ಮಹಿಳಾ ಏಕದಿನ ವಿಶ್ವಕಪ್: ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ವನಿತೆಯರಿಗೆ ಸೋಲು!

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ 62 ರನ್ ಗಳಿಗೆ ಸೋಲು ಕಂಡಿದೆ. 
ಹರ್ಮನ್ ಪ್ರೀತ್ ಕೌರ್
ಹರ್ಮನ್ ಪ್ರೀತ್ ಕೌರ್

ಹಮಿಲ್ಟನ್: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ 62 ರನ್ ಗಳಿಗೆ ಸೋಲು ಕಂಡಿದೆ. 

ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಪೇರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 198 ರನ್ ಗಳಿಗೆ ಆಲೌಟ್ ಆಗಿದ್ದು 62 ರನ್ ಗಳಿಗೆ ಸೋಲು ಕಂಡಿದೆ. 

ನ್ಯೂಜಿಲ್ಯಾಂಡ್ ಪರ ಸೋಫಿ 35, ಅಮೆಲಿಯಾ ಕೇರ್ 50, ಆಮಿ ಸ್ಯಾಟರ್ಥ್‌ವೈಟ್ 75, ಕೇಟಿ ಮಾರ್ಟಿನ್ 41 ರನ್ ಪೇರಿಸಿದ್ದಾರೆ. 

ಭಾರತ ಪರ ಬ್ಯಾಟಿಂಗ್ ನಲ್ಲಿ ಯಾಸ್ತಿಕಾ ಭಾಟಿಯಾ 28, ಮಿಥಾಲಿ ರಾಜ್ 31, ಹರ್ಮನ್ ಪ್ರೀತ್ ಕೌರ್ 71 ರನ್ ಬಾರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com