ಬಾರ್ಡರ್ ಗವಾಸ್ಕರ್ ಟ್ರೋಫಿ: 2,000 ರನ್ ಪೂರೈಸಿದ ಚೇತೇಶ್ವರ ಪೂಜಾರ!

ಬಾರ್ಡರ್- ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ 2,000 ರನ್ ಪೂರೈಸಿದ ಖ್ಯಾತಿಗೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಚೇತೇಶ್ವರ ಪೂಜಾರ ಪಾತ್ರರಾಗಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ

ಅಹಮದಾಬಾದ್:  ಬಾರ್ಡರ್ - ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ  2,000 ರನ್ ಪೂರೈಸಿದ ಖ್ಯಾತಿಗೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಚೇತೇಶ್ವರ ಪೂಜಾರ ಪಾತ್ರರಾಗಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪೂಜಾರ ಶನಿವಾರ 2,000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ ನಾಲ್ಕನೇಯ ಮತ್ತು ಒಟ್ಟಾರೇ  ಆರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಮೊದಲ ಇನ್ನಿಂಗ್ಸ್ ನಲ್ಲಿ 121 ಎಸೆತಗಳಲ್ಲಿ 42 ರನ್ ಗಳಿಸಿದ ಪೂಜಾರ, ಮದಗಜಗಳ ನಡುವಿನ ಪ್ರತಿಷ್ಠಿತ ಸರಣಿಯಲ್ಲಿ 2,000 ರನ್ ಪೂರೈಸಿದ ಆಟಗಾರ ಎನಿಸಿಕೊಂಡರು. ಪ್ರಸ್ತುತ ಪೂಜಾರ 24 ಪಂದ್ಯಗಳಲ್ಲಿ 50.82 ರ ಸರಾಸರಿಯಲ್ಲಿ 2,033 ರನ್ ಗಳಿಸಿದ್ದಾರೆ. ಒಟ್ಟಾರೇ  ಬಾರ್ಡರ್- ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಐದು ಶತಕಗಳು ಮತ್ತು 11 ಅರ್ಧ ಶತಕ ಗಳಿಸಿದ್ದಾರೆ.  ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 204 ಆಗಿದೆ.

ಸರಣಿಯಲ್ಲಿ 2,000 ರನ್ ಗಳಿಸಿದ ಏಕೈಕ ಆಟಗಾರ ಪೂಜಾರ ಆಗಿದ್ದಾರೆ. ಸ್ಟೀವ್ ಸ್ಮೀತ್ 1,877 ಮತ್ತು ವಿರಾಟ್ ಕೊಹ್ಲಿ 1,852 ರನ್ ಗಳಿಸುವ ಮೂಲಕ ಪೂಜಾರ ಅವರ ಸಮೀಪದ ಎದುರಾಳಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com