ವಿಡಿಯೋ: ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡಿದ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ

ಮುಂಬರುವ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿರುವ ಎಂಎಸ್‌ ಧೋನಿ, ಸದ್ಯ ಕ್ರಿಕೆಟ್ ತರಬೇತಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದೀಗ ಧೋನಿ ಅವರು ತಮ್ಮ ತವರೂರಾದ ರಾಂಚಿಯ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾರೆ. 
ಟ್ರ್ಯಾಕ್ಟರ್ ಓಡಿಸಿದ ಎಂಎಸ್ ಧೋನಿ
ಟ್ರ್ಯಾಕ್ಟರ್ ಓಡಿಸಿದ ಎಂಎಸ್ ಧೋನಿ
Updated on

ರಾಂಚಿ: ಮುಂಬರುವ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿರುವ ಎಂಎಸ್‌ ಧೋನಿ, ಸದ್ಯ ಕ್ರಿಕೆಟ್ ತರಬೇತಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದೀಗ ಧೋನಿ ಅವರು ತಮ್ಮ ತವರೂರಾದ ರಾಂಚಿಯ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾರೆ. 

ರಾಂಚಿಯಲ್ಲಿ ಕೃಷಿ ಜಮೀನು ಖರೀದಿ ಮಾಡಿರುವುದು ಹಳೆಯ ವಿಚಾರ. ಬಿಡುವಿನ ಸಂದರ್ಭದಲ್ಲಿ ಕೃಷಿ ಕೆಲಸಗಳನ್ನು ಮಾಡುವ ಧೋನಿ, ಹೊಲದಲ್ಲಿ ಟ್ಯ್ರಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

'ಹೊಸದನ್ನು ಕಲಿಯುವುದು ತುಂಬಾ ಖುಷಿಯಾಗಿರುತ್ತದೆ. ಆದರೆ, ಆ ಕೆಲಸವನ್ನು ಪೂರ್ಣಗೊಳಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ' ಎಂದು ಬರೆದುಕೊಂಡಿದ್ದಾರೆ.

ಧೋನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋಗೆ, ಇದುವರೆಗೆ ಸುಮಾರು 33 ಲಕ್ಷ ಮಂದಿ ಲೈಕ್ ಮಾಡಿದ್ದು, 70,000ಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ.

ಸುಮಾರು 2 ವರ್ಷಗಳ ನಂತರ ಧೋನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. 2021 ಜನವರಿ 8ರಂದು ಕೊನೆಯ ಬಾರಿಗೆ ವಿಡಿಯೋ ಪೋಸ್ಟ್ ಮಾಡಿದ್ದ ಧೋನಿ, ಅದಾದ ಬಳಿಕ ಇನ್‌ಸ್ಟಾಗ್ರಾಂನಿಂದ ದೂರ ಉಳಿದಿದ್ದರು. ಅಂದು ತಮ್ಮ ಫಾರ್ಮ್‌ನಲ್ಲಿ ಬೆಳೆದಿದ್ದ ಸ್ಟ್ರಾಬೆರಿ ಹಣ್ಣನ್ನು ತಿನ್ನುವ ವಿಡಿಯೋ ಪೋಸ್ಟ್ ಮಾಡಿದ್ದರು.

ಧೋನಿ ಸುಮಾರು ಮೂರು ವರ್ಷಗಳ ಹಿಂದೆ 8 ಲಕ್ಷ ರೂಪಾಯಿಗೆ ಮಹೀಂದ್ರಾ ಸ್ವರಾಜ್ ಟ್ರ್ಯಾಕ್ಟರ್ ಅನ್ನು ಖರೀದಿಸಿದರು. ಅದರ ನಂತರ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರ, ಇದು 'ಸರಿಯಾದ ನಿರ್ಧಾರ' ಎಂದು ಧೋನಿಯನ್ನು ಹೊಗಳಿ ಟ್ವೀಟ್ ಮಾಡಿದ್ದರು.

ಧೋನಿ ಅವರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ಕಳೆದ ಮೂರು ವರ್ಷಗಳಿಂದ ರಾಂಚಿಯ ಸ್ಯಾಂಬೋ ಪ್ರದೇಶದಲ್ಲಿನ ತಮ್ಮ ಜಮೀನಿನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

55 ಎಕರೆ ಪ್ರದೇಶದಲ್ಲಿರುವ ಜಮೀನಿನಲ್ಲಿ ಸಾಸಿವೆ, ಹೂಕೋಸು, ಎಲೆಕೋಸು, ಸ್ಟ್ರಾಬೆರಿ, ಶುಂಠಿ, ಕ್ಯಾಪ್ಸಿಕಂ ಮುಂತಾದವುಗಳನ್ನು ಬೆಳೆಯಲಾಗುತ್ತದೆ. ಹೆಚ್ಚಿನ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳೊಂದಿಗೆ ಇತರ ನಗರಗಳಿಗೆ ಕಳುಹಿಸಲಾಗುತ್ತಿದೆ.

ಧೋನಿ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸುಮಾರು 80 ಹಸುಗಳನ್ನು ಹೊಂದಿದ್ದಾರೆ. ಅವುಗಳ ಹಾಲನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದಲ್ಲದೇ ಕಡಕ್‌ನಾಥ್ ತಳಿಯ ಕೋಳಿಗಳನ್ನೂ ಹೊಂದಿದ್ದಾರೆ.

ಆಗ್ಗಾಗ್ಗೆ ಫಾರ್ಮ್‌ಗೆ ಭೇಟಿ ನೀಡುವ ಧೋನಿ, ಅವರ ಪತ್ನಿ ಸಾಕ್ಷಿ ಮತ್ತು ಅವರ ಬಾಲ್ಯದ ಗೆಳೆಯ ಸೀಮಂತ್ ಲೋಹಾನಿ ಅವರೊಂದಿಗೆ ಹಲವಾರು ಬಾರಿ ಕಾಣಿಸಿಕೊಂಡಿದ್ದರು. ಸಾಕ್ಷಿ ಆಗಾಗ ಫಾರ್ಮ್‌ನ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com