ಬಾಂಗ್ಲಾ ಪ್ರವಾಸ: ಗಾಯಾಳು ರೋಹಿತ್ ಶರ್ಮಾ ಬದಲಿಗೆ ಭಾರತ ಎ ತಂಡದ ನಾಯಕ ಈಶ್ವರನ್ ಆಯ್ಕೆ ಸಾಧ್ಯತೆ
ಡಿಸೆಂಬರ್ 14 ರಂದು ಚಟ್ಟೋಗ್ರಾಮ್‌ನಲ್ಲಿ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಮುಂಬರುವ ಎರಡು ಟೆಸ್ಟ್ ಸರಣಿಗೆ ಗಾಯಾಳು ನಾಯಕ ರೋಹಿತ್ ಶರ್ಮಾ ಬದಲಿಗೆ ಭಾರತ ಎ ತಂಡದ ನಾಯಕ ಅಭಿಮನ್ಯು ಈಶ್ವರನ್ ಅವರು ಆಯ್ಕೆಯಾಗುವ ಸಾಧ್ಯತೆಯಿದೆ.
Published: 09th December 2022 01:30 PM | Last Updated: 09th December 2022 01:58 PM | A+A A-

ಭಾರತ ಎ ತಂಡದ ನಾಯಕ ಈಶ್ವರನ್
ನವದೆಹಲಿ: ಡಿಸೆಂಬರ್ 14 ರಂದು ಚಟ್ಟೋಗ್ರಾಮ್‌ನಲ್ಲಿ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಮುಂಬರುವ ಎರಡು ಟೆಸ್ಟ್ ಸರಣಿಗೆ ಗಾಯಾಳು ನಾಯಕ ರೋಹಿತ್ ಶರ್ಮಾ ಬದಲಿಗೆ ಭಾರತ ಎ ತಂಡದ ನಾಯಕ ಅಭಿಮನ್ಯು ಈಶ್ವರನ್ ಅವರು ಆಯ್ಕೆಯಾಗುವ ಸಾಧ್ಯತೆಯಿದೆ.
ಎಡಗೈ ಹೆಬ್ಬೆಟ್ಟಿನ ಗಾಯದ ಹೊರತಾಗಿಯೂ ಏಕದಿನ ಸರಣಿಯಲ್ಲಿ ಆಡಲು ಮುಂದಾಗಿರುವ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಅವರ ಸ್ಥಾನಕ್ಕೆ ಭಾರತ ಎ ತಂಡದ ನಾಯಕ ಅಭಿಮನ್ಯು ಈಶ್ವರನ್ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಅಭಿಮನ್ಯು ಈಶ್ವರನ್ ನಡೆಯುತ್ತಿರುವ ಎ ಟೆಸ್ಟ್ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಗಳಿಸಿದ್ದಾರೆ ಮತ್ತು ತಂಡದ ಆರಂಭಿಕ ಆಟಗಾರರಾಗಿದ್ದಾರೆ. ಎಲ್ಲಾ ಸಾಧ್ಯತೆಗಳಲ್ಲಿ, ಅವರು ಸಿಲ್ಹೆಟ್‌ನಲ್ಲಿ ತಮ್ಮ ಎರಡನೇ ಎ ಟೆಸ್ಟ್ ಮುಗಿಸಿದ ನಂತರ ಚಟ್ಟೋಗ್ರಾಮ್‌ನಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ" ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಇದನ್ನೂ ಓದಿ: 2ನೇ ಏಕದಿನ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾಗೆ ಗಾಯ, ಆಸ್ಪತ್ರೆಗೆ ದೌಡು!!
ಈಶ್ವರನ್ ಮೊದಲ A ಟೆಸ್ಟ್‌ನಲ್ಲಿ 141 ರನ್ ಗಳಿಸಿದರು ಮತ್ತು ಎರಡನೇ ಟೆಸ್ಟ್‌ನ ಎರಡನೇ ದಿನದ ಸ್ಟಂಪ್‌ಗೆ 144 ರನ್ ಗಳಿಸಿದರು. ಈಶ್ವರನ್ ರೋಹಿತ್ ಅವರಿಗೆ ಬದಲಿಯಾಗಿ ಬರಬಹುದಾದರೂ, ಚಟ್ಟೋಗ್ರಾಮ್ ಮತ್ತು ಢಾಕಾದಲ್ಲಿ ಭಾರತದ ಪರ ಹಂಗಾಮಿ ನಾಯಕ ಕೆಎಲ್ ರಾಹುಲ್ ಮತ್ತು ಯುವ ಕ್ರಿಕೆಟಿಗ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಭಾರತ ಎ ಪರ ಸತತ ಪ್ರದರ್ಶನ ನೀಡಿರುವ ಬಂಗಾಳದ ಸೀಮರ್ ಮುಖೇಶ್ ಕುಮಾರ್ ಅಥವಾ ಉಮ್ರಾನ್ ಮಲಿಕ್ ಅವರು ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ಪರ್ಯಾಯವಾಗಿ ಆಡಬಹುದು. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಒಂದೇ ಒಂದು ಪಂದ್ಯವನ್ನು ಆಡದ ರವೀಂದ್ರ ಜಡೇಜಾ ಅವರು ನೇರವಾಗಿ ಟೆಸ್ಟ್ ಪಂದ್ಯಗಳನ್ನು ಆಡಲಿರುವುದರಿಂದ ಭಾರತದ ಬೌಲಿಂಗ್ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಇದನ್ನೂ ಓದಿ: ಸರಣಿ ಸೋತರು ವೇಗವಾಗಿ 500 ಸಿಕ್ಸರ್ ಬಾರಿಸಿ ದಾಖಲೆ ಬರೆದ ರೋಹಿತ್ ಶರ್ಮಾ!
ಇನ್ನು ಅಕ್ಷರ್ ಪಟೇಲ್ ಈಗಾಗಲೇ ತಂಡದಲ್ಲಿದ್ದರೂ, ಸೌರಭ್ ಕುಮಾರ್ ಅವರನ್ನು ಬ್ಯಾಕ್ ಅಪ್ ಎಡಗೈ ಸ್ಪಿನ್ನರ್ ಆಗಿ A ತಂಡದಿಂದ ಕರೆಯಬಹುದು, ಕೆಲವು ಔಟ್ ಆಫ್ ಬಾಕ್ಸ್ ಆಲೋಚನೆಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು ಕೂಡ ತಂಡದ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದರೆ ಅಚ್ಚರಿ ಇಲ್ಲ. ಈ ಋತುವಿನಲ್ಲಿ ಮುಂಬೈನ ಎರಡನೇ ರಣಜಿ ಟ್ರೋಫಿ ಪಂದ್ಯವನ್ನು ಆಡುವುದಾಗಿ ಸೂರ್ಯ ಈಗಾಗಲೇ ಖಚಿತಪಡಿಸಿದ್ದಾರೆ.