ವಿರಾಟ್ ಕೊಹ್ಲಿಯಿಂದ 'ಫೇಕ್ ಫೀಲ್ಡಿಂಗ್': ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರುದ್ಧ ಬಾಂಗ್ಲಾದೇಶ ಆರೋಪ!

ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 'ಫೇಕ್ ಫೀಲ್ಡಿಂಗ್' ಮಾಡಿದ್ದಾರೆ ಎಂದು ಬಾಂಗ್ಲಾದೇಶ ತಂಡ ಗಂಭೀರ ಆರೋಪ ಮಾಡಿದೆ.
ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ
ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

ಅಡಿಲೇಡ್: ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 'ಫೇಕ್ ಫೀಲ್ಡಿಂಗ್' ಮಾಡಿದ್ದಾರೆ ಎಂದು ಬಾಂಗ್ಲಾದೇಶ ತಂಡ ಗಂಭೀರ ಆರೋಪ ಮಾಡಿದೆ.

ನಿನ್ನೆ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ 12ನ ಗ್ರೂಪ್ 2 ನ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಭಾರತ ತಂಡ 5ರನ್ ಅಂತರದ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದ ಸೋಲಿನ ಮೂಲಕ ಭಾರತ ಸೆಮೀಸ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದ್ದು, ಬಾಂಗ್ಲಾದೇಶದ ಸೆಮೀಸ್ ಭವಿಷ್ಯ ಮಸುಕಾದಂತಾಗಿದೆ. ಇದೀಗ ಬಾಂಗ್ಲಾದೇಶದ ವಿಕೆಟ್‌ಕೀಪರ್-ಬ್ಯಾಟರ್ ನೂರುಲ್ ಹಸನ್ ಅವರು ಭಾರತೀಯ ಬ್ಯಾಟಿಂಗ್ ಲೆಜೆಂಡ್ ವಿರಾಟ್ ಕೊಹ್ಲಿ "ನಕಲಿ ಫೀಲ್ಡಿಂಗ್" ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದು ಆನ್-ಫೀಲ್ಡ್ ಅಂಪೈರ್‌ಗಳ ಗಮನಕ್ಕೆ ಬರಲಿಲ್ಲ. ಹೀಗಾಗಿ ನಮಗೆ ಸಿಗಬೇಕಾಗಿದ್ದ ಐದು ಪ್ರಮುಖ ಪೆನಾಲ್ಟಿ ರನ್‌ಗಳು ತಪ್ಪಿವೆ ಎಂದು ನೂರುಲ್ ಆರೋಪಿಸಿದ್ದಾರೆ.

ಅಲ್ಪಾವಧಿ ಮಳೆ ನಂತರ 16 ಓವರ್‌ಗಳಲ್ಲಿ 151 ರನ್‌ಗಳ ಪರಿಷ್ಕೃತ ಗುರಿಯನ್ನು ನಿಗದಿಪಡಿಸಸಲಾಯಿತು. ಖಂಡಿತವಾಗಿಯೂ, ನಾವು ಆಟವನ್ನು ಪುನರಾರಂಭಿಸಿದಾಗ ಒದ್ದೆಯಾದ ಔಟ್‌ಫೀಲ್ಡ್ ಪಂದ್ಯದ ಮೇಲೆ ಪ್ರಭಾವ ಬೀರಿತು. ಆದರೆ ಆನ್ ಫೀಲ್ಡ್ ಅಂಪೈರ್ ಗಳ ಎಡವಟ್ಟಿನಿಂದ ನಮಗೆ ಸಿಗಬೇಕಿದ್ದ ಐದು ಹೆಚ್ಚುವರಿ ರನ್ ಗಳು ಕೈತಪ್ಪಿದೆ. ಅಂಪೈರ್‌ಗಳಾದ ಕ್ರಿಸ್ ಬ್ರೌನ್ ಮತ್ತು ಮರೈಸ್ ಎರಾಸ್ಮಸ್ ಘಟನೆಯನ್ನು ಕಡೆಗಣಿಸಿದ್ದಾರೆ ಎಂದು ನುರುಲ್ ಹೇಳಿದ್ದಾರೆ.

ನೂರುಲ್ ಉಲ್ಲೇಖಿಸಿದ ಘಟನೆ ನಡೆದದ್ದು ಏಳನೇ ಓವರ್‌ನಲ್ಲಿ. ಅರ್ಶ್ದೀಪ್ ಅವರು ಡೀಪ್‌ನಿಂದ ಚೆಂಡನ್ನು ಎಸೆದರು. ಈ ಹಂತದಲ್ಲಿ ಕೊಹ್ಲಿ ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ಅದನ್ನು ರಿಲೇ ಮಾಡುತ್ತಿರುವಂತೆ ನಟಿಸಿದರು. ರಿಲೇ ಥ್ರೋ ಎಂದರೆ ಟ್ರ್ಯಾಕ್‌ಗೆ ಹತ್ತಿರವಿರುವ ಫೀಲ್ಡರ್ ಚೆಂಡನ್ನು ಸ್ಟಂಪ್‌ಗೆ ಎಸೆಯುತ್ತಾರೆ ಎಂದು ವೀಡಿಯೊ ರೆಕಾರ್ಡಿಂಗ್ ತೋರಿಸಿದೆ. ಈ ಹಂತದಲ್ಲಿ ಆಗ ಕ್ರೀಸ್ ನಲ್ಲಿದ್ದ ಇಬ್ಬರು ಬ್ಯಾಟರ್‌ಗಳು ಲಿಟ್ಟನ್ ದಾಸ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಕೊಹ್ಲಿಯತ್ತ ನೋಡರಿಲಿಲ್ಲ. ಹೀಗಾಗಿ ಇದು ಯಾರ ಗಮನಕ್ಕೂ ಬಾರಲಿಲ್ಲ ಎಂದು ನೂರುಲ್ ಆರೋಪಿಸಿದ್ದಾರೆ.

ICC ಆಟದ ಪರಿಸ್ಥಿತಿಗಳ ನಿಯಮ 41.5, ಇದು ಅನ್ಯಾಯದ ಅಥವಾ ಮೋಸದ ಆಟಕ್ಕೆ ಸಂಬಂಧಿಸಿದೆ. ಯಾರಾದರೂ ನಿಯಮವನ್ನು ಉಲ್ಲಂಘಿಸಿದ್ದಾರೆಂದು ಅಂಪೈರ್ ಕಂಡುಕೊಂಡರೆ, ಅವರು ಅದನ್ನು ಡೆಡ್ ಬಾಲ್ ಎಂದು ಘೋಷಣೆ ಮಾಡಿ ಎದುರಾಳಿ ತಂಡಕ್ಕೆ ದಂಡವಾಗಿ ರನ್ ಗಳನ್ನು ನೀಡಬಹುದು.

ಏನಿದು ಘಟನೆ?
ಮಳೆ ಬಳಿಕ 16 ಓವರ್ ನಲ್ಲಿ 151 ರನ್ ಗಳ ಗುರಿ ಬೆನ್ನು ಹತ್ತುವ ಗುರಿ ಪಡೆದ ಬಾಂಗ್ಲಾದೇಶಕ್ಕೆ ಲಿಟನ್ ದಾಸ್ ಬೆನ್ನೆಲುಬಾಗಿ ನಿಂತಿದ್ದರು. ಅಕ್ಸರ್ ಪಟೇಲ್  ಇನ್ನಿಂಗ್ಸ್ ನ 7ನೇ ಓವರ್ ನ 3ನೇ ಎಸೆತದಲ್ಲಿ ಲಿಟನ್ ದಾಸ್ ಬಾರಿಸಿದ ಚೆಂಡು ನೇರವಾಗಿ ಅರ್ಶ್ ದೀಪ್ ಸಿಂಗ್ ಕೈ ಸೇರಿತ್ತು. ಈ ವೇಳೆ ಕ್ರೀಸ್ ನಲ್ಲಿದ್ದ ಶಾಂಟೋ ಮತ್ತು ಲಿಟನ್ ದಾಸ್ ಒಂದು ರನ್ ಗೆ ಓಡಿದ್ದರು. ಆರ್ಶ್ ದೀಪ್ ಸಿಂಗ್ ಚೆಂಡನ್ನು ವಿಕೀಟ್ ಕೀಪರ್ ಗೆ ಎಸೆಯುವ ವೇಳೆ ಮಿಡ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಚೆಂಡನ್ನು ತಾವು ಕೀಪರ್ ನತ್ತ ಎಸೆಯುತ್ತಿರುವಂತೆ ನಟಿಸಿದ್ದರು. ಆದರೆ ಈ ಬಗ್ಗೆ ಉಭಯ ಬ್ಯಾಟರ್ ಗಳು ಗಮನ ಹರಿಸಿರಲಿಲ್ಲ. ಯಶಸ್ವಿಯಾಗಿ ಒಂದು ರನ್ ಪೂರ್ಣಗೊಳಿಸಿದ್ದರು. ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಆನ್ ಫೀಲ್ಡ್ ಅಂಪೈರ್ ಗಳ ದಂಡ ಏಕೆ ಹಾಕಲಿಲ್ಲ?
ಇನ್ನು ನಿಯಮಾವಳಿ ಪ್ರಕಾರ ಕ್ರೀಸ್ ನಲ್ಲಿರುವ ಬ್ಯಾಟರ್ ಗಳನ್ನು ಕಂಗೆಡಿಸುವ ಅಥವಾ ಅವರ ದೃಷ್ಟಿಕೋನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಫೇಕ್ ಫೀಲ್ಡಿಂಗ್ ಮಾಡಿದರೆ ಅದು ತಪ್ಪು. ಆದರೆ ಹಾಲಿ ಘಟನೆಯಲ್ಲಿ ಕ್ರೀಸ್ ನಲ್ಲಿದ್ದ ಬಾಂಗ್ಲಾದೇಶದ ಬ್ಯಾಟರ್ ಗಳಾದ ಶಾಂಟೊ ಆಗಲೀ ಅಥವಾ ಲಿಟ್ಟನ್ ದಾಸ್ ಆಗಲೀ ಫೀಲ್ಜರ್ ಕೊಹ್ಲಿಯತ್ತ ನೋಡಿಯೇ ಇರಲಿಲ್ಲ. ಆದ್ದರಿಂದ ಅವರು ವಿಚಲಿತರಾಗಲಿಲ್ಲ ಅಥವಾ ಮೋಸ ಹೋಗಲಿಲ್ಲ. 

ಅಂಪೈರ್ ಗಳ ವಿರುದ್ಧ ಆರೋಪ ಮಾಡಿದ ನೂರುಲ್ ಮೇಲೆ ತೂಗುಗತ್ತಿ!
ಇನ್ನು ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಬಹಿರಂಗವಾಗಿ ಆರೋಪ ಮಾಡಿದ ಬಾಂಗ್ಲಾದೇಶದ ಆಟಗಾರ ನೂರುಲ್ ಮೇಲೆ ಶಿಸ್ತುಪಾಲನಾ ತೂಗುಗತ್ತಿ ನೇತಾಡುತ್ತಿದ್ದು, ಪಂದ್ಯದ ಅಧಿಕಾರಿಗಳನ್ನು ಟೀಕಿಸಿದ್ದಕ್ಕಾಗಿ ನೂರುಲ್ ಅವರ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com