
ನವದೆಹಲಿ: ಆತಿಥೇಯ ಟೀಂ ಇಂಡಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕೇವಲ 99 ರನ್ ಗಳಿಗೆ ಆಲೌಟ್ ಆಗಿದೆ.
ನವದೆಹಲಿಯಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದರು. ಆಫ್ರಿಕಾ ತಂಡ ಕೇವಲ 99 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ ಗೆಲ್ಲಲು 100 ರನ್ ಗುರಿ ನೀಡಿದೆ.
ಆರಂಭಿಕರಾಗಿ ಕಣಕ್ಕೀಳಿದ ಜನ್ನೆಮಾನ್ ಮಲಾನ್ 15 ಹಾಗೂ ಡಿಕಾಕ್ 6 ರನ್ ಗಳಿಗೆ ಔಟಾದರು. ನಂತರ ಬಂದ ಹೆಂಡ್ರಿಕ್ಸ್ ಯಾರೂ ಹೆಚ್ಚು ಸಮಯ ಕಣದಲ್ಲಿ ನಿಲ್ಲುವುದಿಲ್ಲ. ಅವರು 3 ರನ್ ಗೆ ಔಟಾದರೆ, ಮಾರ್ಕ್ರಾಮ್ 9 ರನ್ ಗೆ ಔಟಾದರು.
ಆದರೆ ಕ್ಲಾಸೆನ್ ಮಾತ್ರ 34 ರನ್ ಬಾರಿಸಿ ತಂಡಕ್ಕೆ ಸ್ವಲ್ಪ ಚೇತರಿಕೆ ತಂದುಕೊಟ್ಟರು. ಅವರ ಬಳಿಕ ಬಂದ ಮಿಲ್ಲರ್ ಸಹ 7 ರನ್ ಗೆ ಔಟಾದರು. ಇನ್ನು ಜಾನ್ಸೆನ್ 14 ರನ್ ಬಾರಿಸಿ ಕುಲ್ದೀಪ್ ಯಾವ್ ಗೆ ವಿಕೆಟ್ ಒಪ್ಪಿಸಿದರು.
ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಕುಲ್ದೀಪ್ ಯಾವ್ 4, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್ ತಲಾ 2 ವಿಕೆಟ್ ಪಡೆದಿದ್ದಾರೆ.
Advertisement