ಭಾರತ vs ದ.ಆಫ್ರಿಕಾ: ದಾಖಲೆ ಬರೆದ ರೋಹಿತ್-ರಾಹುಲ್ ಜೋಡಿ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿರುವ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಜೋಡಿ ದಾಖಲೆ ನಿರ್ಮಿಸಿದೆ.
ರಾಹುಲ್-ರೋಹಿತ್ ಶರ್ಮಾ ಜೋಡಿ
ರಾಹುಲ್-ರೋಹಿತ್ ಶರ್ಮಾ ಜೋಡಿ

ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿರುವ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಜೋಡಿ ದಾಖಲೆ ನಿರ್ಮಿಸಿದೆ.

ಗುವಾಹತಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಕ್ಷರಶಃ ರನ್ ಗಳ ಸುರಿಮಳೆ ಗೈದಿದೆ. ನಿಗಧಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಬರೊಬ್ಬರಿ 237 ರನ್ ಗಳ ಬೃಹತ್ ಗುರಿ ನೀಡಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್ ಗೆ 96 ರನ್ ಗಳ ಅಮೋಘ ಜೊತೆಯಾಟ ನೀಡಿ ಭಾರತಕ್ಕೆ ಭರ್ಜರಿ ಆರಂಭ ನೀಡಿತು.

ಕೆಎಲ್ ರಾಹುಲ್ ಕೇವಲ 26 ಎಸೆತೆಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಮೇತ 76 ರನ್ ಸಿಡಿಸಿದರೆ, 37 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ರೋಹಿತ್ ಶರ್ಮಾ 43 ರನ್ ಪೇರಿಸಿದರು. ಆ ಮೂಲಕ ಅಮೋಘ 96 ರನ್ ಗಳ ಜೊತೆಯಾಟ ನೀಡಿತು. ಆ ಮೂಲಕ ತಮ್ಮ ಜೊತೆಯಾಟದ 15ನೇ 50ಕ್ಕೂ ಅಧಿಕ ರನ್ ಗಳ ಜೊತೆಯಾಟವಾಡಿತು.

ಇದು ಅಂತಾಷ್ಟ್ರೀಯ ಟಿ20 ಮಾದರಿಯಲ್ಲಿ ಜೋಡಿಯೊಂದರಿಂದ ದಾಖಲಾದ ಅತೀ ಹೆಚ್ಚಿನ  50ಕ್ಕೂ ಅಧಿಕ ರನ್ ಗಳ ಜೊತೆಯಾಟವಾಗಿದೆ. ಈ ಹಿಂದೆ ಇದೇ ಜೋಡಿ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮಹಮದ್ ರಿಜ್ವಾನ್ ಜೋಡಿ ಕಲೆಹಾಕಿದ್ದ 14 ಬಾರಿ 50ಕ್ಕೂ ಹೆಚ್ಚು ರನ್ ಗಳ ಜೊತೆಯಾಟದ ದಾಖಲೆಯನ್ನು ಸರಿಗಟ್ಟಿತ್ತು. ಈ ಬಾರಿ ಅದನ್ನು ಹಿಂದಿಕ್ಕಿದೆ.

Most 50+ partnerships in T20Is
15 Rohit Sharma - KL Rahul *
14 Babar Azam - Mohd Rizwan
13 P Stirling - K O'Brien

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com