ಗಂಟೆಗೆ 161 ಕಿ.ಮಿ ವೇಗದಲ್ಲಿ ಬೌಲಿಂಗ್‌?; ಶೊಯೆಬ್ ಅಖ್ತರ್ ದಾಖಲೆ ಮುರಿಯುವ ಕುರಿತು ಭಾರತದ ವೇಗಿ ಉಮ್ರಾನ್ ಮಲ್ಲಿಕ್ ಹೇಳಿದ್ದೇನು?

ಭಾರತದ ವೇಗದ ಬೌಲಿಂಗ್ ಸೆನ್ಸೇಷನ್ ಉಮ್ರಾನ್ ಮಲ್ಲಿಕ್ ಪಾಕಿಸ್ತಾನದ ವೇಗಿ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೊಯೆಬ್ ಅಖ್ತರ್ ಅವರ ವೇಗದ ಬೌಲಿಂಗ್ ದಾಖಲೆ ಮುರಿಯುವ ಕುರಿತು ಮಾತನಾಡಿದ್ದಾರೆ.
ಉಮ್ರಾನ್ ಮಲ್ಲಿಕ್ ಮತ್ತು ಶೊಯೆಬ್ ಅಖ್ತರ್
ಉಮ್ರಾನ್ ಮಲ್ಲಿಕ್ ಮತ್ತು ಶೊಯೆಬ್ ಅಖ್ತರ್
Updated on

ನವದೆಹಲಿ: ಭಾರತದ ವೇಗದ ಬೌಲಿಂಗ್ ಸೆನ್ಸೇಷನ್ ಉಮ್ರಾನ್ ಮಲ್ಲಿಕ್ ಪಾಕಿಸ್ತಾನದ ವೇಗಿ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೊಯೆಬ್ ಅಖ್ತರ್ ಅವರ ವೇಗದ ಬೌಲಿಂಗ್ ದಾಖಲೆ ಮುರಿಯುವ ಕುರಿತು ಮಾತನಾಡಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಅವರ 161 ಕಿ.ಮಿ ವೇಗದ ಎಸೆತದ ದಾಖಲೆಯನ್ನು ನೀವು ಮುರಿಯಲಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಸದ್ಯ ದೇಶಕ್ಕಾಗಿ ಉತ್ತಮವಾಗಿ ಆಟವಾಡುವುದರ ಬಗ್ಗೆಯಷ್ಟೇ ನಾನು ಗಮನಹರಿಸಿದ್ದೇನೆ. ಒಂದು ವೇಳೆ ನಾನು ಉತ್ತಮ ಪ್ರದರ್ಶನ ನೀಡಿದರೆ ಅಥವಾ ನಾನು ಅದೃಷ್ಟವಂತನಾಗಿದ್ದಾರೆ, ಆ ದಾಖಲೆಯನ್ನು ಮುರಿಯುತ್ತೇನೆ. ಆದರೆ ಆ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಪಂದ್ಯದ ವೇಳೆಯಲ್ಲಿ ನೀವು ಎಷ್ಟು ವೇಗವಾಗಿ ಬೌಲಿಂಗ್‌ ಮಾಡುತ್ತೀರಿ ಎನ್ನುವುದು ನಿಮಗೆ ತಿಳಿಯುವುದಿಲ್ಲ. ಎಷ್ಟು ವೇಗವಾಗಿ ಬೌಲಿಂಗ್‌ ಮಾಡಿದೆ ಎಂದು ಪಂದ್ಯದ ಬಳಿಕವಷ್ಟೇ ಗೊತ್ತಾಗುತ್ತದೆ. ಪಂದ್ಯದ ವೇಳೆ, ಸರಿಯಾದ ಸ್ಥಳದಲ್ಲಿ ಬೌಲಿಂಗ್‌ ಮಾಡಿ ವಿಕೆಟ್‌ ಪಡೆಯುವುದರ ಮೇಲಷ್ಟೇ ನನ್ನ ಗಮನ ಇರುತ್ತದೆ‘ ಎಂದು ಅವರು ಹೇಳಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ಪರ ಆಡುತ್ತಿರುವ ಉಮ್ರಾನ್‌ ಮಲಿಕ್, ತನ್ನ ವೇಗದ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದರು. ಗಂಟೆಗೆ 150 ಕಿ.ಮಿ ಗೂ ಹೆಚ್ಚಿನ ವೇಗದಲ್ಲಿ ಚೆಂಡು ಎಸೆಯುವ ಸಾಮರ್ಥ್ಯ ಹೊಂದಿರುವ ಅವರು, 2022ರ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಫಲವಾಗಿ ಅವರಿಗೆ ಭಾರತ ತಂಡದ ಬಾಗಿಲು ಕೂಡ ತೆರೆದಿತ್ತು.

ಈವರೆಗೆ ಐದು ಏಕದಿನ ಹಾಗೂ ಮೂರು ಟಿ–20 ಪಂದ್ಯಗಳನ್ನು ಆಡಿರುವ ಉಮ್ರಾನ್‌ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮಂಗಳವಾರದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧ ಟಿ–20 ಸರಣಿಗೂ ಅವರಿಗೆ ಅವಕಾಶ ಲಭಿಸಿದೆ. 2023ರ ಏಕದಿನ ವಿಶ್ವಕಪ್‌ ದೃಷ್ಠಿಯಲ್ಲಿ ಅವರಿಗೆ ಈ ಅವಕಾಶಗಳು ಮಹತ್ವದ್ದು ಎನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com