ಮೂರ್ಖರ ಜೊತೆ ವಾದ ಸಮಯ ವ್ಯರ್ಥ: ಕೊಹ್ಲಿ ಜೊತೆ ಜಗಳವಾಡಿದ್ದ ನವೀನ್-ಉಲ್-ಹಕ್ ಮತ್ತೊಂದು ಪೋಸ್ಟ್!

ಐಪಿಎಲ್ 2023ರಲ್ಲಿ ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ ಮತ್ತು ಭಾರತೀಯ ರನ್‌ಮಷಿನ್ ವಿರಾಟ್ ಕೊಹ್ಲಿ ನಡುವೆ ವಾಗ್ವಾದ ನಡೆದಿತ್ತು. ಇದಾದ ಬಳಿಕ ಅದನ್ನು ಅಲ್ಲಿಗೆ ಮರೆತು ವಿರಾಟ್ ಕೊಹ್ಲಿ ಮುಂದೆ ಸಾಗಿದ್ದಾರೆ.
ಕೊಹ್ಲಿ-ನವೀನ್ ಉಲ್ ಹಕ್
ಕೊಹ್ಲಿ-ನವೀನ್ ಉಲ್ ಹಕ್

ಐಪಿಎಲ್ 2023ರಲ್ಲಿ ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ ಮತ್ತು ಭಾರತೀಯ ರನ್‌ಮಷಿನ್ ವಿರಾಟ್ ಕೊಹ್ಲಿ ನಡುವೆ ವಾಗ್ವಾದ ನಡೆದಿತ್ತು. ಇದಾದ ಬಳಿಕ ಅದನ್ನು ಅಲ್ಲಿಗೆ ಮರೆತು ವಿರಾಟ್ ಕೊಹ್ಲಿ ಮುಂದೆ ಸಾಗಿದ್ದಾರೆ. ಆದರೆ ನವೀನ್ ಉಲ್ ಹಕ್ ಮಾತ್ರ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮೇಲೆ ಪೋಸ್ಟ್ ಮಾಡಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಲಖನೌ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ಪಂದ್ಯದ ನಂತರ ಹಸ್ತಲಾಘವ ಮಾಡುವ ವೇಳೆ ಮಾತಿನ ಚಕಮಿಕಿ ನಡೆದಿತ್ತು. ಇದಾದ ಬಳಿಕ ಗೌತಮ್ ಗಂಭೀರ್ ಅವರ ಎಂಟ್ರಿಯೂ ಆಯಿತು. ಕೊಹ್ಲಿಯನ್ನು ಎದುರಿಸಿದ ನಂತರ, ನವೀನ್ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ನಿಗೂಢ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಅಫ್ಘಾನಿಸ್ತಾನದ ವೇಗದ ಬೌಲರ್ ಮತ್ತೊಮ್ಮೆ ಇನ್ಸ್ಟಾಗ್ರಾಮ್ನಲ್ಲಿ ನಿಗೂಢ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹುಲಿಯು ಕತ್ತೆಯೊಂದಿಗೆ ವಾದ ಮಾಡುವ ಕಥೆಯನ್ನು ತೋರಿಸಲಾಗಿದೆ. ವಿಡಿಯೋ ಮೂಲಕ ನವೀನ್-ಉಲ್-ಹಕ್ ಮತ್ತೊಮ್ಮೆ ತಮ್ಮ ಎದುರಾಳಿ ಕೊಹ್ಲಿಯನ್ನು ಗುರಿಯಾಗಿಸಿದ್ದಾರೆ.

ನವೀನ್-ಉಲ್-ಹಕ್ ಈ ಪೋಸ್ಟ್‌ನೊಂದಿಗೆ, ಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ವಹಿಸದ ಮೂರ್ಖ ಮತ್ತು ಮತಾಂಧರೊಂದಿಗೆ ವಾದ ಮಾಡುವುದು ಸಮಯ ವ್ಯರ್ಥ ಎಂದು ಬರೆದಿದ್ದಾರೆ. ಎಷ್ಟೇ ಪುರಾವೆಗಳನ್ನು ಮುಂದಿಟ್ಟರೂ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲದವರಿದ್ದಾರೆ. ಇತರರು ಹೆಮ್ಮೆ, ದ್ವೇಷ ಮತ್ತು ಅಸಮಾಧಾನದಿಂದ ಕುರುಡರಾಗಿದ್ದಾರೆ. ಅಸತ್ಯವನ್ನು ಸರಿ ಎಂದು ಸಾಬೀತುಪಡಿಸಲು ಬಯಸುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಅಫ್ಘಾನ್ ವೇಗಿ ಎರಡು ವಾರಗಳ ಹಿಂದೆ ತಾನು ಯಾರಿಗೂ ಕ್ಷಮೆ ಹೇಳುವುದಿಲ್ಲ ಅಥವಾ ಕ್ಷಮೆ ಕೇಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ಭವಿಷ್ಯದಲ್ಲಿ ಅಂತಹ ಸಂದರ್ಭಗಳು ಎದುರಾದರೆ, ಅವರ ಪ್ರತಿಕ್ರಿಯೆ ಮೊದಲಿನಂತೆಯೇ ಇರುತ್ತದೆ ಎಂದು ಅವರು ಬಿಬಿಸಿಗೆ ತಿಳಿಸಿದರು. ಮೇ 1, 2023 ರಂದು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಕೊಹ್ಲಿ ಮತ್ತು ನವೀನ್ ನಡುವೆ ವಾಗ್ವಾದ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com