
ಪಾಕಿಸ್ತಾನ ತಂಡದ ಬಗ್ಗೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕುರಿತಂತೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಪಾಕಿಸ್ತಾನ ಕ್ರಿಕೆಟ್ ತಂಡವನ್ನೇ ಟ್ರೋಲ್ ಮಾಡಿದ ಘಟನೆ ನಡೆದಿದೆ.
ಪಾಕಿಸ್ತಾನದ ಮಾಜಿ ಆಟಗಾರ ಹಾಗೂ ಈ ಪಂದ್ಯದಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಜಿದ್ ಖಾನ್ ಮಾಡಿದ ಒಂದೇ ಒಂದು ಎಡವಟ್ಟು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಕಾಮೆಂಟೇಟರ್ ಆಗಿರುವ ಬಾಜಿದ್ ಖಾನ್ ತನ್ನ ಸಹ ಪ್ಯಾನೆಲಿಸ್ಟ್ ಮತ್ತು ಮಾಜಿ ನ್ಯೂಜಿಲೆಂಡ್ ಕ್ರಿಕೆಟಿಗ ಡ್ಯಾನಿ ಮಾರಿಸನ್ ಬದಲಿಗೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಎಂದು ತಪ್ಪಾಗಿ ಕರೆದಿದ್ದರು.
ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಎಜಾಜ್ ಪಟೇಲ್ ಮತ್ತು ಮ್ಯಾಟ್ ಹೆನ್ರಿ 10ನೇ ವಿಕೆಟ್‌ಗೆ 49 ರನ್‌ಗಳ ಜೊತೆಯಾಟ ನೀಡಿದ್ದಾಗ ಈ ಘಟನೆ ಸಂಭವಿಸಿದೆ. ಬಾಜಿದ್ ಖಾನ್ ನ್ಯೂಜಿಲೆಂಡ್‌ಗಾಗಿ ಇದುವರೆಗಿನ ಅತಿದೊಡ್ಡ 10ನೇ ವಿಕೆಟ್ ಜೊತೆಯಾಟವನ್ನು ಉಲ್ಲೇಖಿಸಿ, ತನ್ನ ಪಾಲುದಾರ ಡ್ಯಾನಿ ಮಾರಿಸನ್ ಬದಲಿಗೆ ಅಮೇರಿಕನ್ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ತೆಗೆದುಕೊಂಡರು. ಆದರೆ, ತಕ್ಷಣವೇ ತನ್ನ ತಪ್ಪನ್ನು ಅರಿತು ಸರಿಪಡಿಸಿಕೊಂಡರು.
ಆದರೆ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಹೆಚ್ಚು ವೈರಲ್ ಆಗಿತ್ತು. ಅದೇ ಸಮಯದಲ್ಲಿ, ಡ್ಯಾನಿ ಡೇನಿಯಲ್ ಕೂಡ ಈ ವೀಡಿಯೊಗೆ ಪ್ರತಿಕ್ರಿಯಿಸಿದ್ದು ಪಾಕ್ ತಂಡ ಕೋಚ್ ಆಗಿ ಮಾಡಿ ಎಂದು ಹೇಳಿದ್ದಾರೆ. ಕರಾಚಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಈಗ ಡ್ರಾದತ್ತ ಸಾಗಿದೆ.
Advertisement