ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14,000 ರನ್ ಗಡಿ ದಾಟಿದ ಆಸಿಸ್ ದೈತ್ಯ ಸ್ಟೀವ್ ಸ್ಮಿತ್!

ಆಸ್ಟ್ರೇಲಿಯದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14,000 ರನ್ ಗಡಿ ದಾಟಿದ್ದು, ಆ ಮೂಲಕ ಅತಿ ವೇಗದಲ್ಲಿ ಈ ಸಾಧನೆ ಮಾಡಿದ ಆಸಿಸ್  ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್

ಸಿಡ್ನಿ: ಆಸ್ಟ್ರೇಲಿಯದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14,000 ರನ್ ಗಡಿ ದಾಟಿದ್ದು, ಆ ಮೂಲಕ ಅತಿ ವೇಗದಲ್ಲಿ ಈ ಸಾಧನೆ ಮಾಡಿದ ಆಸಿಸ್  ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್ (SCG) ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಈ ಸಾಧನೆ ಮಾಡಿದ್ದು, ಈ ಪಂದ್ಯದಲ್ಲಿ, ಸ್ಮಿತ್ 114 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 94 ರನ್ ಗಳಿಸಿದರು.  ಈ ಪಂದ್ಯದ ಅದ್ಭುತ ಬ್ಯಾಟಿಂಗ್ ನೊಂದಿಗೆ ಸ್ಟೀವ್ ಸ್ಮಿತ್ ಒಟ್ಟು 288 ಪಂದ್ಯಗಳಲ್ಲಿ, 328 ಇನ್ನಿಂಗ್ಸ್‌ಗಳಲ್ಲಿ, ಸ್ಟೀವ್ 49.52 ಸರಾಸರಿಯಲ್ಲಿ 14,065 ರನ್ ಗಳಿಸಿದ್ದಾರೆ. ಈ ಪೈಕಿ 40 ಶತಕಗಳು ಮತ್ತು 69 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಪೈಕಿ ಅತ್ಯುತ್ತಮ ವೈಯಕ್ತಿಕ ಸ್ಕೋರ್ 239 ರನ್ ಗಳಾಗಿದ್ದು, ಅವರ ಸ್ಟ್ರೈಕ್ ರೇಟ್ ಎಲ್ಲಾ ಸ್ವರೂಪಗಳಲ್ಲಿ 65.44 ಆಗಿದೆ.

ಇದರೊಂದಿಗೆ ಅವರು ಡೇವಿಡ್ ಬೂನ್ (13,386) ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೂ ಸ್ಮಿತ್ ಪಾತ್ರರಾಗಿದ್ದಾರೆ. 

ಉಳಿದಂತೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತೀ  ಹೆಚ್ಚು ರನ್ ಗಳಿಸಿದ ಅಗ್ರ ಐದು ಆಟಗಾರರೆಂದರೆ ರಿಕಿ ಪಾಂಟಿಂಗ್ (27,368), ಸ್ಟೀವ್ ವಾ (18,496), ಅಲನ್ ಬಾರ್ಡರ್ (17,698), ಮೈಕೆಲ್ ಕ್ಲಾರ್ಕ್ (17,112) ಮತ್ತು ಡೇವಿಡ್ ವಾರ್ನರ್ (16,612).

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಅಗ್ರ ಐದು ರನ್ ಗಳಿಸಿದವರೆಂದರೆ: ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ (34,357), ಶ್ರೀಲಂಕಾದ ಕುಮಾರ ಸಂಗಕರ (28,016), ರಿಕಿ ಪಾಂಟಿಂಗ್ (27,483), ಶ್ರೀಲಂಕಾ ಬ್ಯಾಟರ್ ಮಹೇಲಾ ಜಯವರ್ಧನೆ (25,957) ಮತ್ತು ದಕ್ಷಿಣ ಆಫ್ರಿಕಾದ ಶ್ರೇಷ್ಠ ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ (25,534) 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com