ಏಷ್ಯಾಕಪ್ 2022: ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್, ದಾಖಲೆ ಬರೆದ ಭಾರತ ತಂಡ
ದುಬೈ; ಏಷ್ಯಾಕಪ್ 2022 ಕ್ರಿಕೆಟ್ ಟೂರ್ನಿಯ ಇಂದಿನ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಭಾರತ ತಂಡ ದಾಖಲೆಯೊಂದನ್ನು ನಿರ್ಮಿಸಿದೆ.
ಹೌದು.. ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192 ರನ್ ಗಳ ಬೃಹತ್ ರನ್ ಪೇರಿಸಿದ್ದು, ಈ ಮೊತ್ತದ ಮೂಲಕ ಭಾರತ ತಂಡ ದಾಖಲೆಯೊಂದನ್ನು ನಿರ್ಮಿಸಿದೆ.
Most runs in death overs (16-20) by India in T20Is
86 v WI Kolkata 2022
80 v Eng Durban 2007
78 v HK Dubai 2022 *
77 v Aus Bengaluru 2019
ಆಂತಾರಾಷ್ಟ್ರೀಯ ಟಿ20 ಪಂದ್ಯಗಳ ಅಂತಿಮ ಹಂತದ ಓವರ್ (ಡೆತ್ ಓವರ್)ಗಳಲ್ಲಿ ಗರಿಷ್ಠ ರನ್ ಗಳಿಸಿದ ಪಟ್ಟಿಯಲ್ಲಿ ಇಂದಿನ ಭಾರತದ ಇನ್ನಿಂಗ್ಸ್ ಸ್ಥಾನ ಪಡೆದಿದೆ. ಇಂದಿನ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ನ 16 ರಿಂದ 20ನೇ ಓವರ್ ನ ಐದು ಓವರ್ ಗಳಲ್ಲಿ ಭಾರತ ತಂಡ ಬರೊಬ್ಬರಿ 78 ರನ್ ಕಲೆ ಹಾಕಿತು. ಇದು ಭಾರತ ಪರ ಡೆತ್ ಓವರ್ ನಲ್ಲಿ ದಾಖಲಾದ 3ನೇ ಗರಿಷ್ಠ ರನ್ ಗಳಿಕೆಯಾಗಿದೆ.
ಈ ಹಿಂದೆ ಇದೇ ವರ್ಷ ಅಂದರೆ 2022ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ 86ರನ್ ಕಲೆಹಾಕಿತ್ತು. ಇದು ಈ ವರೆಗೆ ಭಾರತ ಡೆತ್ ಓವರ್ ನಲ್ಲಿ ಕಲೆಹಾಕಿದ ಗರಿಷ್ಠ ರನ್ ಗಳಿಕೆಯಾಗಿದೆ. ಇದಕ್ಕೂ ಮೊದಲು 2007ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 80ರನ್ ಕಲೆಹಾಕಿತ್ತು. ಇದು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಇಂದಿನ ಪಂದ್ಯವಿದ್ದು, ನಾಲ್ಕನೇ ಸ್ಥಾನದಲ್ಲಿ 2019ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಆಸ್ಚ್ರೇಲಿಯಾ 77ರನ್ ಗಳಿಸಿತ್ತು. ಇದು 4ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ