2ನೇ ಟಿ20: ಸೂಪರ್ ಓವರ್ ನಲ್ಲಿ ಭಾರತದ ಮಹಿಳೆಯರಿಗೆ ಸೂಪರ್ ವಿನ್, ಆಸ್ಟ್ರೇಲಿಯಾ ವಿರುದ್ಧ 4 ರನ್ ವಿರೋಚಿತ ಜಯ

ಆಸ್ಚ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ 4 ರನ್ ಗಳ ವಿರೋಚಿತ ಜಯ ಸಾಧಿಸಿದೆ.
ಭಾರತಕ್ಕೆ ಜಯ
ಭಾರತಕ್ಕೆ ಜಯ

ಮುಂಬೈ: ಆಸ್ಚ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ 4 ರನ್ ಗಳ ವಿರೋಚಿತ ಜಯ ಸಾಧಿಸಿದೆ.

ಮುಂಬೈನ ಡಿವೈ ಪಾಟೀಲ್ ಕ್ರೀಡಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಚ್ರೇಲಿಯಾ ನೀಡಿದ 188 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 187 ರನ್ ಗಳಿಸಿತು. ಭಾರತದ ಪರ ಸ್ಮೃತಿ ಮಂದಾನ 79 ರನ್ ಗಳಿಸಿದರೆ, ಶಫಾಲಿ ವರ್ಮಾ 34ರನ್, ನಾಯಕಿ ಹರ್ಮನ್ ಪ್ರೀತ್ ಕೌರ್ 21 ರನ್ ಮತ್ತು ರಿಚಾ ಘೋಷ್ 26 ರನ್ ಗಳಿಸಿದರು. ಪಂದ್ಯ ಟೈ ಆದ ಹಿನ್ನಲೆಯಲ್ಲಿ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. 

ರೋಚಕತೆ ಹುಟ್ಟಿಸಿದ ಅಂತಿಮ ಓವರ್
ಹೀದರ್ ಗ್ರಹಾಂ ಅವರ 19ನೇ ಓವರ್‌ನಲ್ಲಿ ಕೇವಲ 4 ರನ್‌ ಬಂದ ಕಾರಣ ಪಂದ್ಯ ರೋಚಕ ಘಟದತ್ತ ತಿರುಗಿತ್ತು. ಭಾರತಕ್ಕೆ ಕೊನೆಯ ಓವರ್‌ನಲ್ಲಿ 14 ರನ್‌ ಬೇಕಿತ್ತು, ಕ್ರೀಸ್‌ನಲ್ಲಿ ರಿಚಾ ಘೋಷ್‌ ಮತ್ತು ದೇವಿಕಾ ವೈದ್ಯಾ ಇದ್ದರು. ಮೊದಲ ಎಸೆತದಲ್ಲಿ ಘೋಷ್‌ 1 ರನ್‌ ಓಡಿದರೆ ಎರಡನೇ ಎಸೆತವನ್ನು ವೈದ್ಯ ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ 1 ರನ್‌ ಬಂದರೆ 4 ಮತ್ತು ಐದನೇ ಎಸೆತದಲ್ಲಿ ಘೋಷ್‌ 2 ಮತ್ತು 1 ರನ್‌ ಓಡಿದರು. ಕೊನೆಯ ಎಸೆತವನ್ನು ದೇವಿಕಾ ಬೌಂಡರಿಗೆ ಅಟ್ಟಿದ್ದರಿಂದ ಪಂದ್ಯ ಟೈ ಆಯ್ತು.

ಸೂಪರ್ ಓವರ್
ಈ ವೇಳೆ ಮೊದಲು ಬ್ಯಾಟ್‌ ಮಾಡಿದ ಭಾರತ ಪರ ರಿಚಾ ಘೋಷ್ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರೆ ಎರಡನೇ ಎಸೆತದಲ್ಲಿ ಕ್ಯಾಚ್‌ ನೀಡಿ ಔಟಾದರು. ಹೀದರ್ ಗ್ರಹಾಂ ಅವರ ಮೂರನೇ ಎಸೆತದಲ್ಲಿ ಹರ್ಮನ್ ಪ್ರೀತ್ ಕೌರ್‌ 1 ರನ್‌ ಓಡಿದರು. ನಂತರ ಮೂರು ಎಸೆತಗಳಲ್ಲಿ ಸ್ಮೃತಿ ಮಂಧಾನ 4, 6, 3 ರನ್‌ ಚಚ್ಚಿದ ಪರಿಣಾಮ ಭಾರತ 20 ರನ್‌ ಗಳಿಸಿತು.

ಗೆಲ್ಲಲು ಸೂಪರ್ ಓವರ್ ನಲ್ಲಿ 21 ರನ್ ಗಳ ಗುರಿ ಪಡೆದ ಆಸ್ಟ್ರೇಲಿಯಾ ಬ್ಯಾಟಿಂಗ್ ಇಳಿಯಿತು. ಭಾರತದ ಪರ ರೇಣುಕಾ ಸಿಂಗ್‌ ಬೌಲಿಂಗ್‌ ದಾಳಿಗೆ ಇಳಿದರು. ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ ಒಂಟಿ ರನ್‌ ಬಂತು. ಮೂರನೇ ಎಸೆತದಲ್ಲಿ ಗಾರ್ಡ್‌ನರ್‌ ಕ್ಯಾಚ್‌ ನೀಡಿ ಔಟಾದರು. ನಾಲ್ಕನೇ ಎಸೆತದಲ್ಲಿ ಒಂದು ರನ್‌ ಬಂದರೆ ಕೊನೆಯ ಎರಡು ಎಸೆತವನ್ನು ಹೀಲಿ ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿದರು. ಅಂತಿಮವಾಗಿ ಆಸ್ಟ್ರೇಲಿಯಾ ಸೂಪರ್‌ ಓವರ್‌ನಲ್ಲಿ 16 ರನ್‌ ಮಾತ್ರ ಗಳಿಸಿತು. ಆ ಮೂಲಕ 4 ರನ್ ಗಳ ಅಂತರದಲ್ಲಿ ಭಾರತ ವಿರೋಚಿತ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು 4 ರನ್‌ಗಳಿಂದ ಗೆಲ್ಲುವ  ಮೂಲಕ  5 ಪಂದ್ಯಗಳ ಸರಣಿ 1-1 ರಲ್ಲಿ ಸಮವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com