1ನೇ ಏಕದಿನ: ದಾಖಲೆ ಪಟ್ಟಿಗೆ ಸೇರಿದ ವಿಲಿಯಮ್ಸನ್-ಲಾಥಮ್ ಜೊತೆಯಾಟ!
ಭಾರತದ ವಿರುದ್ಧದ ಭರ್ಜರಿ ಬ್ಯಾಟಿಂಗ್ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಜಯ ತಂದಿತ್ತ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಾಥಮ್ ರ ಅಮೋಘ ಜೊತೆಯಾಟ ಇದೀಗ ದಾಖಲೆ ಪಟ್ಟಿಗೆ ಸೇರಿದೆ.
Published: 25th November 2022 04:28 PM | Last Updated: 25th November 2022 04:28 PM | A+A A-

ವಿಲಿಯಮ್ಸನ್-ಲಾಥಮ್ ಜೊತೆಯಾಟ
ಆಕ್ಲೆಂಡ್: ಭಾರತದ ವಿರುದ್ಧದ ಭರ್ಜರಿ ಬ್ಯಾಟಿಂಗ್ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಜಯ ತಂದಿತ್ತ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಾಥಮ್ ರ ಅಮೋಘ ಜೊತೆಯಾಟ ಇದೀಗ ದಾಖಲೆ ಪಟ್ಟಿಗೆ ಸೇರಿದೆ.
ಹೌದು.. ಇಂದು ಆಕ್ಲೆಂಡ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 307ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 47.1 ಓವರ್ ನಲ್ಲಿಯೇ 309ರನ್ ಗಳಿಸಿ ಇನ್ನೂ 17 ಎಸೆತಗಳು ಬಾಕಿ ಇರುವಂತೆ ಜಯ ಗಳಿಸಿತು. ಕಿವೀಸ್ ಜಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಲಾಥಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಮಹತ್ತರ ಪಾತ್ರ ನಿರ್ವಹಿಸಿದರು. ಲಾಥಮ್ ಕೇವಲ 104 ಎಸೆತಗಳಲ್ಲಿ ಬರೊಬ್ಬರಿ 146ರನ್ ಚಚ್ಚಿದರೆ, ನಾಯಕ ವಿಲಿಯಮ್ಸನ್ 98 ಎಸೆತಗಳಲ್ಲಿ ಅಜೇಯ 94ರನ್ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.
ಇದನ್ನೂ ಓದಿ: 1ನೇ ಏಕದಿನ: ತವರಿನಲ್ಲಿ 13 ಗೆಲುವು: ದಾಖಲೆ ಬರೆದ ನ್ಯೂಜಿಲೆಂಡ್
ಈ ಅಮೋಘ ಜೊತೆಯಾಟದೊಂದಿಗೆ ವಿಲಿಯಮ್ಸನ್-ಲಾಥಮ್ ಜೋಡಿ ದಾಖಲೆ ನಿರ್ಮಿಸಿದೆ. ವಿಲಿಯಮ್ಸನ್-ಲಾಥಮ್ ಸಿಡಿಸಿದ ಅಜೆಯೇ 221 ರನ್ ಜೊತೆಯಾಟ ನ್ಯೂಜಿಲೆಂಡ್ ಪರ ದಾಖಲಾದ 2ನೇ ಅತಿದೊಡ್ಡ ಅಜೇಯ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ. ಇದಕ್ಕೂ ಮೊದಲು 2013ರಲ್ಲಿ ಡಬ್ಲಿನ್ ನಲ್ಲಿ ಇಯಾನ್ ಮೋರ್ಗನ್ ಮತ್ತು ರವಿ ಬೋಪಾರಾ ಜೋಡಿ ಅಜೇಯ 226 ರನ್ ಕಲೆಹಾಕಿತ್ತು. ಇದು ನ್ಯೂಜಿಲೆಂಡ್ ಪರ ದಾಖಲಾದ ಅತೀ ದೊಡ್ಡ ಅಜೇಯ ಜೊತೆಯಾಟವಾಗಿದೆ.
Unbeaten 200+ partnerships for fourth wkt or lower in ODI chases
226* E Morgan - R Bopara Dublin 2013
221*K Williamson - T Latham Auckland 2022