3ನೇ ಟಿ20: ಭಾರತದ ವಿರುದ್ಧ ದ.ಆಫ್ರಿಕಾಗೆ 49 ರನ್ ಗಳ ಭರ್ಜರಿ ಜಯ, ಟಿ20 ಸರಣಿ ಟೀಂ ಇಂಡಿಯಾ ತೆಕ್ಕೆಗೆ

ಭಾರತದ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 49ರನ್ ಗಳ ಗೆಲುವು ಸಾಧಿಸಿದೆ. ಆ ಮೂಲಕ 2-1 ಅಂತರದಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಜಯಿಸಿದೆ.
ಆಫ್ರಿಕಾಗೆ ಜಯ
ಆಫ್ರಿಕಾಗೆ ಜಯ

ಇಂದೋರ್: ಭಾರತದ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 49ರನ್ ಗಳ ಗೆಲುವು ಸಾಧಿಸಿದೆ. ಆ ಮೂಲಕ 2-1 ಅಂತರದಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಜಯಿಸಿದೆ.

ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ರಿಲೋ ರೋಸೋ ಶತಕ ಹಾಗೂ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ರ ಅಬ್ಬರಕ್ಕೆ ಟೀಂ ಇಂಡಿಯಾ ಲೆಕ್ಕಾಚಾರ ಉಲ್ಟಾ ಆಗಿದ್ದು, ಆಫ್ರಿಕಾ ನೀಡಿದ 228ರನ್ ಬೃಹತ್ ಮೊತ್ತ ಚೇಸ್ ಮಾಡಲು ಟೀಂ ಇಂಡಿಯಾ ಹರಸಾಹಸ ಪಟ್ಟಿತು. ದಿನೇಶ್ ಕಾರ್ತಿಕ್, ದೀಪಕ್ ಚಹಾರ್ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ.

ಕೊನೆಗೆ ಟೀಂ ಇಂಡಿಯಾ 18.3 ಓವರ್‌ಗಳಲ್ಲಿ 178 ರನ್ ಸಿಡಿಸಿ ಆಲೌಟ್ ಆಯಿತು. ಇದರೊಂದಿಗೆ ಸೌತ್ ಆಫ್ರಿಕಾ 49 ರನ್ ಗೆಲುವು ದಾಖಲಿಸಿತು. ಅಂತಿಮ ಟಿ20 ಪಂದ್ಯ ಗೆದ್ದು ಟಿ20 ಸರಣಿ ಕ್ಲೀನ್ ಸ್ಪೀಪ್ ಗುರಿ ಹೊಂದಿದ್ದ ಟೀಂ ಇಂಡಿಯಾ ಇದೀಗ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.  

ಆಫ್ರಿಕಾ ನೀಡಿದ ಬೃಹತ್ ಮೊತ್ತ ಬೆನ್ನು ಹತ್ತಿದ ಭಾರತ ತಂಡ ರೋಹಿತ್ ಶರ್ಮಾ ವಿಕೆಟ್ ಪತನದ ಮೂಲಕ ಆರಂಭಿಕ ಆಘಾತ ಎದುರಿಸಿತು. ಬಳಿಕ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಮತ್ತು ದೀಪಕ್ ಚಹರ್ ಆಸರೆಯಾದರೂ ಆವರ ಆಟ ಕೂಡ ಹೆಚ್ಚು ಹೊತ್ತ ಸಾಗಲಿಲ್ಲ.

ದಿನೇಶ್ ಕಾರ್ತಿಕ್ 46 ರನ್ ಗಳಿಸಿ ಔಟಾದರೆ, ಚಹರ್ 31 ರನ್ ಗಳಿಸಿ ನಿರ್ಗಮಿಸಿದರು. ಕಳೆದ ಪಂದ್ಯದ ಹೀರೋ ಸೂರ್ಯ ಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಕೂಡ ಬೇಗನೆ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ಮುಳುವಾಯಿತು. ಅಂತಿಮವಾಗಿ ಭಾರತ ತಂಡ 18.3 ಓವರ್ ನಲ್ಲಿ  178 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿ 49ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com