಓಟವನ್ನು ಮುಂದುವರೆಸಿದೆ. ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ವೇಗದ ಥ್ರೋ ಮೂಲಕ ರನೌಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರನ್ಔಟ್ ದೃಶ್ಯ

ನಿನ್ನೆ ನಡೆದ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 40 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಜಡೇಜಾ ಅದ್ಭುತ ಫೀಲ್ಡಿಂಗ್ ಪ್ರದರ್ಶನ ನೀಡಿದ್ದಾರೆ. ಇನ್ನಿಂಗ್ಸ್ ನ ಆರನೇ ಓವರ್ ನ ಕೊನೆಯ ಎಸೆತದಲ್ಲಿ ಹಾಂಗ್ ಕಾಂಗ್ ಬ್ಯಾಟ್ಸ್ ಮನ್ ನಿಜಾಕತ್ ಖಾನ್ ಚೆಂಡನ್ನು ಬ್ಯಾಕ್ ವರ್ಡ್ ಪಾಯಿಂಟ್ ಕಡೆಗೆ ಬಾರಿಸಿದರು. 

ಈ ವೇಳೆ ರನ್ ತೆಗೆದುಕೊಳ್ಳಲು ಮುಂದಾದಾಗ ರವೀಂದ್ರ ಜಡೇಜಾ ಸುಮಾರು 23 ಮೀಟರ್ ದೂರದಿಂದ ಚೆಂಡನ್ನು ವಿಕೆಟ್ ಎಸೆದರು. ತುಸು ದೂರ ಓಡಿ ಮತ್ತೆ ಹಿಂದಕ್ಕೆ ಕ್ರೀಸ್ ಗೆ ಬರಲು ನಿಜಾಕತ್ ಯತ್ನಿಸಿದರು. ಆದರೆ ಜಡೇಜಾರ ವೇಗದ ಥ್ರೂ ಅವರನ್ನು ರನ್ಔಟ್ ಮಾಡಿದೆ. ಇದನ್ನು ನೋಡಿದ ನಿಜಾಕತ್ ಅಚ್ಚರಿಯಿಂದ ನೋಡಿ ಪೆವಿಲಿಯನ್ ಕಡೆ ತೆರಳಿದರು. 

ಗ್ರೂಪ್ ಹಂತದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲ್ಲುವ ಮೂಲಕ ಸೂಪರ್ 4ಗೆ ಅರ್ಹತೆ ಪಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com