ಡಬ್ಲ್ಯುಪಿಎಲ್: ಮುಂಬೈ ಮಾರಕ ಬೌಲಿಂಗ್ ಗೆ ಡೆಲ್ಲಿ ಶರಣು

ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಮುಂಬೈ ತಂಡದ ಮಾರಕ ಬೌಲಿಂಗ್ ಗೆ ಡೆಲ್ಲಿ ತಂಡ ಸೋತು ಶರಣಾಗಿದೆ. 
ಡಬ್ಲ್ಯುಪಿಎಲ್ ನಲ್ಲಿ ಮುಂಬೈ ತಂಡ
ಡಬ್ಲ್ಯುಪಿಎಲ್ ನಲ್ಲಿ ಮುಂಬೈ ತಂಡ

ಮುಂಬೈ: ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಮುಂಬೈ ತಂಡದ ಮಾರಕ ಬೌಲಿಂಗ್ ಗೆ ಡೆಲ್ಲಿ ತಂಡ ಸೋತು ಶರಣಾಗಿದೆ. 

ಟಾಸ್ ಗೆದ್ದ ಡೆಲ್ಲಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 18 ಓವರ್ ಗಳಲ್ಲಿ 105 ರನ್ ಗಳಿಸಿ ಸರ್ವಪತನ ಕಂಡಿತು. ಸರಳ ರನ್ ಗುರಿ ಬೆನ್ನತ್ತಿದ ಮುಂಬೈ ತಂಡ ಇನ್ನೂ 5 ಓವರ್ ಗಳು ಬಾಕಿ ಇರುವಾಗ 2 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ ಜಯ ತನ್ನದಾಗಿಸಿಕೊಂಡಿತು. 

ಮುಂಬೈ ತಂಡದ ಪರ ಬೌಲರ್ ಸೈಕಾ ಇಷಾಕ್, ಹೇಯ್ಲಿ ಮ್ಯಾಥ್ಯೂಸ್ ಹಾಗೂ ಐಸಿ ವಾಂಗ್ ತಲಾ 3 ವಿಕೆಟ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಟಿಂಗ್ ವಿಭಾಗದಲ್ಲಿ ಮುಂಬೈ ತಂಡದ ಪರ ಆರಂಭಿಕ ಆಟಗಾರರಾದ ಯಷ್ಟಿಕಾ ಭಾಟಿಯಾ 31 ಎಸೆತಗಳಲ್ಲಿ 41 ರನ್ ಹಾಗೂ ಹೇಯ್ಲಿ ಮ್ಯಾಥ್ಯೂಸ್ (31 ಎಸೆತಗಳಲ್ಲಿ 32 ರನ್) ಮೂಲಕ ಮೊದಲ ವಿಕೆಟ್ ಜೊತೆಯಾಟದಲ್ಲಿ 65 ರನ್ ಗಳಿಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. 

ಡೆಲ್ಲಿ ತಂಡಪರ ನಾಯಕಿ ಮೆಗ್ ಲ್ಯಾನಿಂಗ್ 41 ಎಸೆತಗಳಲ್ಲಿ 43 ರನ್ ಗಳಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಜೆಮಿಯಾ ರಾಡ್ರಿಗಸ್ 18 ಎಸೆತಗಳಲ್ಲಿ 25 ರನ್ ಗಳಿಸಿದರು. ಉಳಿದ ಆಟಗಾರ್ತಿಯರು ಮುಂಬೈ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com