ಇಂಡಿಯಾ ನರಕಕ್ಕೆ ಹೋಗಲಿ: ಭಾರತ ಪ್ರವಾಸ ಮಾಡದಂತೆ ಪಾಕ್ ಕ್ರಿಕೆಟ್ ತಂಡಕ್ಕೆ ಜಾವೆದ್ ಮಿಯಾಂದಾದ್ ಸಲಹೆ!

2023ರ ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದಕ್ಕಾಗಿ ಬಿಸಿಸಿಐ ವಿರುದ್ಧ ಪಾಕಿಸ್ತಾನದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಾವೆದ್ ಮಿಯಾಂದಾದ್
ಜಾವೆದ್ ಮಿಯಾಂದಾದ್

2023ರ ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದಕ್ಕಾಗಿ ಬಿಸಿಸಿಐ ವಿರುದ್ಧ ಪಾಕಿಸ್ತಾನದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನಕ್ಕೆ ಕ್ರಿಕೆಟ್ ಆಡಲು ಬರದಿದ್ದಕ್ಕಾಗಿ ಮಿಯಾಂದಾದ್ ಭಾರತದ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಿಯಾಂದಾದ್, 2012 ಮತ್ತು 2016ರಲ್ಲಿ ಪಾಕಿಸ್ತಾನಕ್ಕೆ ಭಾರತಕ್ಕೆ ಹೋಗಿತ್ತು. ಈಗ ಬರುವ ಸರದಿ ಭಾರತದ್ದು, ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದರೆ ಪಾಕಿಸ್ತಾನ ತಂಡ ಯಾವತ್ತು ಭಾರತಕ್ಕೆ ಹೋಗುವುದಿಲ್ಲ, ವಿಶ್ವಕಪ್​​ಗಾಗಿಯೂ ಪ್ರಯಾಣಿಸುವುದಿಲ್ಲ. ನಾವು ಯಾವಾಗಲೂ ಭಾರತದೊಂದಿಗೆ ಆಡಲು ಸಿದ್ಧರಿದ್ದೇವೆ. ಆದರೆ ಅವರು ಎಂದಿಗೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ ಎಂದು ಜಾವೆದ್ ಮಿಯಾಂದಾದ್ ತಿಳಿಸಿದ್ದಾರೆ.

ವಾಸ್ತವವಾಗಿ, ಎಸಿಸಿ (ಏಷ್ಯಾ ಕ್ರಿಕೆಟ್ ಕೌನ್ಸಿಲ್) ಏಷ್ಯಾ ಕಪ್‌ಗಾಗಿ 'ಹೈಬ್ರಿಡ್ ಮಾದರಿ'ಯನ್ನು ಅನುಮೋದಿಸಿತ್ತು. ಅದರ ಪ್ರಕಾರ ಭಾರತವು ಏಷ್ಯಾ ಕಪ್‌ನಲ್ಲಿ ಶ್ರೀಲಂಕಾದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಲಿದೆ. ಈ ಪ್ರಸ್ತಾಪದಿಂದ ಮಿಯಾಂದಾದ್‌ಗೆ ಖುಷಿ ಆಗಿಲ್ಲ. ಭಾರತ ಕ್ರಿಕೆಟ್ ತಂಡ ಸರಣಿ ಆಡಲು ಬರುವವರೆಗೆ ಪಾಕಿಸ್ತಾನವೂ ಭಾರತ ಭೇಟಿಯನ್ನು ಬಹಿಷ್ಕರಿಸಬೇಕು ಎಂದು ಮಿಯಾಂದಾದ್ ಒತ್ತಾಯಿಸಿದ್ದಾರೆ.

ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಬರಲಿದೆ ಪಾಕಿಸ್ತಾನ ತಂಡ
ಭಾರತ-ಪಾಕಿಸ್ತಾನ ನಡುವಿನ ನಾಟಕ ಕೇವಲ ಏಷ್ಯಾಕಪ್‌ಗೆ ಸೀಮಿತವಾಗಿಲ್ಲ. ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆಯ ಬಗ್ಗೆ ಸಾಕಷ್ಟು ವಿರೋಧ ಎದ್ದಿತ್ತು. ಆದರೆ, ಐಸಿಸಿ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಕರಡು ವೇಶಾಪಟ್ಟಿಯ ಪ್ರಕಾರ  ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು ಈ ಸರಣಿಗೆ ಹೋಗಬಾರದು ಎಂದು ಮಿಯಾಂದಾದ್ ಹೇಳಿದ್ದಾರೆ. 

ಮಿಯಾಂದಾದ್, ನಾನು ಯಾವಾಗಲೂ ಹೇಳುತ್ತೇನೆ. ಒಬ್ಬರ ನೆರೆಹೊರೆಯವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪರಸ್ಪರ ಸಹಕರಿಸುವುದು ಉತ್ತಮ ಮತ್ತು ಕ್ರಿಕೆಟ್ ಜನರನ್ನು ಪರಸ್ಪರ ಹತ್ತಿರ ತರುವ ಆಟ ಎಂದು ನಾನು ಯಾವಾಗಲೂ ಹೇಳುತ್ತೇನೆ. ಇದು ದೇಶಗಳ ನಡುವಿನ ತಪ್ಪು ತಿಳುವಳಿಕೆ ಮತ್ತು ಕುಂದುಕೊರತೆಗಳನ್ನು ಹೋಗಲಾಡಿಸಬಹುದು. ಆದರೆ, ಅವರು ತಮ್ಮ ತಂಡವನ್ನು ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ, ಆದ್ದರಿಂದ ನಾವು ಕಠಿಣ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ ಎಂದರು.

ಭಾರತವು ಕೊನೆಯದಾಗಿ 2008ರಲ್ಲಿ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಿತ್ತು. 2008ರ ಮುಂಬೈ ದಾಳಿಯ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಡಲು ಪ್ರಾರಂಭಿಸಿದವು. ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿಯು 2012-2013ರಲ್ಲಿ ನಡೆದಿತ್ತು. ಡಿಸೆಂಬರ್-ಜನವರಿಯಲ್ಲಿ ಮೂರು ODI ಸರಣಿಗಾಗಿ ಪಾಕಿಸ್ತಾನ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com