ಹೊಸ ಸ್ವರೂಪದಲ್ಲಿ 2024ರ ಟಿ20 ವಿಶ್ವಕಪ್: 20 ದೇಶಗಳಿಂದ ಪ್ರಶಸ್ತಿಗೆ ಪೈಪೋಟಿ, ಸೂಪರ್ 12, ಸೂಪರ್ 8 ಹಂತಗಳು!
ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಭರ್ಜರಿ ಯಶಸ್ಸಿನೊಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನೂ ಕೂಡ ವಿಶೇಷ ಮಾಡಲು ಐಸಿಸಿ ಸಿದ್ಧತೆ ನಡೆಸಿದೆ.
Published: 22nd November 2022 01:24 PM | Last Updated: 22nd November 2022 03:10 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಭರ್ಜರಿ ಯಶಸ್ಸಿನೊಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನೂ ಕೂಡ ವಿಶೇಷ ಮಾಡಲು ಐಸಿಸಿ ಸಿದ್ಧತೆ ನಡೆಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟೂರ್ನಿಯ ಸ್ವರೂಪ ಬದಲಾವಣೆಗೆ ಕೈಹಾಕಿದ್ದು, ಇದರಲ್ಲಿ ಬಹುಮುಖ್ಯ ಬದಲಾವಣೆ ಎಂಬಂತೆ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯಲ್ಲಿ ಗಣನೀಯ ಬದಲಾವಣೆ ತರಲಾಗಿದೆ. 2024ರ ಟಿ20 ವಿಶ್ವಕಪ್ ವಿಭಿನ್ನ ಸ್ವರೂಪದಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸುವ 20 ದೇಶಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುವುದು ಎಂದು ಐಸಿಸಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನ್ಯೂಜಿಲೆಂಡ್ ಗೆ ಆಘಾತ; ಭಾರತ ವಿರುದ್ಧ 3ನೇ ಟಿ20 ಪಂದ್ಯದಿಂದ ನಾಯಕ ಕೇನ್ ವಿಲಿಯಮ್ಸನ್ ಔಟ್!
ಇತ್ತೀಚೆಗೆ ಅಂತ್ಯಗೊಂಡ ಟೂರ್ನಿಯಲ್ಲಿ ಆರಂಭಿಕ ಗ್ರೂಪ್‌ಗ ಹಂತದಲ್ಲಿ 8 ತಂಡಗಳು ಆಡಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆದಿದ್ದವು. ಇದರಲ್ಲಿ ಈಗ ಬದಲಾವಣೆ ತರಲಾಗಿದೆ. 2024ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಈ ಬದಲಾವಣೆಗಳನ್ನು ಕಾಣಬಹುದಾಗಿದೆ. ಮುಂದಿನ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯು ವೆಸ್ಟ್ ಇಂಡೀಸ್ ಮತ್ತು ಯುಎಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ಐಸಿಸಿ ಈಗಾಗಗಲೇ ಖಾತ್ರಿ ಪಡಿಸಿರುವ ಹಾಗೆ 2022ರ ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದಲ್ಲಿನ ಎರಡು ಗುಂಪುಗಳಲ್ಲಿ ಅಗ್ರ 4ರಲ್ಲಿ ಸ್ಥಾನ ಪಡೆದ ಒಟ್ಟು 8 ತಂಡಗಳು ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿವೆ. ಇದರ ಜೊತೆಗೆ ಶ್ರೇಯಾಂಕ ಆಧಾರಿತವಾಗಿ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಅರ್ಹತೆ ಪಡೆಯುವ ಸಾಧ್ಯತೆ ಇದೆ. ಇನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ತಂಡಗಳು ಆತಿಥ್ಯ ವಹಿಸಿರುವ ಸಲುವಾಗಿ ನೇರ ಅರ್ಹತೆ ಪಡೆಯಲಿವೆ. ಆದ್ದರಿಂದ ಒಟ್ಟಾರೆ 12 ತಂಡಗಳ ಸ್ಥಾನ ಈಗಾಗಗಲೇ ಖಾತ್ರಿಯಾಗಿದೆ. ಈಗ ಟೂರ್ನಿಯಲ್ಲಿ ಖಾಲಿ ಇರುವ ಸ್ಥಾನಕ್ಕೆ 8 ತಂಡಗಳ ಆಯ್ಕೆ ಸಲುವಾಗಿ ಐಸಿಸಿ ಹೊಸ ಕ್ರಮ ಆಯ್ಕೆ ಮಾಡಿದೆ. ಈ ಮೊದಲಿನಂತೆ ಜಾಗತಿಕ ಮಟ್ಟದ ಅರ್ಹತಾ ಟೂರ್ನಿಯನ್ನು ಕೈಬಿಡಲಾಗಿದೆ. ಇದರ ಬದಲು ಪ್ರಾಂತೀಯ ವಿಭಾಗದಲ್ಲಿನ ಅರ್ಹತಾ ಸುತ್ತಿನ ಮೂಲಕ ಅಂತಿಮ 8 ತಂಡಗಳ ಆಯ್ಕೆ ಮಾಡಲಾಗುವುದು.
ಇದನ್ನೂ ಓದಿ: ನ್ಯೂಜಿಲೆಂಡ್ ಪ್ರವಾಸ: ದ್ರಾವಿಡ್ ಗೆ ವಿಶ್ರಾಂತಿ ಪ್ರಶ್ನಿಸಿದ ರವಿಶಾಸ್ತ್ರಿಗೆ ಖಡಕ್ ಉತ್ತರ ಕೊಟ್ಟ ಆರ್ ಅಶ್ವಿನ್
ಆಫ್ರಿಕಾ ವಿಭಾಗಕ್ಕೆ ವಿಭಾಗಕ್ಕೆ 2 ಸ್ಥಾನಗಳನ್ನು ಹಂಚಲಾಗಿದೆ. 4 ಸ್ಥಾನಗಳಿಗೆ ಏಷ್ಯಾ ಮತ್ತು ಯೂರೋಪ್ ಭಾಗದ ರಾಷ್ಟ್ರಗಳು ಪೈಪೋಟಿ ನಡೆಸಲಿವೆ. ಬಾಕಿ ಉಳಿದ 2 ಸ್ಥಾನಗಳಿಗೆ ಅಮೆರಿಕ ಮತ್ತು ಏಷ್ಯಾ ಪೆಸಿಫಿಕ್ ಭಾಗದ ರಾಷ್ಟ್ರಗಳು ಪೈಪೋಟಿ ನಡೆಸಲಿವೆ. ಈ ಭಾಗದ ರಾಷ್ಟ್ರಗಳು ಕೊನೇ 8 ಸ್ಥಾನಗಳ ಸಲುವಾಗಿ ಪ್ರಾಂತೀಯ ಭಾಗದ ಟೂರ್ನಿಗಳಲ್ಲಿ ಸ್ಪರ್ಧೆಗೆ ಇಳಿಯಲಿವೆ.
ಹೀಗಾಗಿ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 12+8 ತಂಡಗಳು ಅಂದರೆ 20 ತಂಡಗಳು ಪಾಲ್ಗೊಳ್ಳುವುದು ಖಚಿತ. ಹೀಗಾಗಿ ಈ ಟೂರ್ನಿಯಲ್ಲಿ ಸೂಪರ್-12 ಹಂತದ ಪಂದ್ಯಗಳು ನಡೆಯುವುದು ಸಾಧ್ಯವಿಲ್ಲ. ಇನ್ನು 2022ರ ಆವೃತ್ತಿಯಲ್ಲಿ 8+8 ಒಟ್ಟು 16 ತಂಡಗಳಿಗೆ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಮುಂದಿನ ಆವೃತ್ತಿಯಲ್ಲಿ 4 ಹೆಚ್ಚುವರಿ ತಂಡಗಳಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಟೂರ್ನಿಯ ನಾಕ್‌ಔಟ್ ಹಂತದಲ್ಲಿ ಬದಲಾವಣೆ ತರಲಾಗಿಲ್ಲ. ಎಂದಿನಂತೆ ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14,000 ರನ್ ಗಡಿ ದಾಟಿದ ಆಸಿಸ್ ದೈತ್ಯ ಸ್ಟೀವ್ ಸ್ಮಿತ್!
ಐಪಿಎಲ್ ಮಾದರಿ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಪಂದ್ಯಗಳನ್ನು ನಡೆಸುವ ಬಗ್ಗೆ ಐಸಿಸಿ ಆಲೋಚನೆ ಮಾಡಿತ್ತು. ಆದರೆ, ಸೆಮಿಫೈನಲ್ಸ್ ಮತ್ತು ಫೈನಲ್ ಮಾದರಿಯನ್ನೇ ಕಾಯ್ದುಕೊಂಡಿದೆ. 2024ರ ಆವೃತ್ತಿಯಲ್ಲಿ ಒಟ್ಟಾರೆ 55 ಪಂದ್ಯಗಳು ನಡೆಯಲಿವೆ. ಮೂರಲ್ಲಿ ಒಂದು ಭಾಗದಷ್ಟು ಪಂದ್ಯಗಳು ಅಮೆರಿಕದ ಆತಿಥ್ಯದಲ್ಲಿ ನಡೆಯಲಿವೆ. ಬಹುಪಾಲು ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ಜರುಗಲಿದೆ. 2030ರ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಬಹುಪಾಲು ಬದಲಾವಣೆ ಆಗಲಿದೆ ಎಂದು ಐಸಿಸಿ ಹೇಳಿದೆ.
2021 ಮತ್ತು 2022 ರ ಆವೃತ್ತಿಗಳಲ್ಲಿ, ಮೊದಲ ಸುತ್ತನ್ನು ಸೂಪರ್ 12 ಎಂದು ಅನುಸರಿಸಲಾಗಿತ್ತು. ಆದರೆ ಮುಂದಿನ ಪಂದ್ಯಾವಳಿಯಲ್ಲಿ, ಪ್ರತಿ ನಾಲ್ಕು ಗುಂಪುಗಳಿಂದ ಅಗ್ರ ಎರಡು ತಂಡಗಳು ಸೂಪರ್ ಎಂಟು ಹಂತಕ್ಕೆ ಪ್ರಗತಿ ಹೊಂದುತ್ತವೆ, ಅಲ್ಲಿ ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಸುತ್ತಿನ ನಂತರ ಸೂಪರ್ ಎಂಟು ಹಂತ ನಡೆಯಲಿದೆ. ನಂತರ, ಎರಡು ಸೂಪರ್ ಎಂಟು ಗುಂಪುಗಳಲ್ಲಿ ಅಗ್ರ ಎರಡು ತಂಡಗಳು ಸೆಮಿ-ಫೈನಲ್‌ಗೆ ಹೋಗುತ್ತವೆ, ಅದನ್ನು ಫೈನಲ್‌ಗೆ ಅನುಸರಿಸಲಾಗುತ್ತದೆ. 2024 ರ ಪಂದ್ಯಾವಳಿಯ ಅಂತಿಮ ಎಂಟು ಸ್ಥಾನಗಳನ್ನು ಪ್ರಾದೇಶಿಕ ಆಟದಲ್ಲಿ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು: ಚೇತನ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮತಿ ವಜಾ
"ದಕ್ಷಿಣ ಆಫ್ರಿಕಾವು 2024 ರ ಅರ್ಹತೆಯನ್ನು ತಮ್ಮ ಮೊದಲ ಎಂಟು ಸ್ಥಾನಗಳ ಬಲದಿಂದ ಪಡೆದರೆ, ಜಿಂಬಾಬ್ವೆ ತಮ್ಮ ಅಭಿಯಾನದ ಪ್ರಬಲ ಆರಂಭವನ್ನು ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಪ್ರಾದೇಶಿಕ ಅರ್ಹತೆಗೆ ಹಿಂತಿರುಗಲು ಸೂಪರ್ 12 ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಗಳಿಸಿತು" ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಉಳಿದಂತೆ ಆಫ್ರಿಕಾ, ಏಷ್ಯಾ ಮತ್ತು ಯುರೋಪ್ ನ ಎರಡು ತಂಡಗಳು ಅರ್ಹತಾ ಸ್ಥಾನಗಳನ್ನು ಹೊಂದಿದ್ದು, ಅಮೆರಿಕ ಮತ್ತು ಪೂರ್ವ-ಏಷ್ಯಾ ಪೆಸಿಫಿಕ್ ಪ್ರದೇಶಗಳಿಗೆ ಒಂದು ಸ್ಥಾನವಿರಲಿದೆ.