2ನೇ ಟಿ20: ದೀಪಕ್ ಹೂಡಾ ಭರ್ಜರಿ ಶತಕ; ಐರ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ ಜಯ
ದೀಪಕ್ ಹೂಡಾ ಅವರ ಭರ್ಜರಿ ಶತಕ (104) ಮತ್ತು ಸಂಜು ಸ್ಯಾಮ್ಸನ್ (77) ಅಬ್ಬರದ ಅರ್ಧಶತಕ ನೆರವಿನಿಂದ ಭಾರತ ತಂಡ ಐರ್ಲೆಂಡ್ ವಿರುದ್ಧದ 2ನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ 4 ರನ್‌ಗಳ ರೋಚಕ ಜಯ ಸಾಧಿಸಿದೆ.
Published: 29th June 2022 11:43 AM | Last Updated: 29th June 2022 01:36 PM | A+A A-

ದೀಪಕ್ ಹೂಡಾ
ಡಬ್ಲಿನ್: ದೀಪಕ್ ಹೂಡಾ ಅವರ ಭರ್ಜರಿ ಶತಕ (104) ಮತ್ತು ಸಂಜು ಸ್ಯಾಮ್ಸನ್ (77) ಅಬ್ಬರದ ಅರ್ಧಶತಕ ನೆರವಿನಿಂದ ಭಾರತ ತಂಡ ಐರ್ಲೆಂಡ್ ವಿರುದ್ಧದ 2ನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ 4 ರನ್‌ಗಳ ರೋಚಕ ಜಯ ಸಾಧಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 225 ರನ್ ಕಲೆಹಾಕಿತು. ಪ್ರಬಲ ಪೈಪೋಟಿ ನೀಡಿದ ಐರ್ಲೆಂಡ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 221 ರನ್ ಗಳಿಸಿತು. ಎರಡು ಪಂದ್ಯಗಳ ಸರಣಿಯನ್ನು ಭಾರತ 2–0 ರಲ್ಲಿ ಜಯಿಸಿತು. ಕಠಿಣ ಗುರಿ ಬೆನ್ನಟ್ಟಿದ ಐರ್ಲೆಂಡ್, ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನಡೆಸಿತು. ಅಂತಿಮ ಓವರ್‌ನಲ್ಲಿ 17 ರನ್‌ಗಳು ಬೇಕಿದ್ದವು. ಈ ಹಂತದಲ್ಲಿ ಉಮ್ರಾನ್ ಮಲಿಕ್ 12 ರನ್ ಮಾತ್ರ ಕೊಟ್ಟು ಭಾರತಕ್ಕೆ 4 ರನ್ ಗಳ ವಿರೋಚಿತ ಗೆಲುವು ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್:
ಭಾರತ 7ಕ್ಕೆ 225 (20 ಓವರ್) ಸಂಜು ಸ್ಯಾಮ್ಸನ್ 77, ದೀಪಕ್ ಹೂಡಾ 104, ಸೂರ್ಯಕುಮಾರ್ ಯಾದವ್ 15, ಮಾರ್ಕ್ ಅಡೇರ್ 42ಕ್ಕೆ 3, ಜೋಸ್ ಲಿಟ್ಲ್ 38ಕ್ಕೆ 2) ಐರ್ಲೆಂಡ್: 5ಕ್ಕೆ 221 (20 ಓವರ್) ಪೌಲ್ ಸ್ಟರ್ಲಿಂಗ್ 40, ಆ್ಯಂಡಿ ಬಾಲ್ಬರ್ನಿ 60, ಹ್ಯಾರಿ ಟೆಕ್ಟರ್ 39, ಜಾರ್ಜ್ ಡಾಕ್ರೆಲ್ ಔಟಾಗದೆ 34, ರವಿ ಬಿಷ್ಣೋಯ್ 41ಕ್ಕೆ 1, ಉಮ್ರನ್ ಮಲಿಕ್ 42ಕ್ಕೆ 1.