ಚಾಲನೆ ವೇಳೆ ಕೆಲವೇ ಸೆಕೆಂಡ್ ಮಂಪರು ಆವರಿಸಿದ್ದರ ಪರಿಣಾಮ ಪಂತ್ ಕಾರು ಅಪಘಾತ: ಪೊಲೀಸ್
ನವದೆಹಲಿ: ರಿಷಭ್ ಪಂತ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದೆ.
ಉತ್ತರಾಖಂಡ್ ಪೊಲೀಸರು ಅಪಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿದ್ದು, ಕಾರು ಅಪಘಾತವಾದಾಗ ಪಂತ್ ಒಬ್ಬರೇ ಕಾರಿನಲ್ಲಿದ್ದರು ಹಾಗೂ ಕಾರು ಚಾಲನೆಯಲ್ಲಿದ್ದಾಗ ಅವರು ನಿದ್ದೆಗೆ ಜಾರಿದ್ದೇ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಬಳಿಕ ಎರಡು ಬಾರಿ ಪಲ್ಟಿಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಕೆಲವು ಸೆಕೆಂಡ್ ಗಳು ನಿದ್ದೆ ಮಂಪರು ಆವರಿಸಿದ್ದರ ಪರಿಣಾಮ ಕಾರಿನ ನಿಯಂತ್ರಣ ಕಳೆದುಕೊಂಡೆ, ಎಂದು ಸ್ವತಃ ಪಂತ್ ಪೊಲೀಸರಿಗೆ ತಿಳಿಸಿದ್ದಾರೆ" ಎಂದು ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ. ಅಪಘಾತಕ್ಕೀಡಾದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡಿದ್ದ ಬಿಎಂಡಬ್ಲ್ಯುಕಾರಿನ ಗಾಜು ಒಡೆದು ಪಂತ್ ಹೊರಬಂದಿದ್ದರು. ಬೆಂಕಿಯಿಂದಾಗಿ ಅವರ ಬೆನ್ನು ಸಂಪೂರ್ಣವಾಗಿ ಸುಟ್ಟುಹೋಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ