ಇಂಗ್ಲೆಂಡ್ ವಿರುದ್ಧ 2ನೇ ಟಿ-20 ಪಂದ್ಯ: ಯುವ ಕ್ರಿಕೆಟಿಗರ ಅದ್ಬುತ ಪ್ರದರ್ಶನ, ಕೊಹ್ಲಿಗೆ ಹೆಚ್ಚಿದ ಒತ್ತಡ

ಶನಿವಾರ ಇಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದೊಂದಿಗೆ  ಐದು ತಿಂಗಳ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟಿ-20 ಪಂದ್ಯಕ್ಕೆ ಮರಳಲಿದ್ದಾರೆ ಫೆಬ್ರವರಿ ತಿಂಗಳಲ್ಲಿ ಕೊನೆಯದಾಗಿ ಕೊಹ್ಲಿ ಆಡಿದ್ದರು.
ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್
ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್

ಬರ್ಮಿಂಗ್ ಹ್ಯಾಮ್:  ಶನಿವಾರ ಇಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದೊಂದಿಗೆ  ಐದು ತಿಂಗಳ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟಿ-20 ಪಂದ್ಯಕ್ಕೆ ಮರಳಲಿದ್ದಾರೆ ಫೆಬ್ರವರಿ ತಿಂಗಳಲ್ಲಿ ಕೊನೆಯದಾಗಿ ಕೊಹ್ಲಿ ಆಡಿದ್ದರು.

ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಕಳೆದ ವರ್ಷ ಅಕ್ಟೋಬರ್ - ನವೆಂಬರ್ ನಲ್ಲಿ ನಡೆದ ಟಿ-20 ವಿಶ್ವಕಪ್ ನಿಂದಲೂ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದಿದ್ದೆ. ತಂಡಕ್ಕೆ ವಿರಾಮದ ಭಾಗವಾಗಿ ಕೊಹ್ಲಿ ಮತ್ತಿತರ ಆಟಗಾರರ ಆಗಾಗ್ಗೆ ಬ್ರೇಕ್ ಪಡೆಯುತ್ತಿರುತ್ತಾರೆ. ಇದು ದೀಪಕ್ ಹೂಡಾದಂತಹ ಉದಯೋನ್ಮುಖ ಆಟಗಾರರು ಬೆಳಕಿಗೆ ಬರಲು ಅವಕಾಶ ನೀಡುತ್ತಿದೆ.

ದೀಪಕ್ ಹೂಡಾ ಅದ್ಬುತ ಪ್ರದರ್ಶನ ನಂತರ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಅವರನ್ನು ಕೈಬಿಡುವುದು ಕಷ್ಟಕರವಾಗಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ ಸ್ಥಾನದಲ್ಲಿ ಹೂಡಾ ದೊಡ್ಡ ಪರಿಣಾಮ ಬೀರಿದ್ದಾರೆಯ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 33 ಎಸತೆಗಳಲ್ಲಿ 17 ರನ್ ಗಳಿಸುವುದರೊಂದಿಗೆ ಉತ್ತಮ ಭರವಸೆ ಮೂಡಿಸಿದ್ದಾರೆ.

ಒಂದು ವೇಳೆ ಹೂಡಾ ಅವರಿಗೆ ಸ್ಥಾನ ನೀಡಲು ಭಾರತ ನಿರ್ಧರಿಸಿದರೆ, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರೆ ಇಶಾನ್ ಕಿಶಾನ್ ಮೇಲೆ ಪರಿಣಾಮ ಬೀರಲಿದೆ. ಅವರು ಕೂಡಾ ಆರಂಭಿಕರಾಗಿ ಸ್ಥಿರತೆ ಕಾಯ್ದುಕೊಂಡಿದ್ದಾರೆ.

 ವೆಸ್ಟ್ ಇಂಡೀಸ್ ವಿರುದ್ಧದ ಟಿ-20ಗೆ ಕೊಹ್ಲಿ ಮತ್ತೊಂದು ಬ್ರೇಕ್ ಪಡೆಯುವ ಸಾಧ್ಯತೆಯಿದ್ದು, ಟಿ-20ಯಲ್ಲಿ ಕೊಹ್ಲಿ ಮುಂದುವರೆಯಬೇಕಾದರೆ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಮಹತ್ವದ್ದಾಗಿವೆ. ಯುವ ಕ್ರಿಕೆಟಿಗರು ಅದ್ಬುತ ಪ್ರದರ್ಶನ ನೀಡುತ್ತಿದ್ದು, ಕೊಹ್ಲಿ ಬ್ಯಾಟಿಂಗ್ ನಲ್ಲಿ ಕಮ್ ಬ್ಯಾಂಕ್ ಆಗುವ ಅಗ್ಯವಿದೆ.

ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ) ಇಶಾನ್ ಕಿಶಾನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಚಾಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷ ಪಟೇಲ್, ಉಮ್ರಾನ್ ಮಲ್ಲಿಕ್.

ಇಂಗ್ಲೆಂಡ್ ತಂಡ ಇಂತಿದೆ: ಜೋಸ್ ಬಟ್ಲರ್, ಮೊಯಿನ್ ಆಲಿ, ಹ್ಯಾರಿಬ್ರೋಕ್, ಸ್ಯಾಮ್ ಕರನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡನ್, ಲಿವಿಂಗ್ ಸ್ಟಾನ್, ಡೇವಿಡ್ ಮಲನ್, ಮಿಲ್ಸ್,  ಮ್ಯಾಥ್ಯೂ ಫರ್ಕಿನ್ ಸನ್, ಜೊಸನ್ ರಾಯ್, ಫಿಲ್ ಸಾಲ್ಟ್, ಡೇವಿಡ್ ವಿಲ್ಲಿ ಶನಿವಾರ ಸಂಜೆ 7ಕ್ಕೆ ಪಂದ್ಯ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com