ಟಿ20 ವಿಶ್ವಕಪ್: 30 ಎಸೆತಗಳಲ್ಲಿ 65 ರನ್, 4ನೇ ಬಾರಿ 50ಕ್ಕೂ ಹೆಚ್ಚು ರನ್ ಜೊತೆಯಾಟ, ಕೊಹ್ಲಿ-ಸೂರ್ಯ ಕುಮಾರ್ ದಾಖಲೆ

ನೆದರ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ ವಿಶೇಷ ದಾಖಲೆ ನಿರ್ಮಿಸಿದೆ.
ವಿರಾಟ್ ಕೊಹ್ಲಿ-ಸೂರ್ಯ ಕುಮಾರ್ ಯಾದವ್
ವಿರಾಟ್ ಕೊಹ್ಲಿ-ಸೂರ್ಯ ಕುಮಾರ್ ಯಾದವ್

ಸಿಡ್ನಿ: ನೆದರ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ ವಿಶೇಷ ದಾಖಲೆ ನಿರ್ಮಿಸಿದೆ.

ನೆದರ್ಲೆಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತದಲ್ಲಿ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ ಅಜೇಯ 95ರನ್ ಗಳ ಬೃಹತ್ ಜೊತೆಯಾಟವಾಡಿತ್ತು. 

ಟಿ20 ಕ್ರಿಕೆಟ್ ನಲ್ಲಿ ಇದು ಈ ಜೋಡಿಯ 4ನೇ 50ಕ್ಕೂ ಹೆಚ್ಚು ರನ್ ಗಳ ಜೊತೆಯಾಟವಾಗಿದ್ದು, ಈ ಹಿಂದೆ ಈ ಜೋಡಿ ಮೊದಲ ಬಾರಿಗೆ ದುಬೈನಲ್ಲಿ ಹಾಂಕಾಂಗ್ ವಿರುದ್ಧ ಅಜೇಯ 98 ರನ್ ಗಳ ಜೊತೆಯಾಟವಾಡಿತ್ತು, ಬಳಿಕ ಹೈದರಾಬಾದ್ ನಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ 104ರನ್ ಗಳ ಜೊತೆಯಾಟವಾಡಿತ್ತು. ಬಳಿಕ ಗುವಾಹತಿಯಸ್ಸಿ ದಕ್ಷಿಣ ಆಫ್ರಿಕಾ ವಿರುದ್ಧ 102ರನ್ ಗಳ ಜೊತೆಯಾಟವಾಡಿತ್ತು.

ಇದೀಗ ನಾಲ್ಕನೇ ಬಾರಿಗೆ ನೆದರ್ಲೆಂಡ್ ವಿರುದ್ಧ ಅಜೇಯ 95ರನ್ ಗಳ ಜೊತೆಯಾಟವಾಡಿದೆ. ಈ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಕೇವಲ 44 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ ಅಜೇಯ 62 ರನ್ ಕಲೆಹಾಕಿದರೆ, ಸೂರ್ಯ ಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 51ರನ್ ಸಿಡಿಸಿದರು. 

STAT: Kohli - Surya 50+ partnerships in T20Is
98* off 42 vs HK Dubai
104 off 62 vs Aus Hyderabad
102 off 42 vs SA Guwahati
95* off 48 vs Net Sydney

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com