ಐಪಿಎಲ್ 2024 ರಲ್ಲಿ ಆಡಲಿರುವ ರಿಷಭ್ ಪಂತ್: ದೆಹಲಿ ಕ್ಯಾಪಿಟಲ್ಸ್ ಗೆ ಇಂಪ್ಯಾಕ್ಟ್ ಪ್ಲೇಯರ್!

ಡೆಲ್ಲಿ ತಂಡಕ್ಕೆ ಶುಭ ಸುದ್ದಿ ಎನ್ನಬಹುದಾದ ಬೆಳವಣಿಗೆಯಲ್ಲಿ ಐಪಿಎಲ್-2024 ರಲ್ಲಿ ರಿಷಭ್ ಪಂತ್ ತಂಡದ ಪರ ಆಡುವುದು ಖಾತ್ರಿಯಾಗಿದೆ. 
ರಿಷಬ್ ಪಂತ್
ರಿಷಬ್ ಪಂತ್
Updated on

ನವದೆಹಲಿ: ಡೆಲ್ಲಿ ತಂಡಕ್ಕೆ ಶುಭ ಸುದ್ದಿ ಎನ್ನಬಹುದಾದ ಬೆಳವಣಿಗೆಯಲ್ಲಿ ಐಪಿಎಲ್-2024 ರಲ್ಲಿ ರಿಷಭ್ ಪಂತ್ ತಂಡದ ಪರ ಆಡುವುದು ಖಾತ್ರಿಯಾಗಿದೆ. 

ದೆಹಲಿಯಿಂದ ರೂರ್ಕಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಿಷಭ್ ಪಂತ್ ತೀವ್ರ ಅಪಘಾತಕ್ಕೀಡಾಗಿ ಕ್ರಿಕೆಟ್ ನಿಂದ ದೂರ ಉಳಿಯಬೇಕಾಗಿತ್ತು. 2023 ರಲ್ಲಿ ಹರಾಜು ಪ್ರಕ್ರಿಯೆಯಿಂದಲೂ ದೂರ ಉಳಿಯಬೇಕಾಗಿತ್ತು. ಆದರೆ ಈಗ ಪಂತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇದೀಗ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯುವ ಹಾದಿಯಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ರಿಷಭ್ ಪಂತ್ ಆಡಲಿದ್ದಾರೆ.

IPL ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಎಂದರೇನು?

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ, ಪಂದ್ಯದ ಅವಧಿಯಲ್ಲಿ ಯಾವುದೇ ಫ್ರಾಂಚೈಸಿ, ಟಾಸ್ ಸಮಯದಲ್ಲಿ ಆರಂಭಿಕ 11 ಆಟಗಾರರ ಜೊತೆಗೆ ಹೆಸರಿಸಲಾದ ಐದು ಬದಲಿ ಆಟಗಾರರಲ್ಲಿ ಯಾರನ್ನಾದರೂ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. 

ಡೆಲ್ಲಿ ಕ್ಯಾಪಿಟಲ್ಸ್ ತಂಡ 11 ಆಟಗಾರ ಪಟ್ಟಿಯ ಜೊತೆಗೆ ರಿಷಭ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ಅಕ್ಷರ್ ಪಟೇಲ್ ಮತ್ತು ಮಿಚೆಲ್ ಮಾರ್ಷ್ ಸೇರಿ ಇನ್ನೂ ಕೆಲವು ಆಟಗಾರರನ್ನು ಐಪಿಎಲ್ 2024 ರ ರಿಟೆನ್ಷನ್ಸ್ ಡೇ ನಲ್ಲಿ ಹಾಗೆಯೇ ಉಳಿಸಿಕೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com