ಭಾರತ ವನಿತೆಯರ ಐತಿಹಾಸಿಕ ಗೆಲುವಿನ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ಆಸಿಸ್ ನಾಯಕಿ

ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಏಕೈಕ ಪಂದ್ಯದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ವನಿತೆಯರ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಈ ಸಾಧನೆಯ ಗೆಲುವಿನ ಸಂಭ್ರಮವನ್ನು ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಮೂಲಕ ಸ್ಮರಣೀಯವಾಗಿಸಿದ್ದಾರೆ.
ಭಾರತ ತಂಡದ ಆಟಗಾರ್ತಿಯರ ಫೋಟೋ ಕ್ಲಿಕ್ಕಿಸಿದ ಆಸಿಸ್ ನಾಯಕಿ
ಭಾರತ ತಂಡದ ಆಟಗಾರ್ತಿಯರ ಫೋಟೋ ಕ್ಲಿಕ್ಕಿಸಿದ ಆಸಿಸ್ ನಾಯಕಿ

ಮುಂಬೈ: ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಏಕೈಕ ಪಂದ್ಯದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ವನಿತೆಯರ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಈ ಸಾಧನೆಯ ಗೆಲುವಿನ ಸಂಭ್ರಮವನ್ನು ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಮೂಲಕ ಸ್ಮರಣೀಯವಾಗಿಸಿದ್ದಾರೆ.

ಆಸ್ಟ್ರೇಲಿಯಾ(AUSW vs INDW) ವಿರುದ್ಧದ ಏಕೈಕ ಪಂದ್ಯದ ಟೆಸ್ಟ್ ಸರಣಿಯನ್ನು 8 ವಿಕೆಟ್​ಗಳಿಂದ ಗೆಲ್ಲುವ ಮೂಲಕ ಭಾರತ ಮಹಿಳಾ ಕ್ರಿಕೆಟ್​ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಈ ಗೆಲುವಿನ ಸಂಭ್ರಮದಲ್ಲಿದ್ದಾಗ ಆಸೀಸ್​ ನಾಯಕಿ ಅಲಿಸ್ಸಾ ಹೀಲಿ(Australia captain Alyssa Healy) ಅವರು ಅಚ್ಚರಿ ಎಂಬಂತೆ ಕ್ಯಾಮೆರಾ ಹಿಡಿದು ಮೈದಾನಕ್ಕೆ ಬಂದಿದ್ದು, ಟೀಂ ಇಂಡಿಯಾ ಆಟಗಾರ್ತಿಯರ ಫೋಟೊ ಕೂಡ ಕ್ಲಿಕ್ಕಿಸಿದ್ದಾರೆ.

ಸೋತರೂ ಕ್ರೀಡಾಸ್ಫೂರ್ತಿ ಮೆರೆದ ಅಲಿಸ್ಸಾ ಹೀಲಿ ಇದೀಗ ಎಲ್ಲರ ಹೃದಯ ಗೆದ್ದಿದ್ದಾರೆ. ಹೀಲಿ ಕ್ಯಾಮೆರಾ ಹಿಡಿದುಕೊಂಡು ಬಂದ ವಿಡಿಯೊ(viral cricket video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಅಂದಹಾಗೆ ಪಂದ್ಯದ ಅಂತಿಮ ದಿನ ಭಾರತ ಮಹಿಳಾ ತಂಡಕ್ಕೆ ಗೆಲ್ಲಲು ಕೇವಲ 75 ರನ್‌ಗಳು ಬೇಕಿತ್ತು. 18.4 ಓವರ್​ನಲ್ಲಿ 2 ವಿಕಟ್​ನಷ್ಟಕ್ಕೆ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಐತಿಹಾಸಿಕ ಗೆಲುವ ದಾಖಲಿಸಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com