ಶತಕದ ಅಂಚಿನಲ್ಲಿದ್ದ ದಸುನ್ ಶನಕ ವಿರುದ್ಧ ಶಮಿ ಮಂಕಡ್: ಔಟ್ ಮನವಿ ಹಿಂಪಡೆದ ರೋಹಿತ್ ಶರ್ಮಾ, ವಿಡಿಯೋ!

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಕೊನೆಯಲ್ಲಿ ಮೊಹಮ್ಮದ್ ಶಮಿಯ ಮಂಕಡ್ ಮನವಿಯನ್ನು ತಿರಸ್ಕರಿಸಿ ನಾಯಕ ರೋಹಿತ್ ಶರ್ಮಾ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಕೊನೆಯಲ್ಲಿ ಮೊಹಮ್ಮದ್ ಶಮಿಯ ಮಂಕಡ್ ಮನವಿಯನ್ನು ತಿರಸ್ಕರಿಸಿ ನಾಯಕ ರೋಹಿತ್ ಶರ್ಮಾ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಶ್ರೀಲಂಕಾ ನಾಯಕ ದಸುನ್ ಶನಕ ಸಹ ಅಜೇಯ ಶತಕ ಬಾರಿಸಿದರು. ಈ ಮಧ್ಯೆ ಕೊನೆಯ ಓವರ್‌ನಲ್ಲಿ, ಮೊಹಮ್ಮದ್ ಶಮಿ ಅವರು ಚೆಂಡನ್ನು ಎಸೆಯುವ ಮೊದಲು ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದ ಶನಕ ಅವರನ್ನು ಮಂಕಡ್ ರನೌಟ್ ಮಾಡಿ ಅಂಪೈರ್ ಗೆ ಮನವಿ ಮಾಡಿದ್ದರು.

ವಾಸ್ತವವಾಗಿ, 98 ರನ್ ಗಳಿಸಿ ನಾನ್ ಸ್ಟ್ರೈಕ್ ನಲ್ಲಿದ್ದ ಶನಕ ಮೊಹಮ್ಮದ್ ಶಮಿ ಚೆಂಡನ್ನು ಎಸೆಯುವ ಮುನ್ನ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದರು. ಇದನ್ನು ಗಮನಿಸಿದ ಶಮಿ ಮಂಕಡ್ ಔಟ್ ಮಾಡಿ ಮೈದಾನದ ಅಂಪೈರ್‌ಗೆ ಮನವಿ ಮಾಡಿದರು. ಅಂಪೈರ್ ಮೂರನೇ ಅಂಪೈರ್‌ನ ಅಭಿಪ್ರಾಯವನ್ನು ಕೇಳಿದರು. ಆದರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಧ್ಯಪ್ರವೇಶಿಸಿ ಮನವಿಯನ್ನು ಹಿಂತೆಗೆದುಕೊಂಡರು. ನಂತರ ಶನಕ ತಮ್ಮ ಎರಡನೇ ಏಕದಿನ ಶತಕ ಪೂರೈಸಿದರು.

ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡ 8 ವಿಕೆಟ್ ಕಳೆದುಕೊಂಡು 306 ರನ್ ಗಳಿಸಲಷ್ಟೇ ಶಕ್ತವಾಗಿದ್ದು 67 ರನ್ ಗಳಿಂದ ಭಾರತಕ್ಕೆ ಶರಣಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com