
ಆಫ್ರಿಕನ್ನರ ಬ್ಯಾಟಿಂಗ್
ಇಂದೋರ್: ಭಾರತದ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸಿರುವ ದಕ್ಷಿಣಆಫ್ರಿಕಾ ತಂಡ 2 ದಾಖಲೆ ನಿರ್ಮಾಣ ಮಾಡಿದೆ.
ಹೌದು.. ಭಾರತದ ವಿರುದ್ಧದ ಇಂದಿನ ಪಂದ್ಯದಲ್ಲಿ 227ರನ್ ಗಳ ಬೃಹತ್ ಮೊತ್ತ ಪೇರಿಸಿರುವ ದಕ್ಷಿಣ ಆಫ್ರಿಕಾ ತಂಡ 2 ವಿಶೇಷ ದಾಖಲೆ ಬರೆದಿದ್ದು, ಭಾರತದ ವಿರುದ್ಧ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ಮತ್ತು ಭಾರತದ ವಿರುದ್ಧ ಗರಿಷ್ಠ ಸ್ಕೋರ್ ದಾಖಲೆ ನಿರ್ಮಿಸಿದೆ.
ಇದನ್ನೂ ಓದಿ: 3ನೇ ಟಿ20: ದ.ಆಫ್ರಿಕಾ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ 228ರನ್ ಗಳ ಬೃಹತ್ ಗುರಿ!
ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್
ಇನ್ನು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಒಟ್ಟಾರೆ 16 ಸಿಕ್ಸರ್ ಗಳನ್ನು ಸಿಡಿಸಿದ್ದು, ಈ ಪೈಕಿ ಶತಕ ವೀರ ರೋಸ್ಸೊ ಒಬ್ಬರೇ 8 ಸಿಕ್ಸರ್ ಸಿಡಿಸಿದ್ದಾರೆ. ಡಿಕಾಕ್ 4, ಸ್ಟಬ್ಸ್ 1 ಮತ್ತು ಮಿಲ್ಲರ್ 3 ಸಿಕ್ಸರ್ ಸಿಡಿಸಿ ಒಟ್ಟಾರೆ ಇಂದು ಭಾರತದ ವಿರುದ್ದ ಒಟ್ಟು 16 ಸಿಕ್ಸರ್ ಗಳು ಹರಿದಿವೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ವಿರುದ್ಧ ಟಿ20 ಪಂದ್ಯದಲ್ಲಿ ಸಿಡಿಸಿದ 3ನೇ ಗರಿಷ್ಠ ಸಿಕ್ಸರ್ ಗಳಾಗಿವೆ. ಈ ಹಿಂದೆ 2016ರಲ್ಲಿ ಲೌಡರ್ ಹಿಲ್ ನಲ್ಲಿ ನಡೆದ ಪಂದ್ಯದಲ್ಲಿ 21 ಸಿಕ್ಸರ್ ಗಳು ಬಂದಿದ್ದವು. ಇದು ಭಾರತದ ವಿರುದ್ದ ಬಂದ ಗರಿಷ್ಟ ಸಿಕ್ಸರ್ ಗಳಾಗಿದ್ದು, ಇಂದಿನ ಪಂದ್ಯ 3ನೇ ಸ್ಥಾನದಲ್ಲಿದೆ.
Most sixes vs India in a T20I
21 WI Lauderhill 2016
16 Aus Bridgetown 2010
16 SA Indore 2022 *
15 WI Hyderabad 2019
ಇದನ್ನೂ ಓದಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರೆಸ್ಟ್? ವೈರಲ್ ಫೋಟೋ ಹಿಂದಿನ ಅಸಲೀಯತ್ತೇನು?
ಗರಿಷ್ಠ ಸ್ಕೋರ್
ಅಂತೆಯೇ ಇಂದು ದಕ್ಷಿಣ ಆಫ್ರಿಕಾ ತಂಡ ಕಲೆಹಾಕಿದ 227 ರನ್ ಗಳು ಭಾರತದ ವಿರುದ್ಧ ಹರಿಣಗಳು ಟಿ20ಯಲ್ಲಿ ಗಳಿಸಿದ 2ನೇ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2016ರಲ್ಲಿ ಲೌಡರ್ ಹಿಲ್ ನಲ್ಲಿ ನಡೆದ ಪಂದ್ಯದಲ್ಲಿ ಆಫ್ರಿಕನ್ನರು 245 ರನ್ ಕಲೆಹಾಕಿದ್ದರು. ಇದು ಭಾರತದ ವಿರುದ್ಧ ಟಿ20ಯಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ಇಂದಿನ ಪಂದ್ಯ 3ನೇ ಸ್ಥಾನದಲ್ಲಿದೆ.
Highest T20I totals vs India
245/6 by WI Lauderhill 2016
227/3 by SA Indore 2022 *
221/3 by SA Guwahati 2022
221/5 by Ire Dublin 2022