ಐಪಿಎಲ್‌ನಲ್ಲಿ ಮತ್ತೆ 'ದಾದಾಗಿರಿ': ದೆಹಲಿ ಕ್ಯಾಪಿಟಲ್ಸ್‌ನಲ್ಲಿ ಹೊಸ ಪಾತ್ರ ನಿರ್ವಹಿಸಲಿರುವ ಸೌರವ್ ಗಂಗೂಲಿ!

ಮಾಜಿ ಬಿಸಿಸಿಐ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಗೆ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಜವಾಬ್ದಾರಿ ನೀಡಲಿದೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಮಾಜಿ ಬಿಸಿಸಿಐ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಗೆ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಜವಾಬ್ದಾರಿ ನೀಡಲಿದೆ.

ಐಪಿಎಲ್ 2023ರ ಮೊದಲು, ಸೌರವ್ ಗಂಗೂಲಿ ಅವರನ್ನು ದೆಹಲಿ ಕ್ಯಾಪಿಟಲ್ಸ್ ಕ್ರಿಕೆಟ್‌ನ ನಿರ್ದೇಶಕರನ್ನಾಗಿ ಮಾಡಬಹುದು. ಇನ್ನು ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್‌ನಲ್ಲಿ ರಾಜೀನಾಮೆ ನೀಡಿದ್ದರು.

ಮೊದಲ ಸೀಸನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ಗೆ 2019ರಲ್ಲಿ ಮರುನಾಮಕರಣ ಮಾಡಿ ಸೌರವ್ ಗಂಗೂಲಿ ಅವರನ್ನು ಮಾರ್ಗದರ್ಶಕರನ್ನಾಗಿ ಮಾಡಲಾಯಿತು. ಆ ಋತುವಿನಲ್ಲಿ ತಂಡವು ಪ್ರಬಲ ಪ್ರದರ್ಶನ ನೀಡಿತ್ತು. ಅಲ್ಲದೆ ಪ್ಲೇಆಫ್‌ಗೆ ಅರ್ಹತೆ ಗಳಿಸಲು ಸಾಧ್ಯವಾಯಿತು.

ಮುಂದಿನ ಋತುವಿನಲ್ಲಿ ತಂಡವು ಫೈನಲ್‌ಗೆ ಪ್ರವೇಶಿಸಿತು. ಆದರೆ ಮುಂಬೈ ವಿರುದ್ಧ ಸೋಲು ಅನುಭವಿಸಿತು. ಐಪಿಎಲ್ 2022ರಲ್ಲಿ ತಂಡದ ಪ್ರದರ್ಶನದಲ್ಲಿ ಸ್ವಲ್ಪ ಕುಸಿತ ಕಂಡುಬಂದಿತ್ತು. ಈಗ ಮತ್ತೆ ಗಂಗೂಲಿ ಫ್ರಾಂಚೈಸಿ ಸೇರಿಕೊಂಡರೆ ಪ್ರದರ್ಶನದ ಜತೆಗೆ ತಂಡದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ.

IPL 2023 ಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ನ ಪೂರ್ಣ ತಂಡ
ರಿಷಭ್ ಪಂತ್, ಡೇವಿಡ್ ವಾರ್ನರ್, ಅನ್ರಿಚ್ ನಾರ್ಕಿಯಾ, ಲುಂಗಿ ಎನ್‌ಗಿಡಿ, ಪೃಥ್ವಿ ಶಾ, ಚೇತನ್ ಸಕಾರಿಯಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರಿಪ್ಪಲ್ ಪಟೇಲ್, ಸರ್ಫರಾಜ್ ಖಾನ್, ಯಶ್ ಧುಲ್, ಕಮಲೇಶ್ ನಾಗರಕೋಟಿ, ಪ್ರವೀಣ್ ದುಬೆ, ವಿಕಿ ಯವ್ವಲ್, ವಿಕಿ ಯವ್‌ವಾಲ್, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾ, ಮಿಚೆಲ್ ಮಾರ್ಷ್, ಫಿಲ್ ಸಾಲ್ಟ್, ಇಶಾಂತ್ ಶರ್ಮಾ, ಮನೀಶ್ ಪಾಂಡೆ, ಮುಖೇಶ್ ಕುಮಾರ್ ಮತ್ತು ರಿಲೆ ರುಸ್ಸೋ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com