2024ರ ಟಿ20 ವಿಶ್ವಕಪ್‌ಗೆ ಹಾರ್ದಿಕ್ ನನ್ನು ನಾಯಕನನ್ನಾಗಿ ಮಾಡಿ, ಹೊಸ ತಂಡ ಕಟ್ಟಲು ಪ್ರಾರಂಭಿಸಿ: ಶ್ರೀಕಾಂತ್
ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು 2024ರ ಟಿ20 ವಿಶ್ವಕಪ್ ಗೆ ತಂಡದ ನಾಯಕರನ್ನಾಗಿ ಮಾಡಿ ಹೊಸ ತಂಡ ಕಟ್ಟುವ ಕೆಲಸ ಪ್ರಾರಂಭಿಸಿ ಎಂದು ಹೇಳಿದ್ದಾರೆ.
Published: 14th November 2022 07:40 PM | Last Updated: 14th November 2022 07:40 PM | A+A A-

ಶ್ರೀಕಾಂತ್
ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು 2024ರ ಟಿ20 ವಿಶ್ವಕಪ್ ಗೆ ತಂಡದ ನಾಯಕರನ್ನಾಗಿ ಮಾಡಿ ಹೊಸ ತಂಡ ಕಟ್ಟುವ ಕೆಲಸ ಪ್ರಾರಂಭಿಸಿ ಎಂದು ಹೇಳಿದ್ದಾರೆ.
ನಾನು ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ, 2024ರ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ನಾಯಕನಾಗಬೇಕು ಎಂದು ನಾನು ಹೇಳುತ್ತೇನೆ. ಅಲ್ಲದೆ ಇಂದಿನಿಂದಲೇ ಒಂದು ತಂಡವನ್ನು ಮರುನಿರ್ಮಾಣ ಮಾಡಲು ಪ್ರಾರಂಭಿಸಿ. ಮುಂದಿನ ವಾರದಿಂದ ನಡೆಯಲಿರುವ ನ್ಯೂಜಿಲೆಂಡ್ ಸರಣಿಯಿಂದಲೇ ಇದನ್ನು ಪ್ರಾರಂಭಿಸಿ ವಿಶ್ವಕಪ್‌ಗಾಗಿ ತಯಾರಿ ಮಾಡಿ. ಎರಡು ವರ್ಷಗಳ ಮುಂಚಿತವಾಗಿ ಇದು ಪ್ರಾರಂಭವಾಗುವುದರಿಂದ ನೀವು ಏನು ಮಾಡಲು ಬಯಸುತ್ತೀರೋ ಅದನ್ನು ನೀವು ಮಾಡುತ್ತೀರಿ, ಪ್ರಯೋಗಾತ್ಮಕ ಮೂಲಕ ನಿಮಗೆ ಬೇಕಾದುದನ್ನು ಮಾಡಿ. ಒಂದು ವರ್ಷ ಅದನ್ನು ಪ್ರಯತ್ನಿಸಿ, ನಂತರ ನೀವು ತಂಡವನ್ನು ರಚಿಸುತ್ತೀರಿ. 2023ರ ವೇಳೆಗೆ ಆ ತಂಡ ಅತ್ಯುತ್ತಮ ಮಟ್ಟದಲ್ಲಿದೆ ಎಂಬುದನ್ನು ಎಂದು ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಟೀಂ ಇಂಡಿಯಾ ಶುಕ್ರವಾರದಿಂದ ನ್ಯೂಜಿಲೆಂಡ್‌ನಲ್ಲಿ ಮೂರು ಟಿ20 ಪಂದ್ಯ ಮತ್ತು ಏಕದಿನ ಸರಣಿಯನ್ನು ಆಡಲಿದೆ. ಅಲ್ಲಿ ಹಾರ್ದಿಕ್ ಪಾಂಡ್ಯ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು 2024ರ ಆವೃತ್ತಿಯ ಮೊದಲು ಟೀಂ ಇಂಡಿಯಾ ಹೆಚ್ಚು ವೇಗದ ಬೌಲಿಂಗ್ ಆಲ್-ರೌಂಡರ್‌ಗಳನ್ನು ಗುರುತಿಸಬೇಕಾಗಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಿಂದ ತಂಡದ ಮತ್ತೆ ಬಲಿಷ್ಠವಾಗಿ ಕಟ್ಟುವತ್ತ ಗಮನ ಹರಿಸಿ ಎಂದರು.
ಇದನ್ನೂ ಓದಿ: T20 ವಿಶ್ವಕಪ್ 2022: ಪಂದ್ಯಾವಳಿಯ ಅತ್ಯುತ್ತಮ 11 ಆಟಗಾರರ ತಂಡ ಪ್ರಕಟ, ಭಾರತದ ಇಬ್ಬರಿಗೆ ಸ್ಥಾನ!
ಭಾರತಕ್ಕೆ ಹೆಚ್ಚಾಗಿ ವೇಗವಾಗಿ ಬೌಲ್ ಮಾಡುವ ಆಲ್ ರೌಂಡರ್‌ಗಳು ಬೇಕಾಗಿದ್ದಾರೆ. ಇನ್ನು 1983 ವಿಶ್ವಕಪ್, 2011 ವಿಶ್ವಕಪ್, ಮತ್ತು 2007 ಟಿ20 ವಿಶ್ವಕಪ್ ನಾವು ಹೇಗೆ ಗೆದ್ದಿದ್ದೇವೆ? ನಮ್ಮಲ್ಲಿ ಅನೇಕ ವೇಗದ-ಬಾಲ್ ಆಲ್-ರೌಂಡರ್‌ಗಳು ಮತ್ತು ಸೆಮಿ-ಆಲ್-ರೌಂಡರ್‌ಗಳಿದ್ದರು ಎಂದಿದ್ದಾರೆ.
ವಿಶ್ವಕಪ್ ಟ್ರೋಫಿಗಾಗಿ ಒಂಬತ್ತು ವರ್ಷಗಳ ಕಾಯುವಿಕೆಯನ್ನು ಈ ಬಾರಿ ಟೀಂ ಇಂಡಿಯಾ ಕೊನೆಗೊಳಿಸುತ್ತದೆ ಎಂದು ಆಶಿಸಲಾಗಿತ್ತು. ಆದರೆ ಅಡಿಲೇಡ್ ಓವಲ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿ-ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲಿನೊಂದಿಗೆ ಆಸೆಗೆ ತಣ್ಣೀರು ಎರಚಿತ್ತು. ಆ ಬಳಿಕ ಭಾರತದಲ್ಲಿ ವ್ಯಾಪಕ ಟೀಕೆಗೆ ಗುರಿಯಾಯಿತು.
ಐಪಿಎಲ್ 2022 ಅನ್ನು ಗೆಲ್ಲಲು ಗುಜರಾತ್ ಟೈಟಾನ್ಸ್ ಅನ್ನು ಮುನ್ನಡೆಸಿದ್ದ ಪಾಂಡ್ಯ, ಶುಕ್ರವಾರ ವೆಲ್ಲಿಂಗ್ಟನ್‌ನಲ್ಲಿ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ T20I ಸರಣಿಯಲ್ಲಿ ನಾಯಕತ್ವ ವಹಿಸಲಿದ್ದಾರೆ. ಈ ಸರಣಿಯು 2024 ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆತಿಥ್ಯ ವಹಿಸಲಿರುವ T20 ವಿಶ್ವಕಪ್‌ನ ಮುಂದಿನ ಆವೃತ್ತಿಗೆ ಭಾರತದ ಸಿದ್ಧತೆಯನ್ನು ಗುರುತಿಸುತ್ತದೆ.