2ನೇ ಟೆಸ್ಟ್: ವಿದೇಶದಲ್ಲಿ ಟೆಸ್ಟ್ ಶತಕದ ಬರ ನೀಗಿಸಿಕೊಂಡ ಕೊಹ್ಲಿ, 500ನೇ ಪಂದ್ಯದಲ್ಲಿ ಸಚಿನ್, ಲಾರಾ ದಾಖಲೆ ಪತನ

ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ವಿದೇಶದಲ್ಲಿ ಟೆಸ್ಟ್ ಶತಕದ ಬರ ನೀಗಿಸಿಕೊಂಡಿದ್ದು, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ತಮ್ಮ500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಶತಕ
ವಿರಾಟ್ ಕೊಹ್ಲಿ ಶತಕ
Updated on

ಪೋರ್ಟ್ ಆಫ್ ಸ್ಪೇನ್: ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ವಿದೇಶದಲ್ಲಿ ಟೆಸ್ಟ್ ಶತಕದ ಬರ ನೀಗಿಸಿಕೊಂಡಿದ್ದು, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ತಮ್ಮ500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವಣ ನೂರನೇ ಪಂದ್ಯವೂ ಆಗಿರುವ ಪಂದ್ಯದಲ್ಲಿ ಕೊಹ್ಲಿ 121ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿಗೆ ಇದು 29ನೇ ಅಂತಾರಾಷ್ಟ್ರೀಯ ಟೆಸ್ಟ್ ಶತಕವಾಗಿದ್ದು ಆ ಮೂಲಕ ಕೊಹ್ಲಿ ದೀರ್ಘ ಕಾಲದ ವಿದೇಶಿ ನೆಲದಲ್ಲಿ ಟೆಸ್ಟ್ ಶತಕದ ಬರ ನೀಗಿಸಿಕೊಂಡಿದ್ದಾರೆ. 2018 ರ ಡಿಸೆಂಬರ್ ನಂತರ ವಿದೇಶದಲ್ಲಿ ಕೊಹ್ಲಿ ಈ ವರೆಗೂ ಟೆಸ್ಟ್ ಶತಕ ಸಿಡಿಸಿರಲಿಲ್ಲ.  

ಸಚಿನ್ ತೆಂಡೂಲ್ಕರ್-ಲಾರಾ ದಾಖಲೆ ಪತನ
ಅಂತೆಯೇ ಇದು ವಿರಾಟ್ ಕೊಹ್ಲಿ ಅವರ 76ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ಈ ಮೂಲಕ 500 ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಭಾರತ ತಂಡದ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಈ ಹಿಂದೆ ಈ ಸ್ಥಾನದಲ್ಲಿ ಭಾರತದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಇದ್ದರು. ಸಚಿನ್ ತಮ್ಮ ಮೊದಲ 500 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 75 ಅಂತರಾಷ್ಟ್ರೀಯ ಶತಕಗಳನ್ನು ಹೊಂದಿದ್ದರು. ಆದರೆ ಕೊಹ್ಲಿ 76ನೇ ಶತಕ ಸಿಡಿಸುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

ಲಾರಾ ದಾಖಲೆಯೂ ಪತನ
ಇನ್ನು ಇದೇ ಪಂದ್ಯದಲ್ಲಿ ಕೊಹ್ಲಿ ವೆಸ್ಟ್ ಇಂಡೀಸ್ ನ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಅವರ ದಾಖಲೆಯನ್ನೂ ಮುರಿದಿದ್ದು, 4ನೇ ಕ್ರಮಾಂಕದಲ್ಲಿ ಅತೀ ಹೆಚ್ಚು ಶತಕ ಸಿಡಿಸಿರುವ ಬ್ಯಾಟರ್ ಗಳ ಪಟ್ಟಿಯಲ್ಲಿ ಲಾರಾ ಅವರ ದಾಖಲೆಯನ್ನು ಮುರಿದು 4ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಬ್ರಿಯಾನ್ ಲಾರಾ 24 ಶತಕ ಸಿಡಿಸಿದ್ದು, ಅವರು ಇದೀಗ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. 25 ಶತಕ ಸಿಡಿಸಿರುವ ಕೊಹ್ಲಿ 4ನೇ ಸ್ಥಾನಕ್ಕೇರಿದ್ದು, ಈ ಪಟ್ಟಿಯಲ್ಲಿ 44 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, 35 ಶತಕ ಸಿಡಿಸಿರುವ ಜಾಕಾಲಿಸ್ 2ನೇ ಸ್ಥಾನದಲ್ಲಿದ್ದಾರೆ. 30 ಶತಕಗಳೊಂದಿಗೆ ಶ್ರೀಲಂಕಾದ ಮಹೇಲಾ ಜಯವರ್ಧನೆ 3ನೇ ಸ್ಥಾನದಲ್ಲಿದ್ದಾರೆ. 

Most hundreds at No.4 in Tests
44 - Sachin Tendulkar
35 - Jacques Kallis
30 - Mahela Jayawardene
25 - Virat Kohli
24 - Brian Lara

500ನೇ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಕೊಹ್ಲಿ
ಅಂತೆಯೇ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದು, ಕೊಹ್ಲಿ ಈಗ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ವಿಂಡೀಸ್ ವಿರುದ್ಧ ಒಟ್ಟು 12 ಶತಕಗಳನ್ನು ಸಿಡಿಸಿದ್ದು, ದಕ್ಷಿಣ ಆಫ್ರಿಕಾದ ಜಾಕಾಲಿಸ್ ಕೂಡ 12 ಶತತಗಳನ್ನು ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ. ಅಗ್ರ ಸ್ಥಾನದಲ್ಲಿ ಭಾರತ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಇದ್ದು, ಅವರು 13 ಶತಕಗಳನ್ನು ಸಿಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com