ಏಷ್ಯಾ ಕಪ್: ಭಾರತ-ಪಾಕ್ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜ ಬೀಸುತ್ತಿದ್ದಳು - ಶಾಹಿದ್ ಅಫ್ರಿದಿ

ಪಾಕಿಸ್ತಾನದ ಮಾಜಿ ನಾಯಕ ಮತ್ತು ವಿಶ್ವದ ಅತ್ಯಂತ ಮಾರಕ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶಾಹಿದ್ ಅಫ್ರಿದಿ ವಿವಾದಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...
ಶಾಹಿದ್ ಅಫ್ರಿದಿ
ಶಾಹಿದ್ ಅಫ್ರಿದಿ
Updated on

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ನಾಯಕ ಮತ್ತು ವಿಶ್ವದ ಅತ್ಯಂತ ಮಾರಕ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶಾಹಿದ್ ಅಫ್ರಿದಿ ವಿವಾದಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಇದೀಗ ಅವರು ಟಿವಿ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ.

ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2022ರ ಪಂದ್ಯದಲ್ಲಿ ಪಾಕಿಸ್ತಾನದ ಧ್ವಜಕ್ಕಿಂತ ತನ್ನ ಮಗಳು ಭಾರತದ ಧ್ವಜವನ್ನು ಹಿಡಿದು ಬೀಸಿದಳು ಎಂದು ಆಫ್ರಿದಿ ಬಹಿರಂಗಪಡಿಸಿದ್ದಾರೆ. 

ಪಾಕಿಸ್ತಾನದ ಟೆಲಿವಿಷನ್ ಚಾನೆಲ್‌ನಲ್ಲಿ ಶಾಹಿದ್ ಅಫ್ರಿದಿ ಅವರು ಸ್ಟೇಡಿಯಂನಲ್ಲಿ ಕೇವಲ 10 ಪ್ರತಿಶತದಷ್ಟು ಪಾಕಿಸ್ತಾನಿ ಅಭಿಮಾನಿಗಳಿದ್ದರೆ, ಶೇಕಡಾ 90 ರಷ್ಟು ಅಭಿಮಾನಿಗಳು ಭಾರತದವರಿದ್ದರು.  ಅಲ್ಲಿ ಹೆಚ್ಚು ಭಾರತೀಯ ಅಭಿಮಾನಿಗಳಿದ್ದರು ಎಂದು ತಿಳಿದು ಬಂದಿದೆ ಎಂದು ಟಿವಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

“ಸ್ಟೇಡಿಯಂನಲ್ಲಿ ಕೇವಲ ಶೇ.10 ರಷ್ಟು ಪಾಕಿಸ್ತಾನಿ ಅಭಿಮಾನಿಗಳು ಮತ್ತು ಉಳಿದವರು ಭಾರತೀಯ ಅಭಿಮಾನಿಗಳು ಎಂದು ನನ್ನ ಹೆಂಡತಿ ನನಗೆ ಹೇಳಿದರು. ಅಲ್ಲಿ ಪಾಕಿಸ್ತಾನಿ ಧ್ವಜಗಳು ಲಭ್ಯವಿರಲಿಲ್ಲ. ಆದ್ದರಿಂದ ನನ್ನ ಕಿರಿಯ ಮಗಳು ಭಾರತದ ಧ್ವಜವನ್ನು ಬೀಸುತ್ತಿದ್ದಳು. ನಾನು ಆ ವೀಡಿಯೊವನ್ನು ಸ್ವೀಕರಿಸಿದ್ದೇನೆ. ಆದರೆ ನಾನು ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿರಲಿಲ್ಲ” ಎಂದು ಅವರು ತಿಳಿಸಿದ್ದಾರೆ.

ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿನ ನಂತರ, ಅಫ್ರಿದಿ ಬಾಬರ್ ಅಜಮ್ ಅವರನ್ನು ಅಭಿನಂದಿಸಿದರು ಮತ್ತು ಉಭಯ ದೇಶಗಳ ನಡುವಿನ ಪಂದ್ಯ ಶ್ರೇಷ್ಠ ಕ್ರೀಡಾಕೂಟ ಎಂದು ಕರೆದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com