ರವೀಂದ್ರ ಜಡೇಜಾ ಮತ್ತು ಚೆನ್ನೈ ತಂಡದ ನಡುವೆ ಯಾವುದೇ ರೀತಿಯ ಬಿರುಕಿಲ್ಲ; ಸಿಎಸ್‌ಕೆ

ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಯಾವುದೇ ರೀತಿಯ ವೈಮನಸ್ಸಿಲ್ಲ ಎಂದು ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ನವದೆಹಲಿ: ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಯಾವುದೇ ರೀತಿಯ ವೈಮನಸ್ಸಿಲ್ಲ ಎಂದು ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ರವೀಂದ್ರ ಜಡೇಜಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕುರಿತ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ ಬೆನ್ನಲ್ಲೇ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಚರ್ಚೆಗಳು ಆರಂಭವಾಗಿದ್ದವು. 

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಸ್ ಕೆ ಅಧಿಕಾರಿಯೊಬ್ಬರು ಬಿರುಕು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, 'ನೋಡಿ, ಇದು ಅವರ ವೈಯಕ್ತಿಕ ನಿರ್ಧಾರ. ನಮ್ಮ ಕಡೆಯಿಂದ ಇಂತಹ ಘಟನೆಗಳ ಬಗ್ಗೆ ನಮಗೆ ತಿಳಿದಿಲ್ಲ. ಎಲ್ಲಾ ಸರಿ. ಏನೂ ತಪ್ಪಿಲ್ಲ. ಆದರೆ ಈ ಮೂಲಕ ಒಂದು ವಿಚಾರ ಸ್ಪಷ್ಟಪಡಿಸುತ್ತೇವೆ.. ಜಡೇಜಾ ಮತ್ತು ಚೆನ್ನೈ ತಂಡದ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ.

ಈ ವರ್ಷ ಮಹೇಂದ್ರ ಸಿಂಗ್ ಧೋನಿ ಅವರ ಜನ್ಮದಿನದಂದು ಕೂಡ ಜಡೇಜಾ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಶುಭ ಹಾರೈಸಲಿಲ್ಲ ಎಂದು ಹೇಳಲಾಗಿತ್ತು. ಆದರೆ ಅವರು ಕಳೆದ ವರ್ಷದವರೆಗೂ ಧೋನಿ ಜನ್ಮದಿನಕ್ಕೆ ವಿಶ್ ಮಾಡುತ್ತಿದ್ದರು.

ಐಪಿಎಲ್ 2022 ರ ಸೀಸನ್‌ಗೆ ಮುಂಚಿತವಾಗಿ ಎಂಎಸ್ ಧೋನಿ ತಮ್ಮ ನಾಯಕತ್ವವನ್ನು ತ್ಯಜಿಸಿದ ನಂತರ ಜಡೇಜಾ ಅವರನ್ನು ಈ ವರ್ಷದ ಆರಂಭದಲ್ಲಿ ಸಿಎಸ್‌ಕೆ ನಾಯಕರನ್ನಾಗಿ ನೇಮಿಸಲಾಗಿತ್ತು. ಆದಾಗ್ಯೂ, ಆಲ್ರೌಂಡರ್ ಜಡೇಜಾ 2022ರ ಋತುವಿನ ಅರ್ಧದಲ್ಲೇ ಕೆಳಗಿಳಿದರು. ಬಳಿಕ ಧೋನಿ ಮತ್ತೆ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಜಡೇಜಾ ನಂತರ ಇಂಗ್ಲೆಂಡ್ ಪ್ರವಾಸಕ್ಕೆ ಮರಳುವ ಮೊದಲು ಪಕ್ಕೆಲುಬಿನ ಗಾಯದಿಂದ IPL ನಿಂದ ಹೊರಗುಳಿದಿದ್ದರು. 

2022 ರ ಐಪಿಎಲ್ ಸೀಸನ್ ಕೆಟ್ಟದ್ದಾಗಿದ್ದರೂ, ಇಂಗ್ಲೆಂಡ್ ವಿರುದ್ಧದ ತನ್ನ ಪುನರಾಗಮನದ ಪಂದ್ಯದಲ್ಲಿ ಜಡೇಜಾ ಅದ್ಭುತವಾಗಿದ್ದರು. ಜುಲೈ 1 ಮತ್ತು ಜುಲೈ 5 ರ ನಡುವೆ ನಡೆದ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನಲ್ಲಿ ಅವರು ಎಡ್ಜ್‌ಬಾಸ್ಟನ್‌ನಲ್ಲಿ ಶತಕ ಸಿಡಿಸಿದರು. ಏತನ್ಮಧ್ಯೆ, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಗೆ BCCI ಉಪನಾಯಕನನ್ನಾಗಿ ಆಯ್ಕೆ ಮಾಡಿದ ನಂತರ CSK ಆಲ್ರೌಂಡರ್ ಜಡೇಜಾರನ್ನು ಅಭಿನಂದಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com