3ನೇ ಏಕದಿನ: ಪಾಕಿಸ್ತಾನದ ಇಮಾಮ್ ಉಲ್ ಹಕ್ ಅಪರೂಪದ ದಾಖಲೆ ಹಿಂದಿಕ್ಕಿದ ಶುಭ್ ಮನ್ ಗಿಲ್

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತದ ಸ್ಫೋಟಕ ಬ್ಯಾಟರ್ ಶುಭ್ ಮನ್ ಗಿಲ್ ಪಾಕಿಸ್ತಾನದ ಇಮಾಮ್ ಉಲ್ ಹಕ್ ಅವರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ದಾಖಲೆ ಹಿಂದಿಕ್ಕಿದ ಶುಭ್ ಮನ್
ದಾಖಲೆ ಹಿಂದಿಕ್ಕಿದ ಶುಭ್ ಮನ್

ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತದ ಸ್ಫೋಟಕ ಬ್ಯಾಟರ್ ಶುಭ್ ಮನ್ ಗಿಲ್ ಪಾಕಿಸ್ತಾನದ ಇಮಾಮ್ ಉಲ್ ಹಕ್ ಅವರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

3ನೇ ಏಕದಿನ ಪಂದ್ಯದಲ್ಲಿ ಕೇವಲ 92 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 85 ರನ್ ಗಳಿಸಿದರು. ಈ ಮೊತ್ತದೊಂದಿಗೆ ಗಿಲ್ ಪಾಕಿಸ್ತಾನದ ಇಮಾಮ್ ಉಲ್ ಹಕ್ ಅವರ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದ ಗಿಲ್, 27 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅಧಿಕ ಏಕದಿನ ರನ್ ದಾಖಲಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

27 ಏಕದಿನ ಪಂದ್ಯಗಳಲ್ಲಿ ಗಿಲ್, 62.48 ಸರಾಸರಿಯಲ್ಲಿ 1437 ರನ್ ಗಳಿಸಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಬ್ಯಾಟರ್​ ಇಮಾನ್-ಉಲ್-ಹಕ್​ರ 4 ವರ್ಷಗಳ ಸಾಧನೆಯನ್ನು ಗಿಲ್ ಹಿಂದಿಕ್ಕಿದ್ದಾರೆ. ಇಮಾಮ್ 27 ಏಕದಿನ ಪಂದ್ಯಗಳಲ್ಲಿ 1381 ರನ್ ಗಳಿಸಿದ್ದರು. ಆ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದರು. ಈಗ ಗಿಲ್, ಅವರನ್ನು ಹಿಂದಕ್ಕೆ ತಳ್ಳಿದ್ದು ಅವರು 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

Most runs after first 27 ODI innings:
1437 : Shubman Gill

1381: Iman ul Haq
1353: Rassie Van Der Dussen
1353: Ryan Ten Doeschate
1342 342: Jonathan Trott
1330: Babar Azam
1326: Hashim Amla
1300: Fakhar Zaman

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com