ದಿನೇಶ್ ಕಾರ್ತಿಕ್‌ಗೆ ಬ್ಯಾಟಿಂಗ್‌ ಮಾಡಲು ಹೆಚ್ಚಿನ ಅವಕಾಶ ಸಿಗಬೇಕು ಎಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ತಂಡವು ಕಣಕ್ಕಿಳಿಯುವ ಮುನ್ನ ವಿಕೆಟ್‌ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌ ಅವರಿಗೆ ಬ್ಯಾಟಿಂಗ್‌ ಮಾಡಲು ಹೆಚ್ಚಿನ ಅವಕಾಶ ನೀಡಲು ಬಯಸಿರುವುದಾಗಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಹೈದರಾಬಾದ್: ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ತಂಡವು ಕಣಕ್ಕಿಳಿಯುವ ಮುನ್ನ ವಿಕೆಟ್‌ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌ ಅವರಿಗೆ ಬ್ಯಾಟಿಂಗ್‌ ಮಾಡಲು ಹೆಚ್ಚಿನ ಅವಕಾಶ ನೀಡಲು ಬಯಸಿರುವುದಾಗಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಟೀಂ ಇಂಡಿಯಾದ ಆಡುವ 11ರ ಬಳಗದಲ್ಲಿ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್‌ ಒಬ್ಬರ ಬದಲಿಗೆ ಮತ್ತೊಬ್ಬರಿಗೆ ಸ್ಥಾನ ನೀಡಲಾಗುತ್ತಿದೆ.  ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಬ್ಬರು ವಿಕೆಟ್ ಕೀಪರ್​ಗಳು ತಂಡದಲ್ಲಿ ಸ್ಥಾನ ಪಡೆದಿದ್ದರು. ಒಂದು ಕಡೆ ರಿಷಭ್ ಪಂತ್ ಇದ್ದರೆ, ಮತ್ತೊಂದು ದಿನೇಶ್ ಕಾರ್ತಿಕ್ ಇದ್ದರು.

ಏಷ್ಯಾಕಪ್‌ನಲ್ಲಿ ಅನುಭವಿ ಆಟಗಾರನಿಗಿಂತ ಯುವ ಆಟಗಾರ ರಿಷಬ್‌ ಪಂತ್‌ಗೆ ಹೆಚ್ಚಿನ ಅವಕಾಶ ದೊರಕಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಸ್ಥಾನ ಪಡೆದುಕೊಂಡಿದ್ದರು. ಹೀಗಿದ್ದರೂ ಬ್ಯಾಂಟಿಂಗ್‌ಗೆ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ.

'ವಿಶ್ವಕಪ್‌ಗೆ ಮುನ್ನ ಈ ಇಬ್ಬರೂ ಆಟಗಾರರು (ಪಂತ್ ಮತ್ತು ಕಾರ್ತಿಕ್) ಹಲವಾರು ಪಂದ್ಯಗಳನ್ನು ಆಡಬೇಕೆಂದು ನಾನು ಬಯಸುತ್ತೇನೆ. ನಾವು ಏಷ್ಯಾಕಪ್‌ ಆಡಲು ಹೋದಾಗ ಈ ಇಬ್ಬರೂ ಕೆಲವು ಪಂದ್ಯಗಳಲ್ಲಿ ಆಡಲು ಕಣದಲ್ಲಿದ್ದರು' ಎಂದು ನಾಯಕ ರೋಹಿತ್ ಶರ್ಮಾ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಭಾರತ ಗೆದ್ದುಕೊಂಡ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆದರೆ, ದಿನೇಶ್ ಕಾರ್ತಿಕ್ ಅವರಿಗೆ ಬ್ಯಾಟಿಂಗ್‌ ಮಾಡಲು ಇನ್ನು ಸ್ವಲ್ಪ ಹೆಚ್ಚಿನ ಅವಕಾಶ ಸಿಗಬೇಕು ಎಂದು  ದಿನೇಶ್‌ಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದು ನನಗೆ ಅನಿಸುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ಅವರಿಗೆ ಹೆಚ್ಚು ಬ್ಯಾಟ್ ಮಾಡಲು ಆಗಲಿಲ್ಲ. ಬಹುಶಃ ಮೂರು ಚೆಂಡುಗಳನ್ನು ಮಾತ್ರ ಅವರು ಎದುರಿಸಿದ್ದಾರೆ. ಹೀಗಾಗಿ ಅವರಿಗೆ ಬ್ಯಾಟಿಂಗ್ ಮಾಡಲು ಸಿಗುತ್ತಿರುವ ಸಮಯ ಸಾಲುತ್ತಿಲ್ಲ' ಎಂದು ರೋಹಿತ್ ತಿಳಿಸಿದರು.

ದಿನೇಶ್ ಕಾರ್ತಿಕ್ ಅವರು ಆಸ್ಟ್ರೇಲಿಯಾ ವಿರುದ್ಧ ಒಟ್ಟು ಏಳು ಎಸೆತಗಳನ್ನು ಎದುರಿಸಿದರು. ಆದರೆ ಪಂತ್ ಕೇವಲ ಒಂದು ಪಂದ್ಯವನ್ನು ಆಡಿದರೂ ಕೂಡ, ಅಲ್ಲಿ ಅವರಿಗೂ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.

'ಪಂತ್‌ಗೆ ಕೂಡ ನಿಸ್ಸಂಶಯವಾಗಿ ಆಟವಾಡುವ ಸಮಯ ಬೇಕು. ಆದರೆ, ಈ ಸರಣಿಯು ಹೇಗಿತ್ತು ಎಂಬುದನ್ನು ನೋಡುವಾಗ ಆ ಸ್ಥಿರ ಬ್ಯಾಟಿಂಗ್ ಲೈನ್‌ಅಪ್‌ಗೆ ಅಂಟಿಕೊಳ್ಳುವುದು ನನಗೆ ಮುಖ್ಯವಾಗಿತ್ತು." ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

'ಬುಧವಾರದಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಈ ವೇಳೆ ದಿನೇಶ್ ಕಾರ್ತಿಕ್ ಅಥವಾ ಪಂತ್ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡುವುದು ಪಂದ್ಯದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ' ಎಂದು ಹೇಳಿದರು.

'ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ನಾವು ಏನು ಮಾಡಲಿದ್ದೇವೆ ಎಂಬುದು ನನಗೆ ತಿಳಿದಿಲ್ಲ. ನಾವು ಅವರ ಬೌಲಿಂಗ್ ವೈಖರಿಯನ್ನು ನೋಡಬೇಕಿದೆ. ಅವರು ಯಾವ ರೀತಿಯ ಬೌಲಿಂಗ್ ಲೈನ್‌ಅಪ್‌ನೊಂದಿಗೆ ಆಡುತ್ತಾರೆ ಮತ್ತು ಅವರ ಬೌಲಿಂಗ್ ಲೈನ್‌ಅಪ್ ಅನ್ನು ನಿಭಾಯಿಸಬಲ್ಲ ಅತ್ಯುತ್ತಮ ಬ್ಯಾಟರ್ ಯಾರು ಎನ್ನುವುದನ್ನು ಅವಲಂಬಿಸಿರುತ್ತದೆ' ರೋಹಿತ್ ಶರ್ಮಾ ತಿಳಿಸಿದರು.

'ನಾವು ನಮ್ಮ ಬ್ಯಾಟಿಂಗ್‌ನಲ್ಲಿ  ಹೊಂದಿಕೊಳ್ಳಲು ಬಯಸುತ್ತೇವೆ. ಹಾಗಾಗಿ ಪರಿಸ್ಥಿತಿಯು ನಮಗೆ ಎಡಗೈ ಆಟಗಾರ ಬೇಕು ಎಂದು ಒತ್ತಾಯಿಸಿದರೆ, ನಾವು ಎಡಗೈ ಆಟಗಾರರನ್ನು ಕರೆದುಕೊಳ್ಳುತ್ತೇವೆ. ಒಂದು ವೇಳೆ ನಮಗೆ ಬಲಗೈ ಆಟಗಾರನ ಅಗತ್ಯವಿದ್ದರೆ, ಅವರನ್ನು ತಂಡದೊಳಗೆ ಸೇರಿಸಿಕೊಳ್ಳುತ್ತೇವೆ.

ನಾವು ಇದನ್ನು ಮುಂದುವರಿಸುತ್ತೇವೆ. ಆದರೆ, ಅವರಿಬ್ಬರನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಲು ಪ್ರಯತ್ನಿಸುತ್ತೇವೆ. ವಿಶ್ವಕಪ್‌ಗೆ ಮೊದಲು ಅವರಿಗೆ ಹೆಚ್ಚಿನ ಆಟದ ಸಮಯ ಬೇಕು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ದುರದೃಷ್ಟವಶಾತ್ ತಂಡದಲ್ಲಿ ನಾವು ಕೇವಲ 11 ಆಟಗಾರರನ್ನು ಮಾತ್ರ ಆಡಿಸಬಹುದು' ಎಂದು ರೋಹಿತ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com