17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ನೇಪಾಳ ಕ್ರಿಕೆಟ್ ತಂಡದ ನಾಯಕನ ವಿರುದ್ಧ ದೂರು ದಾಖಲು!

17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚ್ಚನೆ (Sandeep Lamichhane) ವಿರುದ್ಧ ದೂರು ದಾಖಲಾಗಿದೆ.
ಸಂದೀಪ್ ಲಮಿಚ್ಚನೆ ವಿರುದ್ಧ ಅತ್ಯಾಚಾರ ದೂರು
ಸಂದೀಪ್ ಲಮಿಚ್ಚನೆ ವಿರುದ್ಧ ಅತ್ಯಾಚಾರ ದೂರು
Updated on

ಕಠ್ಮಂಡು: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚ್ಚನೆ (Sandeep Lamichhane) ವಿರುದ್ಧ ದೂರು ದಾಖಲಾಗಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ 17 ವರ್ಷದ ಅಪ್ರಾಪ್ತ ಯುವತಿ, ನೇಪಾಳ ಕ್ರಿಕೆಟ್ ಆಟಗಾರ ಹಾಗೂ ನೇಪಾಳ ಕ್ರಿಕೆಟ್ ತಂಡದ ನಾಯಕ (Nepal Cricket Team Captain) ಸಂದೀಪ್ ಲಮಿಚ್ಚನೆ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಕಠ್ಮಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಕುರಿತು ಪೊಲೀಸ್ ಮೂಲಗಳು ಸಹ ಖಚಿತಪಡಿಸಿವೆ. 

ದೂರಿನಲ್ಲಿ ಕಠ್ಮಂಡುವಿನ ಖಾಸಗಿ ಹೊಟೇಲ್ ಒಂದರಲ್ಲಿ ತನ್ನ ಮೇಲೆ ನೇಪಾಳ ಕ್ರಿಕೆಟ್ ತಂಡದ ಆಟಗಾರ ಸಂದೀಪ್ ಲಮಿಚ್ಚನೆ ಅತ್ಯಾಚಾರ (Sandeep Lamichhane Rape Case) ಎಸಗಿದ್ದಾಗಿ 17 ವರ್ಷದ ಅಪ್ರಾಪ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆಗಸ್ಟ್ 21 ರಂದು ಅತ್ಯಾಚಾರ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

'ತಾನು ಕ್ರಿಕೆಟಿಗ ಸಂದೀಪ್ ಲಮಿಚ್ಚನೆ ಅವರ ಅಭಿಮಾನಿಯಾಗಿದ್ದೆ. ವಾಟ್ಸ್​ಆ್ಯಪ್ ಮತ್ತು ಸ್ನಾಪ್​ಚಾಟ್​ಗಳಲ್ಲಿ ಆಗಾಗ ಸಂದೀಪ್ ಲಮಿಚ್ಚನೆ ಜೊತೆ ಚಾಟ್ ಮಾಡುತ್ತಿದೆ. ಅಲ್ಲದೇ ಅವರನ್ನು ಭೇಟಿಯೂ ಆಗುತ್ತಿದೆ. ಮೊದಲ ಭೇಟಿಯಲ್ಲೇ ಸಂದಿಪ್ ಲಮಿಚ್ಚನೆ ನನಗೆ ಪ್ರಪೋಸ್ ಸಹ ಮಾಡಿದ್ದರು. ಆಗಸ್ಟ್ 21 ರಂದು ಕಠ್ಮಂಡುವಿನ ಹೋಟೆಲ್‌ನಲ್ಲಿ ಸಂದೀಪ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಪೊಲೀಸ್ ವರದಿಯ ಪ್ರಕಾರ ಸೆಪ್ಟೆಂಬರ್ 22 ರಂದು ನೇಪಾಳ ಕ್ರಿಕೆಟ್ ತಂಡ ಕೀನ್ಯಾ ಪ್ರವಾಸಕ್ಕೆ ತೆರಳುವ ಮುನ್ನ ಸಂದೀಪ್ ಲಮಿಚಾನೆ ಸಂತೃಸ್ತೆಯನ್ನು ಹೊಟೇಲ್​ನಲ್ಲೇ ಉಳಿಸಿಕೊಂಡಿದ್ದರು. ರಾತ್ರಿ 8 ಗಂಟೆಗೆ ಸಂದೀಪ್ ಲಮಿಚ್ಚನೆ ಮತ್ತು ಸಂತೃಸ್ತೆ ಉಳಿದುಕೊಂಡ ಹೊಟೇಲ್​ಗಳ ಗೇಟ್‌ಗಳನ್ನು ಮುಚ್ಚಿದ್ದರಿಂದ ಆಕೆ ತನ್ನ ಹಾಸ್ಟೆಲ್‌ಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ರಾತ್ರಿಯಿಡೀ ಹೋಟೆಲ್​ನಲ್ಲೇ ಉಳಿಯುವಂತೆ ಸಂದೀಪ್ ಲಮಿಚ್ಚನೆ ಒತ್ತಾಯಿಸಿದ್ದ. ಈ ವೇಳೆ ಆತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎಂದು ಸಹ ಸಂತೃಸ್ತೆ ಆರೋಪಿಸಿದ್ದಾಳೆ.

ವೈದ್ಯಕೀಯ ತಪಾಸಣೆ
ಪೊಲೀಸರು ಇಂತಹ ಗಂಭೀರ ಘಟನೆಗಳಿಗೆ ಸಂವೇದನಾಶೀಲರಾಗಿ ತನಿಖೆ ನಡೆಸುತ್ತೇವೆ. ನಾವು ಸಂತೃಸ್ತೆಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ್ದೇವೆ. ಜೊತೆಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಕಠ್ಮಂಡು ಕಣಿವೆ ಪೊಲೀಸ್ ಕಚೇರಿ ಮುಖ್ಯಸ್ಥ ರವೀಂದ್ರ ಪ್ರಸಾದ್ ಧನುಕ್ ಹೇಳಿದ್ದಾರೆ.

ಈಗೆಲ್ಲಿದ್ದಾರೆ ಸಂದೀಪ್ ಲಮಿಚ್ಚನೆ?
ಸಂದೀಪ್ ಲಾಮಿಚಾನೆ ಆಗಸ್ಟ್ 22 ರಂದು ಕೀನ್ಯಾಗೆ ತೆರಳಿದ್ದು ಐದು ಪಂದ್ಯಗಳ T20I ಸರಣಿಯಲ್ಲಿ ನೇಪಾಳ ತಂಡವನ್ನು ಮುನ್ನಡೆಸಿದ್ದರು. ನೇಪಾಳ ತಂಡವು ಕೀನ್ಯಾ ವಿರುದ್ಧ 3-2 ರಿಂದ ಸರಣಿಯನ್ನು ಗೆದ್ದುಕೊಂಡಿತ್ತು. ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ನಲ್ಲಿ ಭಾಗವಹಿಸಲು 22 ವರ್ಷದ ಸಂದೀಪ್ ಲಮಿಚ್ಚನೆ ವೆಸ್ಟ್ ಇಂಡೀಸ್‌ಗೆ ತೆರಳಿದ್ದಾರೆ ಎನ್ನಲಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com