3ನೇ ಏಕದಿನ ಪಂದ್ಯ: ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ಇಶಾನ್ ಕಿಶನ್

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದ ಟೀಂ ಇಂಡಿಯಾ ಬ್ಯಾಟರ್ ಇಶಾನ್ ಕಿಶನ್ ಭಾರತದ ಕ್ರಿಕೆಟ್ ದಂತಕಥೆ ಎಂಎಸ್ ಧೋನಿ ಅವರ ದಾಖಲೆ ಸರಿಗಟ್ಟಿದ್ದಾರೆ.
ಇಶಾನ್ ಕಿಶನ್ ದಾಖಲೆ
ಇಶಾನ್ ಕಿಶನ್ ದಾಖಲೆ

ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದ ಟೀಂ ಇಂಡಿಯಾ ಬ್ಯಾಟರ್ ಇಶಾನ್ ಕಿಶನ್ ಭಾರತದ ಕ್ರಿಕೆಟ್ ದಂತಕಥೆ ಎಂಎಸ್ ಧೋನಿ ಅವರ ದಾಖಲೆ ಸರಿಗಟ್ಟಿದ್ದಾರೆ.

ಈ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) 64 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್​ಗಳ ಸಹಾಯದಿಂದ 77 ರನ್ ಸಿಡಿಸಿದರು. ಆ ಮೂಲಕ ಸತತ 3ನೇ ಅರ್ಧಶತಕ ಸಿಡಿಸಿದ ಇಶಾನ್​, ಹೊಸ ದಾಖಲೆ ಬರೆದಿದ್ದು ಮಾತ್ರವಲ್ಲದೇ ಟೀಂ ಇಂಡಿಯಾ ಕಂಡ ಶ್ರೇಷ್ಟ ವಿಕೆಟ್ ಕೀಪರ್ ಬ್ಯಾಟರ್ ಧೋನಿ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ 6ನೇ ಆಟಗಾರ ಎನಿಸಿದ್ದಾರೆ. 

2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಧೋನಿ ಸತತ 3 ಅರ್ಧಶತಕ ಬಾರಿಸಿದ್ದರು. ಕ್ರಿಸ್ ಶ್ರೀಕಾಂತ್ (1982), ದಿಲೀಪ್ ವೆಂಗ್​ಸರ್ಕಾರ್ (1985), ಮೊಹಮ್ಮದ್ ಅಜರುದ್ದೀನ್ (1993), ಶ್ರೇಯಸ್ ಅಯ್ಯರ್ (2020) ಸತತ 3 ಅರ್ಧಶತಕ ಸಿಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com