ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ: ಮಳೆಯಿಂದಾಗಿ 3ನೇ ಪಂದ್ಯ ರದ್ದು; ಡಕ್ವರ್ಥ್ ಲೂಯಿಸ್ ನಲ್ಲೂ 'ಟೈ', ಸರಣಿ ಭಾರತ ಕೈವಶ!
ಪ್ರವಾಸಿ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿದೆ.
Published: 22nd November 2022 04:43 PM | Last Updated: 22nd November 2022 04:55 PM | A+A A-

ಟೀಂ ಇಂಡಿಯಾ
ನೇಪಿಯರ್: ಪ್ರವಾಸಿ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ 160ರನ್ ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ ಗೆಲ್ಲಲು 161ರನ್ ಗಳ ಸವಾಲಿನ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತ 9 ಓವರ್ ಗಳ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 75 ರನ್ ಪೇರಿಸಿದ್ದಾಗ ಮಳೆಯಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮಳೆ ಮುಂದುವರೆದಿದ್ದರಿಂದ ಅಂತಿಮವಾಗಿ ಪಂದ್ಯವನ್ನು ರದ್ದು ಮಾಡಲಾಯಿತು.
ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 9 ಓವರ್ ಗಳಲ್ಲಿ ಗೆಲ್ಲಲು 76 ರನ್ ಗಳ ಗುರಿ ನೀಡಲಾಯಿತು. ಇನ್ನು ಭಾರತ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದರಿಂದ ಪಂದ್ಯ 'ಟೈ' ಎಂದು ಘೋಷಿಸಲಾಯಿತು. ಇನ್ನು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರಿಂದ ಸರಣಿ ಟೀಂ ಇಂಡಿಯಾದ ಕೈವಶವಾಗಿದೆ.
ಭಾರತದ ಪರ ಇಶಾನ್ ಕಿಶನ್ 10, ರಿಷಬ್ ಪಂತ್ 11, ಸೂರ್ಯಕುಮಾರ್ ಯಾದವ್ 13, ಹಾರ್ದಿಕ್ ಪಾಂಡ್ಯ ಅಜೇಯ 30 ಹಾಗೂ ದೀಪಕ್ ಹೂಡಾ ಅಜೇಯ 9 ರನ್ ಗಳಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಡೆವಾನ್ ಕಾನ್ವೇ (59 ರನ್) ಮತ್ತು ಗ್ಲೇನ್ ಫಿಲಿಪ್ಸ್ (54) ಅಮೋಘ ಅರ್ಧಶತಕಗಳ ನೆರವಿನಿಂದ ಭಾರತಕ್ಕೆ ಸವಾಲಿನ ಗುರಿ ನೀಡಿದೆ. ಆರಂಭಿಕ ಆಘಾತದ ಹೊರತಾಗಿಯೂ ಡೆವಾನ್ ಕಾನ್ವೇ ಮತ್ತು ಗ್ಲೇನ್ ಫಿಲಿಪ್ಸ್ ನ್ಯೂಜಿಲೆಂಡ್ ಗೆ ಉತ್ತಮ ಚೇತರಿಕೆ ನೀಡಿದರು. ಈ ಜೋಡಿ 3ನೇ ವಿಕೆಟ್ ಜೊತೆಯಾಟದಲ್ಲಿ ಬರೊಬ್ಬರಿ 86 ರನ್ ಗಳ ಜೊತೆಯಾಟವಾಡಿತು.
ಇದನ್ನೂ ಓದಿ: ಹೊಸ ಸ್ವರೂಪದಲ್ಲಿ 2024ರ ಟಿ20 ವಿಶ್ವಕಪ್: 20 ದೇಶಗಳಿಂದ ಪ್ರಶಸ್ತಿಗೆ ಪೈಪೋಟಿ, ಸೂಪರ್ 12, ಸೂಪರ್ 8 ಹಂತಗಳು!
ಆದರೆ ಈ ಹಂತದಲ್ಲಿ ದಾಳಿಗಿಳಿದ ಭಾರತದ ಮಹಮದ್ ಸಿರಾಜ್ ಕಿವೀಸ್ ಪ,ಡೆಗೆ ಡಬಲ್ ಆಘಾತ ನೀಡಿದರು. ಅರ್ಧಶತಕ ಗಳಿಸಿ ಕ್ರೀನ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಗ್ಸೇನ್ ಫಿಲಿಪ್ಸ್ ರನ್ನು ಸಿರಾಜ್ ಪೆವಿಲಿಯನ್ ಗೆ ಅಟ್ಟಿದರು. ಇವರ ಬೆನ್ನಲ್ಲೇ ಕಾನ್ವೇ ಅವರನ್ನೂ ಕೂಡ ಅರ್ಷ್ ದೀಪ್ ಸಿಂಗ್ ಔಟ್ ಮಾಡಿದರು.
ಇವರಿಬ್ಬರು ಔಟಾದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡ ದಿಡೀರ್ ಕುಸಿತಕಂಡಿತು. ಒಂದು ಹಂತದಲ್ಲಿ 130ರನ್ ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಪಡೆ ಮುಂದಿನ 30 ರನ್ ಗಳ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡಿತು. ಮಹಮಜ್ ಸಿರಾಜ್ ಮತ್ತು ಅರ್ಷ್ ದೀಪ್ ಸಿಂಗ್ ತಲಾ 4 ವಿಕೆಟ್ ಪಡೆದು ನ್ಯೂಜಿಲೆಂಡ್ ದಿಢೀಕ್ ಕುಸಿತಕ್ಕೆ ಕಾರಣರಾದರು. ಅಂತಿಮವಾಗಿ ಕಿವೀಸ್ ಪಡೆ 19.4 ಓವರ್ ನಲ್ಲಿ 160ರನ್ ಗಳಿಸಿ ಆಲೌಟ್ ಆಯಿತು.