ಟಿ-20 ವಿಶ್ವಕಪ್ ಸೆಮಿಫೈನಲ್: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ, ಭಾರತಕ್ಕೆ ಪಾಕ್ ಅಭಿಮಾನಿಗಳ ಬೆಂಬಲ

ಆಸ್ಟ್ರೇಲಿಯಾದ ಆಡಿಲೇಡ್ ಕ್ರಿಕೆಟ್ ಮೈದಾನದಲ್ಲಿಂದು ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ.
ಕ್ರೀಡಾಂಗಣದಲ್ಲಿ ಜಮಾಯಿಸಿರುವ ಭಾರತ-ಪಾಕ್ ಅಭಿಮಾನಿಗಳು
ಕ್ರೀಡಾಂಗಣದಲ್ಲಿ ಜಮಾಯಿಸಿರುವ ಭಾರತ-ಪಾಕ್ ಅಭಿಮಾನಿಗಳು

ಆಡಿಲೇಡ್: ಆಸ್ಟ್ರೇಲಿಯಾದ ಆಡಿಲೇಡ್ ಕ್ರಿಕೆಟ್ ಮೈದಾನದಲ್ಲಿಂದು ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ.

ಇಂದಿನ ಪಂದ್ಯದಲ್ಲಿ ಗೆದ್ದು ಫೈನಲ್ ಗೆ ಲಗ್ಗೆ ಹಾಕಲು ಉಭಯ ತಂಡಗಳ ನಡುವೆ ತೀವ್ರ ಹಣಾಹಣಿವೇರ್ಪಟ್ಟಿದ್ದು, ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲಿಗೆ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ದುಕೊಂಡರು. 

ಸೆಮಿಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಭಾರತದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದಾರೆ.  ನಿನ್ನೆ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ಈಗಾಗಲೇ ಫೈನಲ್ ತಲುಪಿದ್ದು, ಪಾಕ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟ್ ಆಟಗಾರರು ಭಾರತವನ್ನು ಬೆಂಬಲಿಸುತ್ತಿದ್ದಾರೆ.

ನಿನ್ನೆ ಪಾಕಿಸ್ತಾನ ಕಿವೀಸ್ ತಂಡವನ್ನು ಸೋಲಿಸಿದಾಗಲೂ ಮೆಲ್ಬೂರ್ನ್ ನಲ್ಲಿ ನಡೆಯಲಿರುವ ಫೈನಲ್ ನಲ್ಲಿ ಪಾಕಿಸ್ತಾನ- ಭಾರತ ಎದುರಾದರೆ ಚೆನ್ನಾಗಿರುತ್ತೆ ಅಂತಾನೇ ಕ್ರಿಕೆಟ್ ಅಭಿಮಾನಿಗಳು ಪ್ರಮುಖವಾಗಿ ಚರ್ಚಿಸಿದ್ದಾರೆ. ಪಾಕ್ ಮತ್ತು ಭಾರತ ಫೈನಲ್ ಗೆ ಬರಬೇಕು ಎಂಬ ಕನಸು ಭಾನುವಾರ ನನಸು ಆಗಲಿದೆ ಎಂದು ಪಾಕ್ ಮಾಜಿ ಟೆಸ್ಟ್ ಕ್ಯಾಪ್ಟನ್ ಶಾಹೀದ್ ಆಫ್ರಿದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com