ನನ್ನ ಕನಸು ನನಸಾಗಲು ಸಹಾಯ ಮಾಡಿದ್ದು ಆ ಮೂವರು 'ಅಶೋಕ'ರು: ಸೂರ್ಯಕುಮಾರ್ ಯಾದವ್

2021 ರಲ್ಲೇ ಟಿ20 ಹಾಗೂ ಒಡಿಐ ಪ್ರವೇಶಿಸಿದ್ದ ಸೂರ್ಯಕುಮಾರ್ ಯಾದವ್ ಗೆ ರವಿ ಶಾಸ್ತ್ರಿ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ನಾಗ್ಪುರದಲ್ಲಿ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದಾಗ ಟೆಸ್ಟ್ ಪಂದ್ಯವನ್ನಾಡುವ ಕನಸು ನನಸಾಗಿತ್ತು. 
ಸೂರ್ಯಕುಮಾರ್ ಯಾದವ್- ಕೋಚ್ ಅಶೋಕ್ ಅಸ್ವಾಲ್ಕರ್
ಸೂರ್ಯಕುಮಾರ್ ಯಾದವ್- ಕೋಚ್ ಅಶೋಕ್ ಅಸ್ವಾಲ್ಕರ್
Updated on

ನಾಗ್ಪುರ: ಅದು ಫೆ.09, ಬೆಳಿಗ್ಗೆ 8.01 ರ ಸಮಯ ಅಶೋಕ್ ಅಸ್ವಾಲ್ಕರ್ ಗೆ ವಾಟ್ಸ್ ಅಪ್ ಕರೆಯೊಂದು ಬರುತ್ತೆ. ಕರೆ ಮಾಡಿದ ಪ್ರಖ್ಯಾತ ವ್ಯಕ್ತಿ, ಐಸಿಸಿ ಟಿ20 ಅಂತಾರಾಷ್ಟ್ರೀಯ ಶ್ರೇಣಿಯ ನಂ.1 ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ "ಸರ್ ಭಾರತ ತಂಡದಲ್ಲಿ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದೇನೆ ಎಂದು ಹೇಳಿದ್ದರು. 

2021 ರಲ್ಲೇ ಟಿ20 ಹಾಗೂ ಒಡಿಐ ಪ್ರವೇಶಿಸಿದ್ದ ಸೂರ್ಯಕುಮಾರ್ ಯಾದವ್ ಗೆ ರವಿ ಶಾಸ್ತ್ರಿ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ನಾಗ್ಪುರದಲ್ಲಿ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದಾಗ ಟೆಸ್ಟ್ ಪಂದ್ಯವನ್ನಾಡುವ ಕನಸು ನನಸಾಗಿತ್ತು. 

ಮುಂಬೈ ನ ಅನುಶಕ್ತಿ ನಗರ್ ಚೆಂಬೂರ್ ನ ಬಾಬಾ ಅಟೋಮಿಕ್ ರೀಸರ್ಚ್ ಸೆಂಟರ್ ನ ಮೈದಾನದಲ್ಲಿ ಸೂರ್ಯ ಕುಮಾರ್ ಅವರ ಕ್ರಿಕೆಟ್ ಕೌಶಲ್ಯವನ್ನು ಹೇಳಿಕೊಟ್ಟಿದ್ದ ಅಶೋಕ್ ಅಸ್ವಾಲ್ಕರ್ ತಮ್ಮ ಶಿಷ್ಯನ ಕರೆಯಿಂದ ಭಾವುಕರಾಗಿ, "ನಾವು ಈ ಪಯಣದ ಆರಂಭದಲ್ಲಿ ಕಂಡ ಕನಸು ನನಸಾಗಿದೆ, ಗಮನ ಕೇಂದ್ರೀಕರಿಸು ಎಂದು ಸೂರ್ಯ ಕುಮಾರ್ ಯಾದವ್ ಗೆ ಹೇಳಿ ಶುಭಾಶಯ ತಿಳಿಸಿದ್ದರು.
 
ಇದಷ್ಟೇ ಅಲ್ಲದೇ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಹ ಸೂರ್ಯ ಕುಮಾರ್ ಯಾದವ್ ಗೆ ಸ್ವಾಭಾವಿಕವಾಗಿ ಪಂದ್ಯವಾಡುವಂತೆ ಹೇಳಿ ಪ್ರತಿ ಕ್ಷಣವನ್ನು ಆನಂದಿಸುವಂತೆ ತಿಳಿಸಿದ್ದರು. ಅನುಶಕ್ತಿ ನಗರ್ ನಲ್ಲಿ ಸೂರ್ಯ ಕುಮಾರ್ ಯಾದವ್ ಅವರ ಕುಟುಂಬವಿದ್ದು, ಬಿಎಆರ್ ಸಿಯಲ್ಲಿ ಯಾದವ್ ಅವರ ತಂದೆ ಅಶೋಕ್ ಕುಮಾರ್ ಯಾದವ್ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

"ಅಶೋಕ್ ಅಸ್ವಾಲ್ಕರ್ 30 ವರ್ಷಗಳಿಂದ ಯುವ ಕ್ರಿಕೆಟಿಗರಿಗೆ ತರಬೇತಿ ನೀಡುತ್ತಿದ್ದಾರೆ.  ತಮ್ಮ ಶಿಷ್ಯನ ಸಾಧನೆ ಬಗ್ಗೆ ಮಾತಾಡಿರುವ ಅಸ್ವಾಲ್ಕರ್, ಮೂವರು ಅಶೋಕ್ ಗಳು ಅಂದರೆ "ಹಿರಿಯ ಕೋಚ್ ಅಶೋಕ್ ಕಾಮಾತ್, ಯಾದವ್ ತಂದೆ ಅಶೋಕ್ ಕುಮರ್ ಯಾದವ್ ಹಾಗೂ ನಾನು (ಅಶೋಕ್ ಅಸ್ವಲ್ಕರ್) ಕ್ರಿಕೆಟ್ ನಲ್ಲಿ ಅತ್ಯಂತ ವಿನಾಶಕಾರಿ ಬ್ಯಾಟರ್ ಗಳ ಪೈಕಿ ಒಬ್ಬನನ್ನು ತಯಾರಿಸಿದ್ದು ಕಾಕತಾಳೀಯ" ಎಂದು ಹೇಳಿದ್ದಾರೆ.

ಬಲಗೈ ಬ್ಯಾಟ್ಸ್ ಮನ್ ಆಗಿರುವ ಸೂರ್ಯಕುಮಾರ್ ಯಾದವ್, 10 ವರ್ಷದವರಿದ್ದಾಗಲೇ ತರಬೇತಿ ಪಡೆಯಲು ಪ್ರಾರಂಭಿಸಿದ್ದರು. ಅಸ್ವಾಲ್ಕರ್ ಹಾಗೂ ಕೋಚ್ ಕಾಮತ್ ಆತನಲ್ಲಿನ ಕ್ರಿಕೆಟಿಗ ಬೆಳೆಯುವುದನ್ನು ಕಂಡಿದ್ದರು. ಸೂರ್ಯಕುಮಾರ್ ಯಾದವ್ ಅವರ ಮುಂಬೈ ಹಾಗೂ ಐಪಿಎಲ್ ಫ್ರಾಂಚೈಸಿ ತಂಡದ ಸದಸ್ಯರು ಭಾರತ ತಂಡ ಪ್ರವೇಶಿಸಿದರು, ಆಗ ಮತ್ತೆ ಸೂರ್ಯಕುಮಾರ್ ಯಾದವ್ ನನ್ನು ಮರಳಿ ಹಳಿಗೆ ತರಲು ಮತ್ತೆ ಈ ಮೂವರು ಅಶೋಕ್ ಗಳು ಒಟ್ಟಾದರು. 

"ಕೆಲವೊಮ್ಮೆ ಅಂತಹ ಸಂದರ್ಭಗಳು ಎದುರಾಗುತ್ತವೆ ನೀವು ಯಾರ ಮಾತನ್ನೂ ಕೇಳುವುದಿಲ್ಲ. ಎಷ್ಟೇ ಸಲಹೆಗಳನ್ನು ನೀಡಿದರೂ ಕೇಳುವುದಿಲ್ಲ. ಅಂತೆಯೇ ಸೂರ್ಯಕುಮಾರ್ ಯಾದವ್ ಗೂ ಆಗಿತ್ತು. 3-4 ವರ್ಷಗಳನ್ನು ವ್ಯರ್ಥ ಮಾಡಿದ ಬಳಿಕ, ಸೂರ್ಯಕುಮಾರ್ ಯಾದವ್ ಗೆ ಅರ್ಥವಾಯಿತು. ಅಂತಹ ಸ್ಥಿತಿಯಲ್ಲಿ ನಾವು ಆತನಿಗೆ ಆತ್ಮವಿಶ್ವಾಸ ತುಂಬಿದೆವು. ಆತ ನಿರ್ಧರಿಸಿ, ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾನೆ" ಎನ್ನುತ್ತಾರೆ ಕೋಚ್.

ಕೋಚ್ ಪ್ರಕಾರ ಸೂರ್ಯಕುಮಾರ್ ಯಾದವ್ ಅವರು ವಿವಾಹವಾದ ನಂತರ ಬದಲಾದರು, ಜವಾಬ್ದಾರಿ ಹೆಚ್ಚಿತು, ಗಮನ ಹೆಚ್ಚು ಕೇಂದ್ರೀಕರಿಸಲು ಪ್ರಾರಂಭಿಸಿದರು. ಕ್ರಿಕೆಟಿಗನೊಬ್ಬನ ಜೀವನ ಏರಿಳಿತಗಳಿಂದ ಕೂಡಿರುತ್ತದೆ. ಆದರೆ ಸೂರ್ಯಕುಮಾರ್ ಯಾದವ್ ಅವರ ಜೀವನ ಇಳಿತಗಳನ್ನು ಸಾಕಷ್ಟು ಕಂಡಿದೆ. ಯಾರು ಏನೇ ಹೇಳಲಿ ಮೈದಾನದಲ್ಲಿ ಆತನ ಶಿಸ್ತು ಅನುಕರಣೀಯ, ಆದರ್ಶಪ್ರಾಯವಾದದ್ದು. 

ಒಮ್ಮೆ ಸೂರ್ಯಕುಮಾರ್ ಯಾದವ್ ಕಿಟ್ ಹಿಡಿದುಬಂದಿದ್ದರು. ಆದರೆ ಪಿಚ್ ಸಿದ್ಧವಾಗಿರದ ಕಾರಣ ಮನೆಗೆ ತೆರಳುವಂತೆ ಹೇಳಿದ್ದೆ ಆದರೆ 2 ಗಂಟೆಗಳ ಕಾಲ ಪಿಚ್ ಪಕ್ಕದಲ್ಲೇ ಯಾದವ್ ಕುಳಿತಿದ್ದರು ಎಂದು ಹಳೆಯ ಘಟನೆಗಳನ್ನು ಅಸ್ವಾಲ್ಕರ್ ನೆನಪಿಸಿಕೊಳ್ಳುತ್ತಾರೆ.

ಸೂರ್ಯಕುಮಾರ್ ಯಾದವ್ ಗೆ ಶಾಲೆಗಿಂತ ಹೆಚ್ಚು ಮೈದಾನ ಇಷ್ಟವಾಗುತ್ತಿತ್ತು. ಪೋಷಕರೂ ಅದನ್ನು ಉತ್ತೇಜಿಸಿದರು ಹಾಗೂ ಆತನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದ್ದರು. ಇದು ನಮ್ಮ ಕೆಲಸವನ್ನು ಸುಲಭಗೊಳಿಸಿತು.

ಸೂರ್ಯಕುಮಾರ್ ಯಾದವ್ ಟೆಸ್ಟ್ ಫಾರ್ಮ್ಯಾಟ್ ನಲ್ಲೂ ಗೇಮ್ ಚೇಂಜರ್ ಆಗಬಲ್ಲರು ಎಂದು ಅಸ್ವಾಲ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com