ಯಜುವೇಂದ್ರ ಚಾಹಲ್
ಯಜುವೇಂದ್ರ ಚಾಹಲ್

ಆರ್ ಸಿಬಿ ತಂಡದಿಂದ ಕೈ ಬಿಡುವಾಗ ಒಂದೇ ಒಂದು ಮಾತು ಕೂಡ ಹೇಳಲಿಲ್ಲ: ಚಹಲ್ ಬೇಸರ

ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ತಮ್ಮನ್ನು ಕೈ ಬಿಡುವಾಗ ಒಂದೇ ಒಂದು ಕರೆಕೂಡ ಮಾಡಲಿಲ್ಲ ಎಂದು ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಬೇಸರ ವ್ಯಕ್ತಪಡಿಸಿದ್ದಾರೆ.
Published on

ನವದೆಹಲಿ: ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ತಮ್ಮನ್ನು ಕೈ ಬಿಡುವಾಗ ಒಂದೇ ಒಂದು ಕರೆಕೂಡ ಮಾಡಲಿಲ್ಲ ಎಂದು ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಚಹಲ್, 'ಆರ್‌ಸಿಬಿ ತಂಡಕ್ಕಾಗಿ ನಾನು 8 ವರ್ಷಗಳ ಕಾಲ ಪಂದ್ಯಗಳನ್ನು ಆಡಿದ್ದೆ. ಆದರೆ ತಂಡದಿಂದ ನನ್ನನ್ನು ಕೈ ಬಿಡುವಾಗ ಒಂದು ಫೋನ್ ಕರೆ ಕೂಡ ಮಾಡಿ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ನಾನು ಆರ್‌ಸಿಬಿಗಾಗಿ 114 ಪಂದ್ಯಗಳನ್ನು ಆಡಿದ್ದೆ. ಬೆಂಗಳೂರು ತಂಡ ನನ್ನ ಸಾಮರ್ಥ್ಯದ ಪ್ರದರ್ಶನಕ್ಕೆ ಅವಕಾಶ ನೀಡಿತು. ವಿರಾಟ್ ನನ್ನ ಮೇಲೆ ಬಹಳ ನಂಬಿಕೆ ಇಟ್ಟಿದ್ದರು. ನಮ್ಮ ತಂಡ ಕುಟುಂಬದಂತೆ ಇತ್ತು. ಅದರಿಂದ ಹೊರ ಹಾಕಿರುವುದು ಒಂದು ಕೆಟ್ಟ ಅನುಭವವಾಗಿದೆ. ಹರಾಜಿನಲ್ಲಿ ಹೇಗಾದರೂ ಮಾಡಿ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ ಕೈ ಬಿಟ್ಟಾಗ ಬಹಳ ನೋವಾಯಿತು. ಸಿಟ್ಟಿಗೆ ಸಹ ಕಾರಣವಾಯಿತು ಎಂದು ಚಹಲ್ ಹೇಳಿಕೊಂಡಿದ್ದಾರೆ.

ಐಪಿಎಲ್ 2023 ರಲ್ಲಿ ಆರ್‌ಸಿಬಿ ವಿರುದ್ಧ ನಾನು ಮೊದಲ ಪಂದ್ಯ ಆಡಿದಾಗ ಆರ್‌ಸಿಬಿ ಕೋಚ್‍ಗಳು ಸೇರಿದಂತೆ ಯಾರೊಂದಿಗೂ ಮಾತನಾಡಲಿಲ್ಲ. ನಿರಂತರವಾಗಿ ಸೋತರೂ ಆರ್‌ಸಿಬಿಯನ್ನು ಕೈಬಿಡದ ಅಭಿಮಾನಿಗಳಿಗಾಗಿ ನಾನು ಸೋತಿದ್ದೇನೆ. ಆರ್‌ಸಿಬಿ ಹಾಗೂ ನನಗೆ ವಿಶೇಷವಾದ ನಂಟಿದೆ. ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಚಹಲ್ ಹೇಳಿಕೊಂಡಿದ್ದಾರೆ.

ಐಪಿಎಲ್ (IPL) 2023ರ ಹರಾಜಿಗೂ ಮುನ್ನ ಪ್ರಕಟಿಸಿದ ಆಟಗಾರರ ಪಟ್ಟಿಯಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್‍ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿತ್ತು.  2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಾಹಲ್ ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com