ಚೇಸಿಂಗ್ ಪಂದ್ಯದ ಅಂತಿಮ 10 ಓವರ್ ನಲ್ಲಿ ಗರಿಷ್ಠ ರನ್, ದಾಖಲೆ ಬರೆದ ಧವನ್ ಪಡೆ

ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ವಿರೋಚಿತ ರನ್ ಚೇಸ್ ಮಾಡಿದ ಭಾರತ ತಂಡ ಯಶಸ್ವಿಯಾಗಿ ಪಂದ್ಯ ಗೆದ್ದಿದ್ದು, ಈ ಪಂದ್ಯ ಹಲವು ದಾಖಲೆಗಳಿಗೆ ಕಾರಣವಾಗಿದೆ.
ಭಾರತ ತಂಡ
ಭಾರತ ತಂಡ

ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ವಿರೋಚಿತ ರನ್ ಚೇಸ್ ಮಾಡಿದ ಭಾರತ ತಂಡ ಯಶಸ್ವಿಯಾಗಿ ಪಂದ್ಯ ಗೆದ್ದಿದ್ದು, ಈ ಪಂದ್ಯ ಹಲವು ದಾಖಲೆಗಳಿಗೆ ಕಾರಣವಾಗಿದೆ.

2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು. ವಿಂಡೀಸ್ ತಂಡ ನೀಡಿದ 312 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ 49.4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 312 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತು. ಪ್ರಮುಖವಾಗಿ ಶುಭ್ ಮನ್ ಗಿಲ್ (43 ರನ್), ಶ್ರೇಯಸ್ ಅಯ್ಯರ್ (63 ರನ್), ಅಕ್ಸರ್ ಪಟೇಲ್ (ಅಜೇಯ 64 ರನ್) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ವಿಂಡೀಸ್ ವಿರುದ್ಧ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿತು.

ಆದರೆ ಇಡೀ ಪಂದ್ಯದ ಗತಿ ಬದಲಾಗಿದ್ದು ಮಾತ್ರ ಕೊನೆಯ 10 ಓವರ್ ನಲ್ಲಿ.. ಹೌದು.. ಈ ಪಂದ್ಯದ ಕೊನೆಯ 10 ಓವರ್ ನಲ್ಲಿ ಭಾರತ ಗಳಿಸಿದ ದಾಖಲೆಯ ರನ್ ಗಳಿಕೆಯೇ ಇಡೀ ಪಂದ್ಯ ಭಾರತದತ್ತ ವಾಲುವಂತೆ ಮಾಡಿತ್ತು. ಈ ಹಂತದಲ್ಲಿ ಭಾರತ ಬರೊಬ್ಬರಿ 100 ರನ್ ಗಳಿಸಿ ಗೆಲುವು ಸಾಧಿಸಿದ್ದು ಇದೀಗ ದಾಖಲೆಯಾಗಿ ಪರಿವರ್ತನೆಯಾಗಿದೆ.

2002ರಿಂದೀಚೆಗೆ ಚೇಸಿಂಗ್ ಪಂದ್ಯದಲ್ಲಿ ಕೊನೆಯ 10 ಓವರ್ ನಲ್ಲಿ ಗರಿಷ್ಠ ರನ್ ಗಳಿಸಿದ ಪಂದ್ಯಗಳ ಪಟ್ಟಿಯಲ್ಲಿ ನಿನ್ನೆಯ ಭಾರತದ ಪಂದ್ಯ 4ನೇ ಸ್ಥಾನ ಗಳಿಸಿದೆ. ಇದಕ್ಕೂ ಮೊದಲು 2014ರಲ್ಲಿ ಮೀರ್ಪುರ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ತಂಡ ಚೇಸಿಂಗ್ ವೇಳೆ ಕೊನೆಯ 10 ಓವರ್ ನಲ್ಲಿ 111 ರನ್ ಕಲೆಹಾಕಿತ್ತು. ಇದು 2002ರಿಂದೀಚೆಗೆ ಚೇಸಿಂಗ್ ಪಂದ್ಯದಲ್ಲಿ ದಾಖಲಾದ ಗರಿಷ್ಛ ರನ್ ಗಳಿಕೆಯಾಗಿದೆ. ನಂತರದ ಸ್ಥಾನದಲ್ಲಿ 2022ರಲ್ಲಿ ಮಲಾಹೈಡ್ ನಲ್ಲಿ ನಡೆದ ಐರ್ಲೆಂಡ್ ವರ್ಸಸ್ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಕಿವೀಸ್ ಪಡೆ ಕೊನೆಯ 10 ಓವರ್ ನಲ್ಲಿ 105 ರನ್ ಗಳನ್ನು ಚಚ್ಚಿತ್ತು, ಇದು ಈ ಪಟ್ಟಿಯ 2ನೇ ಸ್ಥಾನದಲ್ಲಿದೆ.

2005ರಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇದೇ ಕಿವೀಸ್ ಪಡೆ 102ರನ್ ಕಲೆಹಾಕಿದ್ದ ಪಂದ್ಯ 3ನೇ ಸ್ಥಾನದಲ್ಲಿದ್ದು, ನಿನ್ನೆ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ಭಾರತ ವರ್ಸಸ್ ನ್ಯೂಜಿಲೆಂಡ್ ಪಂದ್ಯ ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ. ಈ ಹಿಂದೆ 2015ರಲ್ಲಿ ಆಕ್ಲೆಂಡ್ ನಡೆದ ಜಿಂಬಾಂಬ್ವೆ ವಿರುದ್ಧದ ಪಂದ್ಯದಲ್ಲಿ ಇದೇ ಭಾರತ ತಂಡ 91ರನ್ ಗಳನ್ನು ಕಲೆಹಾಕಿತ್ತು, ಇದು ಇತ್ತೀಚಿನ ದಾಖಲೆಯಾಗಿದೆ.

Most runs scored in overs 41-50 in successful run chases since 2002
111 Pak vs Ban Mirpur 2014
105 NZ vs Ire Malahide 2022
102 NZ vs Aus Christchurch 2005
100 Ind vs WI Port of Spain 2022*
Previous most by India: 91 vs Zim Auckland 2015

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com