T20 ವಿಶ್ವಕಪ್ 2022: ಪಂದ್ಯಾವಳಿಯ ಅತ್ಯುತ್ತಮ 11 ಆಟಗಾರರ ತಂಡ ಪ್ರಕಟ, ಭಾರತದ ಇಬ್ಬರಿಗೆ ಸ್ಥಾನ!
T20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ ಟ್ರೋಫಿಯನ್ನು ವಶಪಡಿಸಿಕೊಂಡಿದ್ದು ಅರ್ಧಶತಕದೊಂದಿಗೆ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಆಟವಾಡಿ ಇಂಗ್ಲೆಂಡ್‌ಗೆ ಹೀರೋ ಆಗಿದ್ದರು.
Published: 14th November 2022 04:00 PM | Last Updated: 14th November 2022 04:00 PM | A+A A-

ಟೀಂ ಇಂಂಡಿಯಾ ಆಟಗಾರರು
T20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ ಟ್ರೋಫಿಯನ್ನು ವಶಪಡಿಸಿಕೊಂಡಿದ್ದು ಅರ್ಧಶತಕದೊಂದಿಗೆ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಆಟವಾಡಿ ಇಂಗ್ಲೆಂಡ್‌ಗೆ ಹೀರೋ ಆಗಿದ್ದರು.
ಅಕ್ಟೋಬರ್ 16ರಂದು ಪ್ರಾರಂಭವಾದ ಈ ವರ್ಷದ T20 ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಿದ್ದವು. ಭಾರತ, ಇಂಗ್ಲೆಂಡ್, ಪಾಕಿಸ್ತಾನ, ಭಾರತ ಮತ್ತು ನ್ಯೂಜಿಲೆಂಡ್ ನಾಲ್ಕು ಸೆಮಿಫೈನಲಿಗೆ ಪ್ರವೇಶಿಸಿದ್ದವು, ಕೊನೆಯಲ್ಲಿ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
T20 ವಿಶ್ವಕಪ್ 2022 ಪಂದ್ಯಾವಳಿಯ ಅತ್ಯುತ್ತಮ 11 ಆಟಗಾರರ ಪಟ್ಟಿ ಇಲ್ಲಿದೆ:
* ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್) - 42.40 ಸರಾಸರಿಯಲ್ಲಿ 212 ರನ್
* ಜೋಸ್ ಬಟ್ಲರ್(ವಿಕೆಟ್ ಕೀಪರ್)(ಇಂಗ್ಲೆಂಡ್) - 45.00 ಸರಾಸರಿಯಲ್ಲಿ 225 ರನ್ ಜೊತೆಗೆ 9 ಮಂದಿಯ ಔಟ್
* ವಿರಾಟ್ ಕೊಹ್ಲಿ(ಭಾರತ) - 98.66 ಸರಾಸರಿಯಲ್ಲಿ 296 ರನ್
* ಸೂರ್ಯಕುಮಾರ್ ಯಾದವ್(ಭಾರತ) - 59.75 ಸರಾಸರಿಯಲ್ಲಿ 239 ರನ್
* ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್) - 40.20 ಸರಾಸರಿಯಲ್ಲಿ 201 ರನ್
* ಸಿಕಂದರ್ ರಜಾ (ಜಿಂಬಾಬ್ವೆ) - 27.37 ಸರಾಸರಿಯಲ್ಲಿ 219 ರನ್ ಮತ್ತು 10 ವಿಕೆಟ್
* ಶಾದಾಬ್ ಖಾನ್ (ಪಾಕಿಸ್ತಾನ) - 24.50 ಸರಾಸರಿ 98 ರನ್ ಮತ್ತು 11 ವಿಕೆಟ್
* ಸ್ಯಾಮ್ ಕರ್ರಾನ್ (ಇಂಗ್ಲೆಂಡ್) - 13 ವಿಕೆಟ್
* ಅನ್ರಿಚ್ ನೋರ್ಟ್ಜೆ (ದಕ್ಷಿಣ ಆಫ್ರಿಕಾ) - 11 ವಿಕೆಟ್
* ಮಾರ್ಕ್ ವುಡ್ (ಇಂಗ್ಲೆಂಡ್) - 9 ವಿಕೆಟ್
* ಶಾಹೀನ್ ಶಾ ಆಫ್ರಿದಿ (ಪಾಕಿಸ್ತಾನ) - 11 ವಿಕೆಟ್
* 12ನೇ ಆಟಗಾರ: ಹಾರ್ದಿಕ್ ಪಾಂಡ್ಯ (ಭಾರತ) - 25.60 ಸರಾಸರಿಯಲ್ಲಿ 128 ರನ್ ಮತ್ತು 8 ವಿಕೆಟ್
Four players and two each from and
— ICC (@ICC) November 14, 2022
The @upstox Most Valuable Team of the Tournament #T20WorldCup https://t.co/wdGDTWMiUA