4ನೇ ಟೆಸ್ಟ್: 5 ಇನ್ನಿಂಗ್ಸ್ ನಲ್ಲಿ 4ನೇ ಬಾರಿಗೆ ನಥನ್ ಲಯಾನ್ ಗೆ ವಿಕೆಟ್ ಒಪ್ಪಿಸಿದ ಭರತ್, ವಿಚಿತ್ರ ದಾಖಲೆ ಬರೆದ ಆಸಿಸ್ ಸ್ಪಿನ್ನರ್

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಕೆಎಸ್ ಭರತ್ ವಿಚಿತ್ರ ದಾಖಲೆ ಬರೆದಿದ್ದು, 5 ಇನ್ನಿಂಗ್ಸ್ ನಲ್ಲಿ 4ನೇ ಬಾರಿಗೆ ಒಂದೇ ಬೌಲರ್ ಗೆ ವಿಕೆಟ್ ಒಪ್ಪಿಸಿದ್ದಾರೆ.
ಕೆಎಸ್ ಭರತ್ ವಿಕೆಟ್ ಪಡೆದ ಲಯಾನ್
ಕೆಎಸ್ ಭರತ್ ವಿಕೆಟ್ ಪಡೆದ ಲಯಾನ್

ಅಹ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಕೆಎಸ್ ಭರತ್ ವಿಚಿತ್ರ ದಾಖಲೆ ಬರೆದಿದ್ದು, 5 ಇನ್ನಿಂಗ್ಸ್ ನಲ್ಲಿ 4ನೇ ಬಾರಿಗೆ ಒಂದೇ ಬೌಲರ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ಹೌದು.. ಹಾಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಶ್ರೀಕಾರ್ ಭರತ್ ಮೊದಲ ಇನ್ನಿಂಗ್ಸ್ ನಲ್ಲಿ ಮತ್ತೆ ಆಸ್ಟ್ರೇಲಿಯಾದ ಬೌಲರ್ ನಾಥನ್ ಲಯಾನ್ ವಿಕೆಟ್ ಒಪ್ಪಿಸಿದ್ದಾರೆ. ಸರಣಿಯಲ್ಲಿ ಅವರು 5 ಇನ್ನಿಂಗ್ಸ್ ನಲ್ಲಿ 4ನೇ ಬಾರಿಗೆ ಲಯಾನ್ ವಿಕೆಟ್ ಒಪ್ಪಿಸಿದ್ದಾರೆ.

ಇನ್ನು ಈ ಸರಣಿಯಲ್ಲಿ ನಾಥನ್ ಲಯಾನ್ ಬೌಲಿಂಗ್ ನಲ್ಲಿ ಭರತ್ ಒಟ್ಟು 5 ಇನ್ನಿಂಗ್ಸ್ ನಿಂದ 65 ಎಸೆತೆಗಳನ್ನು ಎದುರಿಸಿದ್ದು, 34 ರನ್ ಗಳಿಸಿದ್ದಾರೆ. ಅಂತೆಯೇ 4 ಬಾರಿ ಔಟಾಗಿದ್ದಾರೆ.

STAT: KS Bharat vs Lyon
5 inngs
34 runs
65 balls
4 dismissals

ಅತಿಥೇಯ ತಂಡದ ವಿರುದ್ಧ ನಾಥನ್ ಲಯಾನ್ ದಾಖಲೆ
ಇನ್ನು ಆಸಿಸ್ ಬೌಲರ್ ನಾಥನ್ ಲಯಾನ್ ಇದೇ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಭಾರತ ಪ್ರವಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವಿದೇಶಿ ಬೌಲರ್ ಎಂಬ ಕೀರ್ತಿಗೆ ಲಯಾನ್ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಭಾರತದ 2 ವಿಕೆಟ್ ಪಡೆಯುವ ಮೂಲಕ ಈ ದಾಖಲೆ ನಿರ್ಮಿಸಿದ್ದು, ಭಾರತ ಪ್ರವಾಸದಲ್ಲಿ ಅವರು ಒಟ್ಟು 55 ವಿಕೆಟ್ ಗಳನ್ನು ಗಳಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.

STAT: Most wickets by a visiting bowler in India
55 N Lyon
54 D Underwood
52 R Benaud
43 C Walsh
40 M Muralitharan

ಆ ಮೂಲಕ ಭಾರತ ಪ್ರವಾಸದಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ವಿದೇಶಿ ಬೌಲರ್ ಗಳ ಪಟ್ಟಿಯಲ್ಲಿ ಲಯಾನ್ ಅಗ್ರ ಸ್ಥಾನಕ್ಕೇರಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ 54 ವಿಕೆಟ್ ಗಳಿಸಿರುವ ಡಿ ಅಂಡರ್ ವುಡ್ 2ನೇ ಸ್ಥಾನದಲ್ಲಿದ್ದು, ಆರ್ ಬೆನಾಡ್ 52 ವಿಕೆಟ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಅಂತೆಯೇ ಕರ್ಟ್ನಿ ವಾಲ್ಶ್ 43 ವಿಕೆಟ್ ಗಳಿಂದ 4ನೇ ಸ್ಥಾನದಲ್ಲಿದ್ದು, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 40 ವಿಕೆಟ್ ಕಬಳಿಸಿದ್ದು 5ನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com