17 ವರ್ಷಗಳ ಬಳಿಕ ಪಾಕ್ ಪ್ರವಾಸ: ಇಂಗ್ಲೆಂಡ್ ತಂಡ ತಂಗಿದ್ದ ಹೊಟೇಲ್ ಬಳಿ ಗುಂಡಿನ ದಾಳಿ, ಆತಂಕ ಸೃಷ್ಟಿ!
ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮುಲ್ತಾನ್‌ನಲ್ಲಿ ಎರಡನೇ ಟೆಸ್ಟ್ ಗೆ ತಯಾರಿ ನಡೆಸುತ್ತಿವೆ. ಆದರೆ ಅದಕ್ಕೂ ಮೊದಲು ಆಘಾತಕಾರಿ ಘಟನೆಯೊಂದು ಮುನ್ನೆಲೆಗೆ ಬಂದಿದ್ದು ಇಂದು ಬೆಳಗ್ಗೆ ಇಂಗ್ಲೆಂಡ್ ತಂಡದ ಹೋಟೆಲ್ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ.
Published: 09th December 2022 12:35 AM | Last Updated: 09th December 2022 12:35 AM | A+A A-

ಇಂಗ್ಲೆಂಡ್ ತಂಡ
ಮುಲ್ತಾನ್: ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮುಲ್ತಾನ್‌ನಲ್ಲಿ ಎರಡನೇ ಟೆಸ್ಟ್ ಗೆ ತಯಾರಿ ನಡೆಸುತ್ತಿವೆ. ಆದರೆ ಅದಕ್ಕೂ ಮೊದಲು ಆಘಾತಕಾರಿ ಘಟನೆಯೊಂದು ಮುನ್ನೆಲೆಗೆ ಬಂದಿದ್ದು ಇಂದು ಬೆಳಗ್ಗೆ ಇಂಗ್ಲೆಂಡ್ ತಂಡದ ಹೋಟೆಲ್ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ.
ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಕೂಡ ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಇಂಗ್ಲಿಷ್ ತಂಡದ ಹೋಟೆಲ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿ ಈ ಗುಂಡಿನ ದಾಳಿ ನಡೆದಿದ್ದು ತಂಡವು ಮೈದಾನದಲ್ಲಿ ತರಬೇತಿಗೆ ಹೊರಡುವ ಮುನ್ನ ಬೆಳಿಗ್ಗೆ ಈ ಗುಂಡಿನ ಸದ್ದು ಕೇಳಿಬಂದಿತ್ತು.
ಒಂದು ಕಿ.ಮೀ ದೂರದಲ್ಲಿ ಸಂಭವಿಸಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಅಲ್ಲದೆ ತಂಡದ ಪ್ರಯಾಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಂಡಕ್ಕೆ ಭರವಸೆ ನೀಡಿದರು. ಘಟನೆಯಲ್ಲಿ ಯಾರೂ ಗಾಯಗೊಂಡಿರುವ ವರದಿಯಾಗಿಲ್ಲ. ಆದರೆ ಪಾಕಿಸ್ತಾನ ಪೊಲೀಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅಸಮರ್ಪಕ ರಾವಲ್ಪಿಂಡಿ ಪಿಚ್: ಇಂಗ್ಲೆಂಡ್ ವಿರುದ್ಧದ ಸೋಲಿನ ನಂತರ ಪಿಸಿಬಿ ವಿರುದ್ಧ ಪಾಕ್ ನಾಯಕ ವಾಗ್ದಾಳಿ
ಮೂರು ಟೆಸ್ಟ್ ಪಂದ್ಯಗಳ ಐತಿಹಾಸಿಕ ಸರಣಿಯಲ್ಲಿ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಇಂಗ್ಲೆಂಡ್ ತಂಡ 17 ವರ್ಷಗಳ ನಂತರ ಪಾಕಿಸ್ತಾನದ ನೆಲದಲ್ಲಿ ಟೆಸ್ಟ್ ಸರಣಿ ಆಡಲು ಬಂದಿದೆ. ರಾವಲ್ಪಾಂಡಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯರನ್ನು 74 ರನ್‌ಗಳಿಂದ ಸೋಲಿಸಿತ್ತು. ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 9 ರಿಂದ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.