ವೆಸ್ಟ್ ಇಂಡೀಸ್ ಸರಣಿ ನಂತರ ಐರ್ಲೆಂಡ್ ಪ್ರವಾಸ; ಟೀಂ ಇಂಡಿಯಾ ವೇಳಾಪಟ್ಟಿ ಪ್ರಕಟ!

ವೆಸ್ಟ್ ಇಂಡೀಸ್ ಪ್ರವಾಸದ ನಂತರ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವೆಸ್ಟ್ ಇಂಡೀಸ್ ಪ್ರವಾಸದ ನಂತರ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಈ ಸಂಪೂರ್ಣ ಸರಣಿಯನ್ನು ಡಬ್ಲಿನ್ ಬಳಿಯ ಮಲಾಹೈಡ್‌ನಲ್ಲಿ ಆಡಲಾಗುತ್ತದೆ. ಕ್ರಿಕೆಟ್ ಐರ್ಲೆಂಡ್ ಈ ಪ್ರವಾಸದ ಬಗ್ಗೆ ಖಚಿತಪಡಿಸಿದೆ. ಟೀಂ ಇಂಡಿಯಾ ಐರ್ಲೆಂಡ್‌ನಲ್ಲಿ ಟಿ20 ಸರಣಿಗೆ ತೆರಳುತ್ತಿರುವುದು ಇದು ಸತತ ಎರಡನೇ ಬಾರಿ. ಇದಕ್ಕೂ ಮುನ್ನ ಭಾರತ ತಂಡ 2022ರ ಜೂನ್‌ನಲ್ಲಿ ಈ ದೇಶದ ವಿರುದ್ಧ ಟಿ20 ಸರಣಿಯನ್ನು ಆಡಿತ್ತು. ಆ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆದ್ದಿತ್ತು. ಈ ಬಾರಿಯೂ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಆಡಲಿದೆ ಎಂದು ನಂಬಲಾಗಿದೆ.

ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸವು ಆಗಸ್ಟ್ 13ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಟೀಂ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್ ನಿಂದಲೇ ಐರ್ಲೆಂಡ್ ಗೆ ತೆರಳಲಿದ್ದಾರೆ. 12 ತಿಂಗಳಲ್ಲಿ ಎರಡನೇ ಬಾರಿಗೆ ಟೀಂ ಇಂಡಿಯಾವನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ಕ್ರಿಕೆಟ್ ಐರ್ಲೆಂಡ್ ಸಿಇಒ ವಾರೆನ್ ಡ್ಯುಟ್ರೋಮ್ ಹೇಳಿದ್ದಾರೆ. 2022ರಲ್ಲಿ ನಾವು ಎರಡು ಬಾರಿ ತುಂಬಿದ ಮೈದಾನಗಳನ್ನು ನೋಡಿದ್ದೇವೆ. ಈ ಬಾರಿ ಮೂರು ಪಂದ್ಯಗಳ ಸರಣಿಯನ್ನು ಅಭಿಮಾನಿಗಳು ಆನಂದಿಸಲಿದ್ದಾರೆ.

ಬಿಸಿಸಿಐಗೆ ಕೃತಜ್ಞತೆ
ಇದಕ್ಕಾಗಿ ನಾವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಧನ್ಯವಾದ ಹೇಳುತ್ತೇವೆ ಎಂದರು. ಅವರು ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ನಮ್ಮ ದೇಶವನ್ನು ಸೇರಿಸಿದರು. ಶುಕ್ರವಾರ, ಭಾನುವಾರ ಮತ್ತು ಬುಧವಾರ ಈ ಪಂದ್ಯಗಳು ನಡೆಯಲಿದ್ದು, ಹೆಚ್ಚಿನ ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಿಸಲು ಆಗಮಿಸಲಿದ್ದಾರೆ.

ಭಾರತ vs ಐರ್ಲೆಂಡ್ ಟಿ20 ಸರಣಿ ವೇಳಾಪಟ್ಟಿ
* 18 ಆಗಸ್ಟ್ - ಮೊದಲ ಟಿ20
* 20 ಆಗಸ್ಟ್ - ಎರಡನೇ ಟಿ20
* 23 ಆಗಸ್ಟ್ - ಮೂರನೇ ಟಿ20
(ಎಲ್ಲಾ ಪಂದ್ಯಗಳನ್ನು 3:00 PM IST ನಿಂದ ಮಲಾಹೈಡ್‌ನಲ್ಲಿ ನಡೆಯುತ್ತದೆ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com