ಕೀರಾನ್ ಪೊಲಾರ್ಡ್
ಕೀರಾನ್ ಪೊಲಾರ್ಡ್

ಐಪಿಎಲ್ ನಿಂದ ಪೊಲಾರ್ಡ್ ನಿವೃತ್ತಿ: ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಕೆ

ಮುಂಬೈ ಇಂಡಿಯನ್ಸ್ ಹಿರಿಯ ಆಲ್ ರೌಂಡರ್ ಕೀರಾನ್ ಪೊಲಾರ್ಡ್ ಮಂಗಳವಾರ ಐಪಿಎಲ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ, ನೂತನ ಬ್ಯಾಟಿಂಗ್ ಕೋಚ್ ಆ ತಂಡದೊಂದಿಗೆ ಮುಂದುವರೆಯಲಿದ್ದಾರೆ.

ಮುಂಬೈ: ಮುಂಬೈ ಇಂಡಿಯನ್ಸ್ ಹಿರಿಯ ಆಲ್ ರೌಂಡರ್ ಕೀರಾನ್ ಪೊಲಾರ್ಡ್ ಮಂಗಳವಾರ ಐಪಿಎಲ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ, ನೂತನ ಬ್ಯಾಟಿಂಗ್ ಕೋಚ್ ಆ ತಂಡದೊಂದಿಗೆ ಮುಂದುವರೆಯಲಿದ್ದಾರೆ.

ಕೆಲ ವರ್ಷಗಳ ಕಾಲ ತಂಡದಲ್ಲಿ ಆಡಿ ಈ ತೀರ್ಮಾನ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ, ಆದರೆ ಮುಂಬೈ ಇಂಡಿಯನ್ಸ್ ನೊಂದಿಗೆ ಚರ್ಚೆ ನಡೆಸಿದ ನಂತರ ಐಪಿಎಲ್ ವೃತ್ತಿ ಜೀವನದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. 

ತುಂಬಾ ಸಾಧಿಸಿರುವ ಈ ಅದ್ಭುತ ಫ್ರಾಂಚೈಸ್ ಪರಿವರ್ತನೆಯ ಅಗತ್ಯವಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ಇನ್ನು ಮುಂದೆ ಮುಂಬೈ ಇಂಡಿಯನ್ಸ್ ಗಾಗಿ ಆಡದಿದ್ದಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧವೂ ಆಡುವುದನ್ನು ನಾನೇ ಸ್ವತ: ನೋಡಲು ಸಾಧ್ಯವಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ನಲ್ಲಿ ದಿ ಮುಂಬೈ ವೆಸ್ಟ್ ಇಂಡಿಯನ್ ಎಂದು ಅವರು ಬರೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನೂತನ ಬ್ಯಾಟಿಂಗ್ ಕೋಚ್ ಆಗುವುದಾಗಿ ವೆಸ್ಟ್ ಇಂಡಿಯನ್ ಆಟಗಾರ ಪೋಲಾರ್ಡ್ ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com